
ನವದೆಹಲಿ: ಸೋಮನಾಥ ದೇವಾಲಯದ ಮೇಲೆ ದಾಳಿ ನಡೆದು 2026 ನೇ ವರ್ಷಕ್ಕೆ 1000 ವರ್ಷಗಳು ಪೂರೈಸಿವೆ. 1026ರ ಜನವರಿಯಲ್ಲಿ ಮಹಮದ್ ಘಜ್ನಿಯು ಈ ದೇವಾಲಯದ ಮೇಲೆ ಮೊದಲ ಬಾರಿಗೆ ದಾಳಿ ಮಾಡಿದ. ಇದೊಂದು ಕ್ರೂರ ಮತ್ತು ಅನಾಗರಿಕ ಆಕ್ರಮಣವಾಗಿತ್ತು, ದೇಗುಲದ ಅಪಾರ ಸಂಪತ್ತನ್ನು ಲೂಟಿ ಮಾಡಿದ್ದರ ಜೊತೆಗೆ ಭಾರತದ ನಂಬಿಕೆ ಮತ್ತು ನಾಗರಿಕತೆಯ ಮೇಲೆ ಮಾಡಿದ ಆಕ್ರಮಣವಾಗಿತ್ತು.
ಆದರೆ ಬರೋಬ್ಬರಿ 1000 ವರ್ಷಗಳ ನಂತರವೂ ಸೋಮನಾಥ ಭವ್ಯವಾಗಿ ಕಂಗೊಳಿಸುತ್ತಿದೆ. ಇಂದಿಗೂ ಅದು ಭಾರತದ ಸ್ವಾಭಿಮಾನದ ಸಂಕೇತವಾಗಿದೆ.
ಮೇ 11, 1951 ರಂದು ಭಾರತದ ಅಂದಿನ ರಾಷ್ಟ್ರಪತಿಗಳಾಗಿದ್ದ ಡಾ. ರಾಜೇಂದ್ರ ಪ್ರಸಾದ್ ಅವರ ಸಮ್ಮುಖದಲ್ಲಿ ಪುನರ್ ನಿರ್ಮಾಣಗೊಂಡ ಸೋಮನಾಥ ದೇಗುಲವನ್ನು ಉದ್ಘಾಟನೆಗೊಳಿಸಲಾಗಿತ್ತು.
ಇಂದು ಎಕ್ಸ್ ಪೋಸ್ಟ್ ಮಾಡಿರುವ ಪ್ರಧಾನಿಯವರು, “2026 ಕ್ಕೆ ಸೋಮನಾಥದ ಮೇಲೆ ಮೊದಲ ದಾಳಿ ನಡೆದು 1000 ವರ್ಷಗಳು ಪೂರ್ಣಗೊಳ್ಳುತ್ತವೆ. ತರುವಾಯ ಪದೇ ಪದೇ ದಾಳಿಗಳು ನಡೆದರೂ, ಸೋಮನಾಥ ದೃಢವಾಗಿ ನಿಂತಿದ್ದಾನೆ. ಏಕೆಂದರೆ ಸೋಮನಾಥನ ಕಥೆಯು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯನ್ನು ರಕ್ಷಿಸಿದ ಭಾರತ ಮಾತೆಯ ಅಸಂಖ್ಯಾತ ಮಕ್ಕಳ ಅವಿನಾಭಾವ ಧೈರ್ಯದ ಬಗ್ಗೆಯಾಗಿದೆ” ಎಂದಿದ್ದಾರೆ.
Jai Somnath!
2026 marks 1000 years since the first attack on Somnath took place. Despite repeated attacks subsequently, Somnath stands tall! This is because Somnath’s story is about the unbreakable courage of countless children of Bharat Mata who protected our culture and…
— Narendra Modi (@narendramodi) January 5, 2026
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



