ಲಂಡನ್: ನಗದು ರಹಿತ ದೇಶವಾಗುವತ್ತ ಸ್ವೀಡನ್ ದಾಪುಗಾಲಿಡುತ್ತಿದೆ. ಇನ್ನು ಕೆಲವೇ ವರ್ಷದಲ್ಲಿ ಅದು ವಿಶ್ವದ ಪ್ರಪ್ರಥಮ ನಗದು ರಹಿತ ದೇಶವಾಗಿ ಹೊರಹೊಮ್ಮಲಿದೆ.
ಮಾಹಿತಿ ತಂತ್ರಜ್ಞಾನ ಸಾಕಷ್ಟು ಮುಂದುವರೆದಿರುವ ಸ್ವೀಡನ್ನಲ್ಲಿ ಜನರು ಹೆಚ್ಚಾಗಿ ಮೊಬೈಲ್ ಪೇಮೆಂಟ್, ಇ-ಬ್ಯಾಂಕಿಂಗ್, ಡೆಬಿಟ್ ಕಾರ್ಡ್ನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕ್ಯಾಶ್ ನೀಡಿ ವ್ಯವಹಾರ ನಡೆಸುವ ಜನರ ಸಂಖ್ಯೆ ದಿನೇ ದಿನೇ ಅಲ್ಲಿ ಕುಸಿಯುತ್ತಿದೆ.
ಅತಿ ಸಣ್ಣ ಖರೀದಿಗೂ ಬ್ಯಾಂಕ್ ಕಾರ್ಡ್ಗಳನ್ನು ಇಲ್ಲಿ ಬಳಕೆ ಮಾಡಲಾಗುತ್ತಿದೆ, ಈಗ ಸ್ವಿಡನ್ನಿನಲ್ಲಿ 80 ಮಿಲಿಯನ್ಗಿಂತಲೂ ಕಡಿಮೆ ಸ್ವೀಡಿಶ್ ಕ್ರೌನ್ ಚಾಲ್ತಿಯಲ್ಲಿದೆ, ಆರು ವರ್ಷಗಳ ಹಿಂದೆ 106 ಬಿಲಿಯನ್ ಸ್ವೀಡಿಶ್ ಕ್ರೌನ್ಗಳು ಚಾಲ್ತಿಯಲ್ಲಿದ್ದವು ಎಂದು ಸ್ವೀಡನ್ನಿನ ಕೆಟಿಎಚ್ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಂಶೋಧಕ ನಿಕ್ಲಾಸ್ ಅರ್ವಿಡ್ಸನ್ ಹೇಳಿದ್ದಾರೆ.
ವಿವಿಧ ದೇಶಗಳ ಮಾರುಕಟ್ಟೆಯಲ್ಲಿ ಈಗಲೂ ನಗದು ಪಾವತಿಯ ಅತಿ ಪ್ರಮುಖ ಅಂಶ, ಆದರೆ ಇದು ಸ್ವಿಡನ್ಗೆ ಅನ್ವಯಿಸುವುದಿಲ್ಲ. ನಾವು ಕಡಿಮೆ ಪ್ರಮಾಣದಲ್ಲಿ ನಗದು ಬಳಸುತ್ತೇವೆ. ಅದು ಕೂಡ ಶೀಘ್ರ ಗತಿಯಲ್ಲಿ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.