
ಉಡುಪಿ: ಪ್ರಧಾನಿ ನರೇಂದ್ರ ಮೋದಿ ಇಂದು ಕೃಷ್ಣನೂರು ಉಡುಪಿಗೆ ಆಗಮಿಸಿದ್ದು, ಅವರನ್ನು ಹೂಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ.
ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ ಮೋದಿಯವರು, ಅಲ್ಲಿಂದ ಸೇನಾ ಹೆಲಿಕಾಪ್ಟರ್’ನಲ್ಲಿ ಉಡುಪಿಯ ಹೆಲಿಪ್ಯಾಡ್’ಗೆ ಬಂದಿಳಿದರು. ಅಲ್ಲಿಂದ ಕೃಷ್ಣ ಮಠದವರೆಗೂ ರೋಡ್ ಶೋ ನಡೆಸಿದ ಅವರಿಗೆ ದಾರಿಯುದ್ದಕ್ಕೂ ಲಕ್ಷಾಂತರ ಮಂದಿ ಹೂಮಳೆ ಸುರಿಸಿ ಸ್ವಾಗತ ಕೋರಿದರು.
ನಂತರ ಸ್ವರ್ಣಲೇಪಿತ ಕನಕಕಿಂಡಿಯನ್ನು ಉದ್ಘಾಟಿಸಿ ದೇವರ ದರ್ಶನ ಪಡೆದರು. ಕನಕದಾಸ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ತೀರ್ಥ ಪ್ರೋಕ್ಷಣೆ ಮಾಡಿ ಮಠಕ್ಕೆ ತೆರಳಿದರು. ಅಲ್ಲಿ ಕೃಷ್ಣನ ಪೂಜೆ ಮತ್ತು ದರ್ಶನ ನೆರವೇರಿಸಿದರು.
ಅಲ್ಲದೇ ಅವರು ಪರ್ಯಾಯ ಪುತ್ತಿಗೆ ಮಠದಿಂದ ಏರ್ಪಡಿಸಲಾದ ಲಕ್ಷ ಕಂಠ ಗೀತಾ ಪಾರಾಯಣದಲ್ಲಿ ಪಾಲ್ಗೊಂಡು ಭಗವದ್ಗೀತೆಯ 15 ನೇ ಅಧ್ಯಾಯದ 10 ಶ್ಲೋಕಗಳನ್ನು ಪಠಿಸಿದರು.
#WATCH | Udupi, Karnataka | Prime Minister Narendra Modi visits Sri Krishna Matha in Udupi and participates in the Laksha Kantha Gita Parayana programme.
The Prime Minister also inaugurated the Suvarna Teertha Mantapa, located in front of the Krishna sanctum, and dedicated the… pic.twitter.com/vEzbeasjUS
— ANI (@ANI) November 28, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



