ಮುಂಬಯಿ: ಪಾಕಿಸ್ಥಾನಿಯರ ವಿರುದ್ಧದ ಹೋರಾಟವನ್ನು ಮುಂದುವರೆಸಿರುವ ಶಿವಸೇನೆ, ಪಾಕ್ನ ಸಿನಿಮಾ ನಟ-ನಟಿಯರನ್ನು ಮಹಾರಾಷ್ಟ್ರಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
ಪಾಕಿಸ್ಥಾನದ ನಟರನ್ನಾಗಲಿ, ಕ್ರಿಕೆಟಿಗರನ್ನಾಗಲಿ, ಕಲಾವಿದರನ್ನಾಗಲಿ ಮಹಾರಾಷ್ಟ್ರದ ನೆಲಕ್ಕೆ ಕಾಲಿಡಲು ಕಾಲಿಡಲು ಬಿಡುವುದಿಲ್ಲ, ಈ ಬಗ್ಗೆ ಕಠಿಣ ನಿಲುವನ್ನು ನಾವು ತಳೆದಿದ್ದೇವೆ ಎಂದು ಶಿವಸೇನೆಯ ಸಿನಿಮಾ ಘಟಕ ಚಿತ್ರಪಥ್ ಸೇನಾ ಹೇಳಿಕೊಂಡಿದೆ.
ಭಾರತದ ಚಿತ್ರದಲ್ಲಿ ನಟಿಸುತ್ತಿರುವ ಪಾಕ್ ನಟರಾದ ಫವಾದ್ ಖಾನ್, ಮಹಿರಾ ಖಾನ್ ಇವರುಗಳಿಗೆ ಮಹಾರಾಷ್ಟ್ರದಲ್ಲಿ ತಮ್ಮ ಸಿನಿಮಾಗಳನ್ನು ಪ್ರಮೋಟ್ ಮಾಡಲು ಬಿಡುವುದಿಲ್ಲ ಎಂದು ಅದು ಎಚ್ಚರಿಸಿದೆ.
ಈಗಾಗಲೇ ಶಿವಸೇನೆಯ ಪ್ರತಿಭಟನೆಯಿಂದಾಗಿ ಪಾಕ್ ಸಿಂಗರ್ ಗುಲಾಂ ಅಲಿ ಅವರ ಕಾರ್ಯಕ್ರಮವನ್ನು ಮಹಾರಾಷ್ಟ್ರದಲ್ಲಿ ರದ್ದುಗೊಳಿಸಲಾಯಿತು, ಭಾರತಕ್ಕೆ ಆಗಮಿಸಿದ ಪಿಸಿಬಿ ಮುಖಂಡರ ಮಾತುಕತೆಯನ್ನೂ ರದ್ದು ಮಾಡಲಾಗಿದೆ.
ಶಿವಸೇನೆಯ ಈ ಎಚ್ಚರಿಕೆಯನ್ನು ಕೆಲವರು ಸಮರ್ಥಿಸಿಕೊಂಡರೆ, ಇನ್ನೂ ಕೆಲವರು ಕಟುವಾಗಿ ವಿರೋಧಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.