
ನಾಗಾಲ್ಯಾಂಡ್ನಲ್ಲಿ ಕ್ರಿಶ್ಚಿಯನ್ ಧರ್ಮ ಹರಡಿದ್ದು ಯೇಸುವಿನ ಹೆಸರಿನಲ್ಲಿ ಅಲ್ಲ, ಲುಂಗ್ಕಿಟ್ಸುಂಗ್ಬಾ ದೇವರ ಹೆಸರಿನಲ್ಲಿ! ಅಲ್ಲಿ ಈಗ 88% ಕ್ರಿಶ್ಚಿಯನ್ ಜನಸಂಖ್ಯೆಯ ಇರಲು ಕಾರಣವಾಗಿದ್ದು ಯೇಸುವಲ್ಲ ಬದಲು ನಾಗಾಗಳ ದೇವರು ಲುಂಗ್ಕಿಟ್ಸುಂಗ್ಬಾ. ʼಲುಂಗ್ಕಿಟ್ಸುಂಗ್ಬಾ ನಮ್ಮೆಲ್ಲರನ್ನೂ ಸೃಷ್ಟಿಸಿದರುʼ ಎನ್ನುತ್ತಲೇ ಮಿಷನರಿಗಳು ನಾಗಾಗಳನ್ನು ಕ್ರೈಸ್ಥ ಮತಕ್ಕೆ ಮತಾಂತರಿಸಿದರು.
ನಾಗಾಲ್ಯಾಂಡ್ನಲ್ಲಿ ಕ್ರಿಶ್ಚಿಯನ್ ಮಿಷನರಿಗಳು ಮೊದಲು ಮತಾಂತರಗಳನ್ನು ನಡೆಸಿದಾಗ, ಯೇಸುಕ್ರಿಸ್ತನ ಹೆಸರನ್ನು ಉಲ್ಲೇಖಿಸಲೇ ಇಲ್ಲ. ನಾಗಾಗಳ ಸರ್ವೋಚ್ಚ ದೇವತೆ ಲುಂಗ್ಕಿಟ್ಸುಂಗ್ಬಾ ಹೆಸರಿನಲ್ಲಿ ಮತಾಂತರಗಳನ್ನು ಮಾಡಲಾಯಿತು.
ಚರ್ಚ್ ಅನ್ನು ಚರ್ಚ್ ಎನ್ನುವ ಬದಲು ʼಯೇಸುವಿನ ದೇವಾಲಯʼ ಎಂದರು, ಪಾದ್ರಿಯನ್ನು “ಪಾಪಾ ಜಿ” ಎಂದು ಕರೆಯಲಾಯಿತು. ಜಿಂಗಲ್ ಬೆಲ್ಸ್ “ಯೇಸು ದಿ ಬಲ್ಲೆ-ಬಲ್ಲೆ” ರೀತಿ ಆಯಿತು. ಇಂದು ಪಂಜಾಬ್ನಲ್ಲಿ ಏನು ನಡೆಯುತ್ತಿದೆಯೋ ಅದು 153 ವರ್ಷಗಳ ಹಿಂದೆ 1872 ರಲ್ಲಿ ನಾಗಾಲ್ಯಾಂಡ್ನಲ್ಲೂ ನಡೆದಿತ್ತು.
ಇಂದು ಮಿಷನರಿಗಳು ಸಾಂಸ್ಕೃತಿಕ ರೂಪಗಳಲ್ಲಿ ಸುತ್ತುವರೆದು ಪಂಜಾಬಿ ಸಮಾಜವನ್ನು ಪ್ರವೇಶಿಸಿದಂತೆಯೇ, ನಾಗಾಲ್ಯಾಂಡ್ನಲ್ಲಿ ಆರಂಭಿಕ ಮತಾಂತರಗಳು ನಡೆದಿದ್ದವು. ಸ್ಥಳೀಯ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಎಚ್ಚರಿಕೆಯಿಂದ ಉಳಿಸಿಕೊಂಡು ಅದನ್ನೇ ಧರ್ಮ ಪರಿವರ್ತನೆಯ ದಾಳವಾಗಿಸಲಾಯಿತು.
