ವಾಷಿಂಗ್ಟನ್: ಭಾರತದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ 2025ರ ವೇಳೆಗೆ ಜಗತ್ತಿನ ನಾಲ್ಕನೇ ಅತಿದೊಡ್ಡ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ಅಮೆರಿಕಾ ಮೂಲದ ವಿಚಾರ ವೇದಿಕೆಯೊಂದು ತಿಳಿಸಿದೆ.
ಪಾಕಿಸ್ಥಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಶರವೇಗದಲ್ಲಿ ವಿಸ್ತರಿಸಿಕೊಳ್ಳುತ್ತಿದೆ. ಅದರ ಬಳಿ ಈಗ 110ರಿಂದ 130ರವರೆಗೆ ಪರಮಾಣು ವಾರ್ಹೆಡ್ಸ್ಗಳಿವೆ. 2011ರಲ್ಲಿ ಇದರ ಸಂಖ್ಯೆ 90-110 ಆಗಿತ್ತು. 2025ರ ವೇಳೆಗೆ ಇದರ ಸಂಖ್ಯೆ 220-230ಕ್ಕೆ ಏರುವ ಸಾಧ್ಯತೆ ಇದೆ ಎಂದು ಅದು ಹೇಳಿದೆ.
ಭಾರತವನ್ನು ಎದುರಿಸುವ ಸಲುವಾಗಿ ಅದು 10 ಶಾರ್ಟ್ ಟರ್ಮ್ ಟ್ಯಾಕ್ಟಿಕಲ್ ನ್ಯೂಕ್ಲಿಯರ್ ವೆಪನ್ಗಳನ್ನು ಅಭಿವೃದ್ಧಿಪಡಿಸಿದೆ. ಇದು ಚಿಂತನಾತ್ಮಕ ಬೆಳೆವಣಿಗೆಯಾಗಿದೆ ಎಂದು ಅದು ಹೇಳಿದೆ.
ಇತ್ತೀಚಿಗಷ್ಟೇ ಪಾಕ್ನ ವಿದೇಶಾಂಗ ಕಾರ್ಯದರ್ಶಿಯವರು ಭಾರತವನ್ನು ಎದುರಿಸುವ ಸಲುವಾಗಿ ನಾವು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿರುವುದು ನಿಜ ಎಂದು ಒಪ್ಪಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.