ಬಾರ್ಪೇಟ: ಅಸ್ಸಾಂ ರಾಜ್ಯದ ಬಾರ್ಪೇಟ ಜಿಲ್ಲೆಯ ದೇವಾಲಯವೊಂದರ ಆವರಣದಲ್ಲಿ ದನದ ತಲೆಯನ್ನು ಕಡಿದು ಹಾಕಿರುವುದು ಕಂಡು ಬಂದಿದೆ. ಈ ಘಟನೆಯಿಂದ ಕೋಮು ಹಿಂಸಾಚಾರ ಭುಗಿಲೆದ್ದಿದ್ದು, ಬಿಜೆಪಿ ’ಬಂದ್’ ಗೆ ಕರೆ ನೀಡಿದ್ದು, ಈ ಕೃತ್ಯಕ್ಕೆ ಕಾರಣರಾದ ತಪ್ಪಿತಸ್ಥರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.
ಈ ನಡುವೆ ಬಾರ್ಪೇಟದಲ್ಲಿ ಬಂದ್ ಬೆಂಬಲಿಗರ ಮೇಲೆ ಕೆಲವು ವ್ಯಾಪಾರಸ್ಥರು ದಾಳಿ ನಡೆಸಿದ್ದು, ಹಲವು ಬಿಜೆಪಿ ನಾಯಕರು ಗಾಯಗೊಂಡಿರುವುದಾಗಿ ಮೂಲಗಳು ತಿಳಿಸಿವೆ. ಶಾಂತಿ ಕಾಪಾಡಲು ತಕ್ಷಣವೇ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಶಂಕಿತ ವ್ಯಕ್ತಿಗಳ ವಿರುದ್ಧ ಕೇಸು ದಾಖಲಿಸಲಾಗಿದ್ದು, ಕೃತ್ಯ ನಡೆಸಿದವರ ವಿರುದ್ಧ ತನಿಖೆ ನಡೆಸಲಾಗುವುದು ಎಂದು ಅಸ್ಸಾಂ ಡಿಜಿಪಿ ಪಲ್ಲಭ್ ಭಟ್ಟಾಚಾರ್ಯ ಹೇಳಿದಾರೆ.
ಈ ಸಂಬಂಧ 4 ಮಂದಿಯನ್ನು ಬಂಧಿಸಲಾಗಿದೆ. ಪ್ರತಿಪಕ್ಷ ಬಿಜೆಪಿಯ ಪ್ರತಿಷ್ಠೆ ಕುಗ್ಗಿಸಲು ಕೆಲ ಪಕ್ಷಗಳ ಕಾರ್ಯಕರ್ತರು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದಾರೆ. ಇದು ಅತ್ಯಂತ ಕಳಪೆ ರಾಜಕಾರಣವಾಗಿದ್ದು, ದೇಶದಲ್ಲಿ ಕೋಮು ಹಿಂಸಾಚಾರ ನಡೆಸುವುದು ಅದರ ಉದ್ದೇಶವಾಗಿದೆ ಎಂದು ಶಂಕಿಸಲಾಗಿದೆ.
ದಾದ್ರಿ ಪ್ರಕರಣ, ಹಿಮಾಚಲ ಪ್ರಕರಣ, ಅಸ್ಸಾಂನ ದೇವಾಲಯದಲ್ಲಿ ದನದ ತಲೆ ಕಡಿದು ಹಾಕಿರುವ ಪ್ರಕರಣಗಳಲ್ಲಿ ಕೆಲ ರಾಜಕೀಯ ಪಕ್ಷಗಳ ಕೈವಾಡವಿದ್ದು, ಈ ರಾಜ್ಯಗಳಲ್ಲಿ ಬಿಜೆಪಿ ಆಳ್ವಿಕೆಯನ್ನು ತೊಡೆದು ಹಾಕಲು ಇತರೆ ಪಕ್ಷಗಳು ಬಯಸಿದೆ ಎಂದು ಕೆಲವರು ಆರೋಪಿಸಿದ್ದಾರೆ. ಕಾಂಗ್ರೆಸ್ ಆಳ್ವಿಕೆಯ ಈ 3 ರಾಜ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರು ಚುರುಕುಗೊಂಡಿದ್ದು, ಜನ ಬಿಜೆಪಿಯತ್ತ ವಾಲುತ್ತಿದ್ದಾರೆ. ಹೀಗಾಗಿ ಇತರೆ ಪಕ್ಷದವರು ಹಿಂಸಾಚಾರ ನಡೆಸಲು ಮುಂದಾಗುತ್ತಿದ್ದಾರೆ ಎಂಬ ಆರೋಪವೂ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.