ಮೊದಲ ನಾಗಾ ಮತಾಂತರ ನಡೆದ ಒಂದೂವರೆ ಶತಮಾನದ ನಂತರ, 2011 ರ ಜನಗಣತಿಯು ನಾಗಾಲ್ಯಾಂಡ್ನ ಜನಸಂಖ್ಯೆಯ 88% ಜನರು ಕ್ರಿಶ್ಚಿಯನ್ನರು ಎಂದು ತೋರಿಸುತ್ತದೆ. 140 ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ, ಒಬ್ಬ ಕ್ರೈಸ್ತನಿದ್ದ ಜಾಗದಲ್ಲಿ ಇಂದು 1,739,651 ಕ್ರೈಸ್ಥರು ಇದ್ದಾರೆ.
“ಮೇರಾ ಯೇಸು ಯೇಸು” ಮೀಮ್ಗಳ ಪ್ರವಾಹದಲ್ಲಿ ಪಂಜಾಬ್ ಕ್ರಿಶ್ಚಿಯನ್ ಮತದತ್ತ ಹೊರಳುತ್ತಿರುವಾಗ ನಾಗಾಲ್ಯಾಂಡ್ ಕಥೆಯನ್ನು ಅರ್ಥಮಾಡಿಕೊಳ್ಳುವುದು ಅವಶ್ಯಕ.
1872 ರ ನವೆಂಬರ್ 10 ರಂದು, ಮೊದಲ ಒಂಬತ್ತು ಜನರನ್ನು ನಾಗಾಲ್ಯಾಂಡ್ನಲ್ಲಿ ಮತಾಂತರಿಸಲಾಯಿತು. ಅಮೇರಿಕನ್ ಮಿಷನರಿ ಎಡ್ವರ್ಡ್ ವಿಂಟರ್ ಕ್ಲಾರ್ಕ್ ಅವರ ಮೂಲಕ ಸ್ಥಳೀಯ ಕೊಳದಲ್ಲಿ ಬ್ಯಾಪ್ಟೈಜ್ ಮಾಡಲಾಯಿತು. ಆಗ ಅವರ ಬಳಿ ಬೈಬಲ್ ಇರಲಿಲ್ಲ ಮತ್ತು ಯೇಸುವಿನ ಹೆಸರನ್ನು ಕೂಡ ಉಲ್ಲೇಖಿಸಲಾಗಿರಲಿಲ್ಲ. ನಾಗಾ ದೇವರು ಲುಂಗ್ಕಿಟ್ಸುಂಗ್ಬಾ ಹೆಸರಿನಲ್ಲಿ ಸ್ತೋತ್ರವನ್ನು ಹಾಡಲಾಯಿತು. ಈ ತಂತ್ರವು ಉದ್ದೇಶಪೂರ್ವಕವಾಗಿತ್ತು: ಹೊಸದಾಗಿ ಮತಾಂತರಗೊಂಡವರು ಸಮಾಜದಿಂದ ದೂರವಾಗಬಾರದು ಅಥವಾ ಅವರ ಪದ್ಧತಿಗಳಿಂದ ದೂರವಾಗಬಾರದು ಎಂಬುದು.
ಈ ಯೋಜನೆ ಫಲಿಸಿತು. ನಲವತ್ತೆರಡು ದಿನಗಳ ನಂತರ, ಡಿಸೆಂಬರ್ 22, 1872 ರಂದು, ಹದಿನೈದು ನಾಗಾಗಳನ್ನು ಮತಾಂತರಿಸಲಾಯಿತು. ಅದೇ ದಿನ, ನಾಗಾಲ್ಯಾಂಡ್ನ ಮೊದಲ ಚರ್ಚ್ ಅನ್ನು ಸ್ಥಾಪಿಸಲಾಯಿತು. ಯುರೋಪಿಯನ್ ಶೈಲಿಯ ಕಟ್ಟಡವಲ್ಲ, ಅದು ಹುಲ್ಲಿನ ಗುಡಿಸಲು. ಹೀಗಾಗಿ ಅದು ನಾಗಾ ಜೀವನಕ್ಕೆ ವಿದೇಶಿಯಾಗಿ ಕಾಣಿಸಲಿಲ್ಲ.
ಈ ಮೊದಲು ಅಲ್ಲಿದ್ದ ಮಿಷನ್ ಕೇಂದ್ರವು ನಾಗಾಲ್ಯಾಂಡ್ನ ಮೊದಲ ಚರ್ಚ್ ಆಗಿ ರೂಪುಗೊಂಡಿತು.
