ಮ್ಯಾಂಚಸ್ಟರ್: ವಯಸ್ಸಾಗುತ್ತಿದ್ದಂತೆ ಕಣ್ಣಿನ ದೃಷ್ಟಿ ಕಡಿಮೆಯಾಗುವುದು ಜೀವನದ ಒಂದು ಭಾಗವಿದ್ದಂತೆ. 50 ವರ್ಷ ಪ್ರಾಯಕ್ಕೆ ತಲುಪುತ್ತಿದ್ದಂತೆ ಹೆಚ್ಚಿನ ಜನರು ಪುಸ್ತಕ ಓದಲು, ಮೆನು ವೀಕ್ಷಿಸಲು ಕನ್ನಡಕ ಬಳಸುವುದು ಸಾಮಾನ್ಯವಾಗಿದೆ. ವಯಸ್ಕರಲ್ಲಿ ಈ ದೃಷ್ಟಿ ಕಡಿಮೆಯಾಗುವುದನ್ನು ತಡೆಯಲು ಹಾಗೂ ದೃಷ್ಟಿಯನ್ನು ವೃದ್ಧಿಸಲು ಲೀಡ್ಸ್ ಹಾಗೂ ಮ್ಯಾಂಚಸ್ಟರ್ ವಿಶ್ವವಿದ್ಯಾಲಯಗಳ ದೇವೇಶ್ ಮಿಸ್ತ್ರಿ ಕೃತಕ ಲೆನ್ಸ್ ಒಂದನ್ನು ಅಭಿವೃದ್ಧಿಪಡಿಸಲು ಮುಂದಾಗಿದ್ದಾನೆ.
ಪ್ರಸ್ತುತ ಟಿವಿ ಹಾಗೂ ಸ್ಮಾರ್ಟ್ಫೋನ್ಗಳ ಸ್ಕ್ರೀನ್ಗಳಿಗೆ ಬಳಸಲಾಗುತ್ತಿರುವ ಲಿಕ್ವಿಡ್ ಕ್ರಿಸ್ಟಲ್ ಎಂಬ ಸಾಮಾಗ್ರಿಯಿಂದ ಮಾಡಲ್ಪಟ್ಟ ಈ ಲೆನ್ಸ್ನ್ನು ನೇರ ಶಸ್ತ್ರ ಚಿಕಿತ್ಸಾ ವಿಧಾನದಲ್ಲಿ ಕಣ್ಣಿಗೆ ಕಸಿ ಮಾಡಲಾಗುತ್ತದೆ. ಕಣ್ಣಿಗೆ ತನ್ನಷ್ಟಕ್ಕೆ ಹೊಂದಿಕೊಳ್ಳುವ ಈ ಲೆನ್ಸ್ ಮುಂದಿನ ದಶಕದೊಳಗೆ ಅಭಿವೃದ್ಧಿಗೊಳಿಲಾಗುತ್ತಿದ್ದು, ಜನರಿಗೆ ಲಭ್ಯವಾಗಲಿದೆ. ವಯಸ್ಸಾದಂತೆ ದೂರದೃಷ್ಟಿತ್ವ ಹೆಚ್ಚಾಗುತ್ತದೆ. ಇದನ್ನು ಪ್ರಿಸೋಪಿಯಾ ಎಂದು ಕರೆಯಲಾಗುತ್ತದೆ. ಯುವಕರಲ್ಲಿ ಹತ್ತಿರದ ವಸ್ತುಗಳನ್ನು ನೋಡಲು ಕಣ್ಣಿನ ಸ್ನಾಯುಗಳು ಸೆಳೆಯಲ್ಪಡುತ್ತವೆ.
ದೂರದ ವಸ್ತುಗಳನ್ನು ನೋಡುತ್ತಿದ್ದಂತೆ ಕಣ್ಣಿನ ಸ್ನಾಯುಗಳು ವಿಶ್ರಮಿಸುತ್ತವೆ. 65ನೇ ವಯಸ್ಸಿಗೆ ಬರುತ್ತಿದ್ದಂತೆ ಈ ಸ್ನಾಯುಗಳ ಪೌಷ್ಟಿಕಾಂಶ ಕಡಿಮೆಯಾಗತೊಡುತ್ತಿದ್ದು, ಶಸ್ತ್ರಚಿಕಿತ್ಸೆಯ ಮೊರೆ ಹೋಗಬೇಕಾಗುವ ಸಾಧ್ಯತೆಗಳಿರುತ್ತವೆ.
ಅನಸ್ಥೇಶಿಯಾ ಮೂಲಕ ಕ್ಷೀಣಗೊಂಡ ಲೆನ್ಸ್ನ ಬದಲಿಗೆ ಲಿಕ್ವಿಡ್ ಕ್ರಿಸ್ಟಲ್ ಲೆನ್ಸ್ ಅಳವಡಿಸಲು ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಡಾಕ್ಟರೇಟ್ ಪದವಿ ಪೂರ್ಣಗೊಳಿಸುವಷ್ಟರಲ್ಲಿ ಮಿಸ್ತ್ರಿ ತನ್ನ ಪ್ರಯೋಗಾಲಯದಲ್ಲಿ ವಿವಿಧ ಲೆನ್ಸ್ಗಳನ್ನು ಪರೀಕ್ಷಿಸಿ ಕ್ರಿಸ್ಟಲ್ ಲೆನ್ಸ್ ಅಭಿವೃದ್ಧಿ ಪಡಿಸುವ ಗುರಿ ಹೊಂದಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.