ಚೆನ್ನೈ: ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ವಿಚಿತ್ರ ರೀತಿಯಲ್ಲಿ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. “ನಂಬಿಕೆ ಇರುವವರಿಗೆ” ದೀಪಾವಳಿ ಶುಭಾಶಯ ಎಂದಿರುವ ಅವರ ನಡೆ ವಿವಾದಕ್ಕೆ ಕಾರಣವಾಗಿದ್ದು, ಹಿಂದೂಗಳ ವಿರುದ್ಧ ತಾರತಮ್ಯ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.
ಒಂದು ಕಾರ್ಯಕ್ರಮದಲ್ಲಿ ಮಾತನಾಡಿರುವ ಸ್ಟಾಲಿನ್, “ನಾನು ವೇದಿಕೆಯಲ್ಲಿದ್ದಾಗ, ಅನೇಕರು ನನಗೆ ಹೂಗುಚ್ಛಗಳು, ಪುಸ್ತಕಗಳನ್ನು ನೀಡಿದರು ಆದರೆ ಕೆಲವರು ನನಗೆ ಏನು ಶುಭ ಕೋರಬೇಕೆಂದಯ ತಿಳಿಯದೆ ಗೊಂದಲದಲ್ಲಿದ್ದರು. ಕೆಲವರು ನನಗೆ ದೀಪಾವಳಿಯ ಶುಭಾಶಯ ಕೋರಬೇಕೇ ಅಥವಾ ಬೇಡವೇ ಎಂಬ ಹಿಂಜರಿಕೆಯಲ್ಲಿದ್ದರು. ಶುಭಕೋರಿದರೆ ನಾನು ಕೋಪಗೊಂಡರೆ ಏನು?’ ಎಂದು ಅವರು ಭಾವಿಸಿದ್ದರು. ನಂಬಿಕೆ ಇರುವವರಿಗೆ ನಾನು ದೀಪಾವಳಿಯ ಶುಭಾಶಯಗಳನ್ನು ಹೇಳುತ್ತಿದ್ದೇನೆ” ಎಂದಿದ್ದಾರೆ.
ಸ್ಟಾಲಿನ್ ಹೇಳಿಕೆಗೆ ಬಿಜೆಪಿಯಿಂದ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಿರಿಯ ಬಿಜೆಪಿ ನಾಯಕಿ ಮತ್ತು ಮಾಜಿ ರಾಜ್ಯಪಾಲ ತಮಿಳಿಸೈ ಸೌದರಾಜನ್ ಅವರು ಪ್ರತಿಕ್ರಿಯಿಸಿ, “ಯಾರು ಒಪ್ಪುತ್ತಾರೋ ಇಲ್ಲವೋ ಆದರೆ ಎಲ್ಲರೂ ಮೂಲಭೂತವಾಗಿ ಹಿಂದೂಗಳು. ನಂಬುವವರಿಗೆ ಮಾತ್ರ ನಾವು ಶುಭಕೋರುವುದಿಲ್ಲ, ಎಲ್ಲರಿಗೂ ದೀಪಾವಳಿಯ ಶುಭಾಶಯ ಕೋರುತ್ತೇವೆ. ಉದಯನಿಧಿ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದಿದ್ದಾರೆ.
“ನೀವು ಇತರ ಧರ್ಮದ ಹಬ್ಬಗಳ ಸಂದರ್ಭದಲ್ಲಿ ಜನರಿಗೆ ಶುಭಕೋರುವಾಗ ನಂಬಿಕೆವುಳ್ಳವರಿಗೆ ಎಂದು ಹೇಳುವುದಿಲ್ಲ. ಆದರೆ ಹಿಂದೂ ಧರ್ಮದ ವಿಷಯಕ್ಕೆ ಬಂದಾಗ, ಅದು ನಂಬಿಕೆವುಳ್ಳವರಿಗೆ ಎಂದು ನೀವು ಹೇಳುತ್ತೀರಿ” ಎಂದು ಕಿಡಿಕಾರಿದರು.
ತಮಿಳುನಾಡು ಬಿಜೆಪಿ ವಕ್ತಾರ ಎಎನ್ಎಸ್ ಪ್ರಸಾದ್, ಡಿಎಂಕೆ ಸರ್ಕಾರವು ಹಬ್ಬಗಳ ಸಮಯದಲ್ಲಿ ಹಿಂದೂಗಳಿಗೆ ಶುಭ ಕೋರುವ ಕನಿಷ್ಠ ಸೌಜನ್ಯವನ್ನೂ ತೋರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಡಿಎಂಕೆ ಹಿಂದೂ ವಿರೋಧಿ ಪಕ್ಷ ಎಂಬುದು ಸಾಮಾನ್ಯ ಜ್ಞಾನ. ಒಮ್ಮೆ ಅಧಿಕಾರಕ್ಕೆ ಬಂದ ನಂತರ, ಅವರು ಪ್ರತಿಯೊಬ್ಬ ನಾಗರಿಕನನ್ನು ಸಂಪೂರ್ಣ ಸಮಾನತೆಯಿಂದ ನಡೆಸಿಕೊಳ್ಳುವ ಕರ್ತವ್ಯವನ್ನು ಹೊಂದಿದ್ದಾರೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಸೂಕ್ಷ್ಮವಾಗಿ ರಚಿಸಿದ ಸಂವಿಧಾನವು ಈ ಕಡ್ಡಾಯವನ್ನು ಸ್ಪಷ್ಟತೆಯೊಂದಿಗೆ ಒತ್ತಿಹೇಳುತ್ತದೆ. ಆದರೂ, ಡಿಎಂಕೆ ಆಡಳಿತವು ಹಿಂದೂ ಹಬ್ಬಗಳಿಗೆ ಶುಭಾಶಯಗಳನ್ನು ನೀಡುವ ಮೂಲಭೂತ ಅನುಗ್ರಹವನ್ನು ಸಹ ಹೊಂದಿಲ್ಲ, ಬದಲಿಗೆ ಹಿಂದೂ ನಂಬಿಕೆಯ ವಿರುದ್ಧ ಮಾತ್ರ ನಿರಂತರ ಕಹಿಯನ್ನು ಹೊರಹಾಕಲು ಆಯ್ಕೆ ಮಾಡಿದೆ” ಎಂದು ಪ್ರಸಾದ್ ಹೇಳಿದರು.
#WATCH | Chennai | BJP leader Tamilisai Soundararajan says, "I wish everyone a happy Diwali and we are not like the Tamil Nadu Chief Minister. We will be wishing each and every one. I condemn the Tamil Nadu Deputy Chief Minister for wishing Diwali only to the believers… Even… pic.twitter.com/fOypeSbqgB
— ANI (@ANI) October 19, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.