ಕ್ರಿಶ್ಚಿಯನ್ ಮತವು ನಾಗಾಲ್ಯಾಂಡ್ನಲ್ಲಿ ಹರಡಿದರೂ, ಬೈಬಲ್ ಇನ್ನೂ ಬಂದಿರಲಿಲ್ಲ. ಇದು ಕೂಡ ಕಾರ್ಯತಂತ್ರದ ಯೋಜನೆಯೇ ಆಗಿತ್ತು. ಮಿಷನರಿಗಳು “ವಿದೇಶಿ” ಎಂದು ಭಾವಿಸುವ ಯಾವುದನ್ನೂ ಹೇರಲು ಬಯಸಲಿಲ್ಲ. ಬೈಬಲ್ 1892 ರಲ್ಲಿ ನಾಗಾ ಕೈಗೆಗಳಿಗೆ ಬಂತು ಅಂದರೆ ಮೊದಲ ಮತಾಂತರಗಳ ಇಪ್ಪತ್ತು ವರ್ಷಗಳ ನಂತರ. ಅದು ಕೂಡ ಅನುವಾದಿತ ನಾಗಾ ಭಾಷೆಗಳಲ್ಲಿ ಮಾತ್ರ ಲಭ್ಯವಾಯಿತು.
ನಾಗಾಲ್ಯಾಂಡ್ನಲ್ಲಿ ಕ್ರಿಶ್ಚಿಯನ್ ಮತ ಹರಡಿದ ನೈಜ ಕಥೆ ಪಾದ್ರಿ ಇ.ಡಬ್ಲ್ಯೂ. ಕ್ಲಾರ್ಕ್ ಅವರೊಂದಿಗೆ ಪ್ರಾರಂಭವಾಗುತ್ತದೆ. ಅವರು ಅಸ್ಸಾಂನ ಶಿವಸಾಗರ್ನಲ್ಲಿರುವ ಮುದ್ರಣಾಲಯದಲ್ಲಿ ಕೆಲಸವನ್ನು ಮೇಲ್ವಿಚಾರಣೆ ಮಾಡಲು ಬಂದಿದ್ದರು, ಆದರೆ ಮತಾಂತರ ಅವರ ಮುಖ್ಯ ಗುರಿಯಾಗಿತ್ತು. ಅವರ ಗುರಿಗಳು ನಾಗಾಗಳು.
ನಾಗ ವ್ಯಾಪಾರಿಗಳು ಬೆಟ್ಟಗಳಿಂದ ಅಸ್ಸಾಮಿ ಬಯಲು ಪ್ರದೇಶಗಳಿಗೆ ದೇವಾಲಯಗಳ ಬಳಿಯ ಮಾರುಕಟ್ಟೆಗಳಲ್ಲಿ ತಮ್ಮ ಸರಕುಗಳನ್ನು ಮಾರಾಟ ಮಾಡಲು ಬರುತ್ತಿದ್ದರು. ಆದರೆ ಅವರೊಂದಿಗೆ ಹೇಗೆ ಸಂವಹನ ನಡೆಸುವುದು? ಭಾಷೆ ಒಂದು ತಡೆಗೋಡೆಯಾಗಿತ್ತು. ಕ್ಲಾರ್ಕ್ ಸ್ಥಳೀಯ ಅಸ್ಸಾಮಿ ವ್ಯಕ್ತಿಯ ಸಹಾಯ ಪಡೆದರು.
ಕ್ಲಾರ್ಕ್ ಈಗಾಗಲೇ ಒಬ್ಬ ಅಸ್ಸಾಮಿ, ಗೋಧುಲ ಬರುವಾ ಜನಾಂಗದವನನ್ನು ಮತಾಂತರಿಸಿದ್ದರು – ಪರಿಣಾಮಕಾರಿಯಾಗಿ ಅವರನ್ನು ಮಧ್ಯವರ್ತಿಯನ್ನಾಗಿ ಪರಿವರ್ತಿಸಿದರು. ಬರುವಾ ಸ್ವತಃ ಶಿವಸಾಗರ್ನಲ್ಲಿರುವ ಶಿವ ಡೋಲ್ ದೇವಾಲಯದ ಕೊಳದಲ್ಲಿ ಬ್ಯಾಪ್ಟಿಸಂ ಪಡೆದರು. ನಂತರ ಬರುವಾ ಸುಪೋಂಗ್ಮೆರೆನ್ ಎಂಬ ನಾಗಾ ವ್ಯಕ್ತಿಯನ್ನು ಕ್ರೈಸ್ಥನಾಗಲು ಮನವೊಲಿಸಿದ. ಕ್ಲಾರ್ಕ್ ಅದೇ ಶಿವಸಾಗರ್ ಕೊಳದಲ್ಲಿ ಸುಪೋಂಗ್ಮೆರೆನ್ಗೆ ದೀಕ್ಷಾಸ್ನಾನ ಮಾಡಿಸಿ ಮತಾಂತರಿಸಿದ.
