
ನರ್ಮದಾ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮ ದಿನಾಚರಣೆಯಾದ ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿರುವ ಏಕತಾ ಪ್ರತಿಮೆಗೆ ಗೌರವ ಸಲ್ಲಿಸಿದರು. ಈ ವೇಳೆ ಮೋದಿ ಪ್ರತಿಮೆಯ ಪಾದಗಳಿಗೆ ‘ಅಭಿಷೇಕ’ ಮಾಡಿದ್ದಾರೆ, ನಂತರ ಭಾರತದ ಉಕ್ಕಿನ ಮನುಷ್ಯನಿಗೆ ಗೌರವದ ಸಾಂಕೇತಿಕ ಸೂಚಕವಾಗಿ ಸ್ಮಾರಕದ ಮುಂದೆ ಪುಷ್ಪ ಸುರಿದು ಕೈಮುಗಿದು ನಮನ ಸಲ್ಲಿಸಿದರು.
ಸರ್ದಾರ್ ಪಟೇಲ್ ಅವರನ್ನು ಭಾರತದ ಏಕೀಕರಣದ ಹಿಂದಿನ ಪ್ರೇರಕ ಶಕ್ತಿ ಮತ್ತು ಸ್ಫೂರ್ತಿಯ ಶಾಶ್ವತ ಮೂಲ ಎಂದು ಮೋದಿ ಬಣ್ಣಿಸಿದ್ದಾರೆ.
“ಭಾರತವು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಅವರ 150 ನೇ ಜಯಂತಿಯಂದು ಗೌರವ ಸಲ್ಲಿಸುತ್ತದೆ. ಅವರು ಭಾರತದ ಏಕೀಕರಣದ ಹಿಂದಿನ ಪ್ರೇರಕ ಶಕ್ತಿಯಾಗಿದ್ದರು, ರಾಷ್ಟ್ರದ ಭವಿಷ್ಯವನ್ನು ರೂಪಿಸಿದರು. ರಾಷ್ಟ್ರೀಯ ಸಮಗ್ರತೆ, ಉತ್ತಮ ಆಡಳಿತ ಮತ್ತು ಸಾರ್ವಜನಿಕ ಸೇವೆಗೆ ಅವರ ಅಚಲ ಬದ್ಧತೆಯು ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ. ಏಕೀಕೃತ, ಬಲಿಷ್ಠ ಮತ್ತು ಸ್ವಾವಲಂಬಿ ಭಾರತದ ಅವರ ದೃಷ್ಟಿಕೋನವನ್ನು ಎತ್ತಿಹಿಡಿಯುವ ನಮ್ಮ ಸಂಕಲ್ಪವನ್ನು ನಾವು ಪುನರುಚ್ಚರಿಸುತ್ತೇವೆ” ಎಂದಿದ್ದಾರೆ.
ಈ ವರ್ಷ ಏಕತಾ ನಗರದಲ್ಲಿ ರಾಷ್ಟ್ರೀಯ ಏಕತಾ ದಿವಸ್ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದ್ದು, ಗಣರಾಜ್ಯೋತ್ಸವ ಶೈಲಿಯ ಮೆರವಣಿಗೆ ಮತ್ತು ಸಾಂಸ್ಕೃತಿಕ ಉತ್ಸವವನ್ನು ಇದರಲ್ಲಿ ಒಳಗೊಂಡಿದೆ. ವಿಶ್ವದ ಅತಿ ಎತ್ತರದ ಪ್ರತಿಮೆಯಾದ 182 ಮೀಟರ್ ಎತ್ತರದ ಏಕತಾ ಪ್ರತಿಮೆಯ ಬುಡದಲ್ಲಿ ಆಯೋಜಿಸಲಾದ ಮೆರವಣಿಗೆಯು ಭಾರತದ ಭದ್ರತಾ ಪಡೆಗಳ ಶಿಸ್ತು ಮತ್ತು ಶೌರ್ಯವನ್ನು ಪ್ರದರ್ಶಿಸಿದೆ.
Ekta Nagar, Gujarat: Prime Minister Narendra Modi pays tribute to Sardar Vallabhbhai Patel at the Statue of Unity, on 'Rashtriya Ekta Diwas', celebrated in his honour on his birth anniversary.
(Pics: DD) pic.twitter.com/rb9gv1AziQ
— ANI (@ANI) October 31, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


 
			
