
ಅಯೋಧ್ಯೆ: ವಿವಾಹ ಪಂಚಮಿಯ ಶುಭ ಸಂದರ್ಭದ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ರಾಮ ಜನ್ಮಭೂಮಿ ಮಂದಿರದ ಮುಖ್ಯ ಶಿಖರದ ಮೇಲೆ ಭಗವಾನ್ ಶ್ರೀರಾಮ ಮತ್ತು ಸೀತಾ ಮಾತೆಯ ಸುಂದರವಾದ, ದೈತ್ವಾಕಾರದ ಪ್ರಕಾಶಮಾನ ರೂಪವನ್ನು ಪ್ರೊಜೆಕ್ಟ್ ಮಾಡಲಾಗಿತ್ತು.
ಲೇಸರ್ ಮತ್ತು ಎಲ್ಇಡಿ ತಂತ್ರಜ್ಞಾನದಿಂದ ಮಂದಿರದ 161 ಅಡಿ ಎತ್ತರದ ಶಿಖರದ ಮೇಲೆ ಸುಮಾರು 100 ಮೀಟರ್ ಉದ್ದದ ಶ್ರೀರಾಮನ ಚಿತ್ರವನ್ನು ಪ್ರದರ್ಶಿಸಲಾಗಿತ್ತು. ಧ್ವಜಸ್ತಂಭದಿಂದ ಹೊರಡುವ ಬೆಳಕಿನ ಕಿರಣಗಳು ಆ ಚಿತ್ರವನ್ನು ಇನ್ನಷ್ಟು ಜೀವಂತಗೊಳಿಸಿದ್ದವು.ಅಯೋಧ್ಯೆಯ ಸಂಜೆಯ ಆಕಾಶದಲ್ಲಿ “ಜೈ ಶ್ರೀ ರಾಮ್” ಘೋಷಣೆಗಳ ನಡುವೆ ಆ ದಿವ್ಯ ರೂಪ ದರ್ಶನ ನೀಡುತ್ತಿದ್ದ ದೃಶ್ಯ ನಿಜಕ್ಕೂ ಅವಿಸ್ಮರಣೀಯವಾಗಿತ್ತು. ಲಕ್ಷಾಂತರ ಭಕ್ತರು ಸಾಕ್ಷಿಯಾಗಿ, ಮೊಬೈಲ್ಗಳಲ್ಲಿ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು.
ವಿವಾಹ ಪಂಚಮಿಯ ಮುನ್ನಾದಿನದಂದು, ಮಂದಿರದ ದೈವಿಕ ಶಿಖರವನ್ನು ನೋಡಿ, ಶ್ರೀ ಸೀತಾ ರಾಮ್ ಸರ್ಕಾರ್ ಅವರ ಭವ್ಯವಾದ ಚಿತ್ರಣದಿಂದ ಹೊಳೆಯುತ್ತಿದೆ
विवाह पंचमी की पूर्व संध्या पर श्री सीतारामजी की अद्भुत छवि से दैदीप्यमान श्री रामजन्मभूमि मंदिर के दिव्य शिखर का दर्शन
On the eve of Vivah Panchami, behold the divine spire of the Mandir, glowing with the splendid image of Shri Sita Ram Sarkar pic.twitter.com/c9rGWphUQ0
— Shri Ram Janmbhoomi Teerth Kshetra (@ShriRamTeerth) November 24, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.