ನಾಗಾಲ್ಯಾಂಡ್ನಲ್ಲಿ ಕ್ಲಾರ್ಕ್ ಸಂಪೂರ್ಣ ಮತಾಂತರ ಆಟವನ್ನು ಆಡುವ ಸೇತುವೆಯಾದ. ಹಿಂದಿನ ಮಿಷನರಿಗಳು ನಾಗಾ ಸಮಾಜದ ಬಲವಾದ ಪ್ರತಿರೋಧದಿಂದಾಗಿ ಪದೇ ಪದೇ ವಿಫಲರಾಗಿದ್ದರು. ಹೀಗಾಗಿ ತಪ್ಪುಗಳಿಂದ ಕಲಿತ ಕ್ಲಾರ್ಕ್ ನಿಧಾನವಾಗಿ ಕೆಲಸ ಮಾಡಿದ, ಹಠಾತ್ ಬದಲಾವಣೆಗಳನ್ನು ತಪ್ಪಿಸಿದ ಮತ್ತು ಸಾಂಸ್ಕೃತಿಕ ಛಿದ್ರವನ್ನು ಪ್ರಚೋದಿಸದೆ ಮತಾಂತರಗಳನ್ನು ಮುಂದುವರೆಸಿದ. ಅವನು ಸ್ಥಳೀಯ ಮತಾಂತರಗಳನ್ನು ತಮ್ಮ ಮುದ್ರಣ ಅನುಭವದೊಂದಿಗೆ ಸಂಯೋಜಿಸಿದ ಮತ್ತು ಎರಡನ್ನೂ ಸಾಧನಗಳಾಗಿ ಪರಿವರ್ತಿಸಿದ.
ಮೊಲುಂಗ್ ಪ್ರಿಂಟಿಂಗ್ ಪ್ರೆಸ್: ನಾಗಾಲ್ಯಾಂಡ್ನಲ್ಲಿ ಕ್ರಿಶ್ಚಿಯನ್ ಮತದ ಆಯುಧ
“ದೇವರು ಲುಂಗ್ಕಿಟ್ಸುಂಗ್ಬಾ ನಮ್ಮೆಲ್ಲರನ್ನೂ ಸೃಷ್ಟಿಸಿದನು” ಈ ಸಾಲುಗಳ ಮೂಲಕ ಮತಾಂತರದ ಪಿತೂರಿ ಆರಂಭವಾಯಿತು. ಹೊಸ ನಾಗಾ ಕ್ರೈಸ್ತರಿಗಾಗಿ ಸ್ತುತಿಗೀತೆಗಳನ್ನು ಲುಂಗ್ಕಿಟ್ಸುಂಗ್ಬಾ ಹೆಸರಿನಲ್ಲಿ ಹಾಡಲಾಗುತ್ತಿತ್ತು ಎಂಬುದು ವಿಚಿತ್ರವಾದರೂ ಸತ್ಯ.
ಕ್ಲಾರ್ಕ್ ನಾಗಾಲ್ಯಾಂಡ್ನಲ್ಲಿ ಮೊಲುಂಗ್ ಪ್ರಿಂಟಿಂಗ್ ಪ್ರೆಸ್ ಅನ್ನು ಸ್ಥಾಪಿಸಿದ್ದು ಪ್ರಮುಖ ತಂತ್ರವಾಗಿತ್ತು ಮತ್ತು ಅದರ ಮುದ್ರಿತ ಪುಟಗಳ ಮೂಲಕ, ನಾಗಾ ಸಾಮಾಜಿಕ ರಚನೆ ಮತ್ತು ಸಂಸ್ಕೃತಿಯನ್ನು ಬಹುತೇಕ ಅಳಿಸಿಹಾಕಿತು. ಇದಕ್ಕೆ 88% ಕ್ರಿಶ್ಚಿಯನ್ ಜನಸಂಖ್ಯೆಯು ಪುರಾವೆಯಾಗಿ ನಿಂತಿದೆ.
