ತಿರವನಂತಪುರಂ: ಭಾರತವು ಸಮೃದ್ಧಿ, ಬೆಳಕು ಮತ್ತು ವಿಜಯವನ್ನು ಗುರುತಿಸುವ ಪವಿತ್ರ ಹಬ್ಬ ದೀಪಾವಳಿಗೆ ಸಿದ್ಧತೆ ನಡೆಸುತ್ತಿರುವಾಗ, ವಿಶ್ವದ ಅತಿದೊಡ್ಡ ಆಭರಣ ಮಾರಾಟಗಾರರಲ್ಲಿ ಒಂದಾದ ಕೇರಳದ ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರತೀಯರ ಆಕ್ರೋಶದ ಬಿರುಗಾಳಿಗೆ ತುತ್ತಾಗಿದೆ.
ಭಾರತದ ಆಪರೇಷನ್ ಸಿಂಧೂರ್ ಅನ್ನು “ಹೇಡಿತನದ ಕೃತ್ಯ” ಎಂದು ಬಣ್ಣಿಸಿ, ಅದನ್ನು ಅಣಕಿಸಿದ್ದ ಮತ್ತು ಪಾಕಿಸ್ತಾನದ ಮಿಲಿಟರಿಯ ಪ್ರಚಾರವನ್ನು ವೈಭವೀಕರಿಸಿದ್ದ ಲಂಡನ್ ಮೂಲದ ಪಾಕಿಸ್ತಾನಿ ಇನ್ಫ್ಲ್ಯೂಯನ್ಸರ್ ಅಲಿಶ್ಬಾ ಖಾಲಿದ್ ಅವರೊಂದಿಗಿನ ಸಹಯೋಗವೇ ಇದಕ್ಕೆ ಕಾರಣ.
ಭಾರತದ ಅತಿದೊಡ್ಡ ಚಿನ್ನ ಖರೀದಿ ಉತ್ಸವಗಳಲ್ಲಿ ಒಂದಾದ ಧನ್ತೆರಸ್ ಸಂದರ್ಭದಲ್ಲಿ ಈ ವಿವಾದ ಮುನ್ನಲೆಗೆ ಬಂದಿದ್ದು, ಜನರಿಂದ ಮಲಬಾರ್ ಬೃಹತ್ ಬಹಿಷ್ಕಾರ ಅಭಿಯಾನವನ್ನು ಎದುರಿಸುತ್ತಿದೆ, ಭಾರತೀಯರು “ರಾಷ್ಟ್ರ ಮತ್ತು ಅದರ ಸಶಸ್ತ್ರ ಪಡೆಗಳ ಘನತೆಯನ್ನು ಹಾಳುಮಾಡುವ” ಬ್ರ್ಯಾಂಡ್ಗಳನ್ನು ತಿರಸ್ಕರಿಸಬೇಕೆಂದು ಕರೆ ನೀಡುತ್ತಿದ್ದಾರೆ.
ಹಿಂದೂ ಕಾರ್ಯಕರ್ತ ವಿಜಯ್ ಪಟೇಲ್ ಅವರು ಮಲಬಾರ್ ಆಭರಣ ಖಾಲಿದ್ ಜೊತೆಗಿನ ಸಂಪರ್ಕವನ್ನು ಎಕ್ಸ್ ಮೂಲಕ ಬಹಿರಂಗಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಪೋಸ್ಟ್ ಸಾವಿರಾರು ದೇಶಭಕ್ತ ಭಾರತೀಯರ ಮನಸ್ಸನ್ನು ತಟ್ಟಿದೆ.
URGENT SUPPORT NEEDED.
So MP Ahammed Owned Malabar Gold wants to send me to jail for exposing their Pakistani influencer collaboration, who has mocked our operation Sindoor.
I am willing to go to jail for the pride of our Army.
You can’t silence me just because you have the… pic.twitter.com/hCJqKCwZJa
— Vijay Patel (@vijaygajera) October 15, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.