ಮೊದಲ ಮತಾಂತರಗಳ ಹನ್ನೆರಡು ವರ್ಷಗಳ ನಂತರ, 1884 ರಲ್ಲಿ ಮೊಲುಂಗ್ ಪ್ರಿಂಟಿಂಗ್ ಪ್ರೆಸ್ ಅನ್ನು ಮೊಲುಂಗ್ಯಿಮ್ಸೆನ್ ಗ್ರಾಮದಲ್ಲಿ ಸ್ಥಾಪಿಸಲಾಯಿತು. ಅಲ್ಲಿಯವರೆಗೆ, ಎಲ್ಲವೂ ಲುಂಗ್ಕಿಟ್ಸುಂಗ್ಬಾ ಹೆಸರಿನಲ್ಲಿ ಮುಂದುವರೆಯಿತು – ಪ್ರಾರ್ಥನೆಗಳು, ಸ್ತೋತ್ರಗಳು, ಮತಾಂತರ ಪ್ರಕ್ರಿಯೆ ಕೂಡ. ಆಶ್ಚರ್ಯಕರವಾಗಿ, ಮೊದಲ ಪ್ರಕಟಣೆ ಕೂಡ ಬೈಬಲ್ ಆಗಿರಲಿಲ್ಲ.
1884 ರಲ್ಲಿಯೇ, ಯೇಸುವಿನ ಬೋಧನೆಗಳನ್ನು ಸ್ಥಳೀಯ ಆವೊ ಭಾಷೆಗೆ ಅನುವಾದಿಸಲಾಯಿತು. ನಾಲ್ಕು ವರ್ಷಗಳ ನಂತರ, ಅವು ಲೋಥಾ ಮತ್ತು ಅಂಗಮಿಯಲ್ಲಿ ಕಾಣಿಸಿಕೊಂಡವು. ಬೈಬಲ್ 1892 ರಲ್ಲಿ ಮಾತ್ರ ಬಂದಿತು, ಮತ್ತೆ ಸ್ಥಳೀಯ ಭಾಷೆಗಳಲ್ಲಿ ಬಂತು.
ಮೊಲುಂಗ್ ಅವರ ಪ್ರಕಟಣೆಗಳು ಎಂದಿಗೂ ನಾಗಾ ಅಭಿವೃದ್ಧಿಯ ಬಗ್ಗೆ ಯೋಚಿಸಿಲ್ಲ. ಹೊಸದಾಗಿ ಮತಾಂತರಗೊಂಡವರನ್ನು ಕ್ರಮೇಣ ಅವರ ಸಂಪ್ರದಾಯಗಳಿಂದ ಬೇರ್ಪಡಿಸುವುದು ಮತ್ತು ನಿಧಾನವಾಗಿ ಅವರನ್ನು ಕ್ರಿಶ್ಚಿಯನ್ ಮತಕ್ಕೆ ಸೇರಿಸುವುದು ಗುರಿಯಾಗಿತ್ತು. ಅಭಿವೃದ್ಧಿಯೇ ಗುರಿಯಾಗಿದ್ದರೆ, 88% ಕ್ರಿಶ್ಚಿಯನ್ನರನ್ನು ಹೊಂದಿರುವ ರಾಜ್ಯವು , NITI ಆಯೋಗ ದತ್ತಾಂಶವು ತೋರಿಸುವಂತೆ ನಿರುದ್ಯೋಗ, GDP ಮತ್ತು ತಲಾ ಆದಾಯದಲ್ಲಿ ಕೆಳಮಟ್ಟದಲ್ಲಿ ಸ್ಥಾನ ಪಡೆಯುತ್ತಿರಲಿಲ್ಲ.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ: ಲುಂಗ್ಕಿಟ್ಸುಂಗ್ಬಾ ಹೆಸರಿನಲ್ಲಿ ಜನರನ್ನು ಮತಾಂತರಿಸಿದ ಇಪ್ಪತ್ತು ವರ್ಷಗಳ ನಂತರವೂ, “ಯೇಸುಕ್ರಿಸ್ತ” ಎಂಬ ಪದವನ್ನು ಪರಿಚಯಿಸಲಾಗಿಲ್ಲ. ನಾಗಾಗಳು ಸಾಂಸ್ಕೃತಿಕವಾಗಿ ಕೃಷ್ಣ ಮತ್ತು ವಿಷ್ಣುವಿಗೆ ಹತ್ತಿರವಾಗಿರುವುದರಿಂದ ಅವರು ಯೇಸುಕ್ರಿಸ್ತನ ಬದಲಿಗೆ “ಇಶು ಕ್ರಿಸ್ತ” ನನ್ನು ಸೃಷ್ಟಿಸಿದರು.
ಏಷ್ಯಾದ ಅತಿದೊಡ್ಡ ಚರ್ಚ್
ಏಷ್ಯಾದ ಅತಿದೊಡ್ಡ ಚರ್ಚ್ ಎಲ್ಲಿದೆ ಎಂದು ನಿಮಗೆ ತಿಳಿದಿದೆಯೇ – ಮುಂಬೈ ಅಥವಾ ಮನಿಲಾ? ಹಾಂಗ್ ಕಾಂಗ್, ಕೇರಳ, ಬ್ಯಾಂಕಾಕ್? ಎಲ್ಲೂ ಇಲ್ಲ. ಅದು ಇರುವುದು ನಾಗಾಲ್ಯಾಂಡ್ನಲ್ಲಿ. ಹೌದು. ಅಭಿವೃದ್ಧಿ ಸೂಚಕಗಳಲ್ಲಿ ಕೆಳಮಟ್ಟದಲ್ಲಿರುವ ಅದೇ ರಾಜ್ಯಲ್ಲಿ ಜುನ್ಹೆಬೋಟೊದಲ್ಲಿ ಏಷ್ಯಾದ ಅತಿದೊಡ್ಡ ಚರ್ಚ್ ಇದೆ. ಅದುವೇ ಸುಮಿ ಬ್ಯಾಪ್ಟಿಸ್ಟ್ ಚರ್ಚ್.
ಓದುಗರೇ ಈಗ ನೀವೇ ಕಲ್ಪಿಸಿಕೊಳ್ಳಿ, ನಾಗಾಲ್ಯಾಂಡಿನಲ್ಲಿ ಮೊದಲ ಚರ್ಚ್ ಅನ್ನು ಹುಲ್ಲಿನ ಗುಡಿಸಲಿನಂತೆ ನಿರ್ಮಿಸಲಾಗಿತ್ತು, ಈಗ ಅಲ್ಲಿ ಏಷ್ಯಾದ ಅತಿದೊಡ್ಡ ಚರ್ಚ್ ಇದೆ. ಮಿಷನರಿಗಳು ನಾಗರಿಕತೆ ಮತ್ತು ಶಿಕ್ಷಣವನ್ನು ತರಲು ಬಂದಿದ್ದೇವೆ ಎಂದು ಹೇಳಿಕೊಂಡರು ಆದರೆ ನೀತಿ ಆಯೋಗವು ಇನ್ನೂ ನಾಗಾಲ್ಯಾಂಡ್ ಅಭಿವೃದ್ಧಿ ಹೊಂದಿಲ್ಲ ಎಂದು ಶ್ರೇಣೀಕರಿಸಿದೆ.
ಈ ಎಲ್ಲಾ ಅಂಶಗಳನ್ನು ಗಮನಿಸಿದರೆ ಕ್ರಿಶ್ಚಿಯನ್ ಮಿಷನರಿಗಳು ನಾಗಾಲ್ಯಾಂಡ್ಗೆ ಬಂದ ನಿಜವಾದ ಕಾರಣ ಸ್ಪಷ್ಟವಾಗುತ್ತದೆ ಮತ್ತು ಇಂದು ಪಂಜಾಬ್ನಲ್ಲಿ ಏನು ನಡೆಯುತ್ತಿದೆ, ಅದರಿಂದ ಭವಿಷ್ಯದ ಪಥ ಹೇಗಿರಬಹುದು ಎಂಬುದು ಕೂಡ ಸ್ಪಷ್ಟವಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


