ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಮಾನೋತ್ಸವ ವರ್ಷದಲ್ಲಿ ದೇಶದ ಪ್ರತಿಯೊಂದು ಮೂಲೆಗೂ ಹಾಗೂ ಸಮಾಜದ ಪ್ರತಿಯೊಂದು ವರ್ಗಕ್ಕೂ ಮಹತ್ವದ ಸಂದೇಶ ಕೊಂಡೊಯ್ಯಲು ಲಕ್ಷಕ್ಕೂ ಹೆಚ್ಚು ಸಮ್ಮೇಳನಗಳನ್ನು ಯೋಜಿಸಲಾಗಿದೆ ಎಂದು ಸಂಘದ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನೀಲ್ ಅಂಬೇಕರ್ ಹೇಳಿದರು.
ದೆಹಲಿಯ ಅಶವ್ ಕುಂಜ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ನಿಘದ ಮೂರು ದಿನಗಳ ಅಖಿಲ ಭಾರತ ಪ್ರಾಂತ ಪ್ರಚಾರಕ ಬೈಠಕ್ನ ತರುವಾಯ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, “ಸಾಧ್ಯವಾದಷ್ಟು ಕುಟುಂಬಗಳು, ಜನರು ಮತ್ತು ಹಳ್ಳಿಗಳನ್ನು ತಲುಪುವ ಗುರಿಯೊಂದಿಗೆ ಗೃಹ ಸಂಪರ್ಕ (ಮನೆ-ಮನೆಗೆ ಸಂಪರ್ಕ) ನಡೆಯಲಿದೆ” ಎಂದರು. ಈ ವರ್ಷ ಅಕ್ಟೋಬರ್ 2 ರಂದು ಸಂಘವು ಸ್ಥಾಪನೆಯ 100 ನೇ ವರ್ಷವನ್ನು ಪ್ರವೇಶಿಸಲಿದೆ.
ಪ್ರಾಂತ ಪ್ರಚಾರಕ ಬೈಠಕ್ನಲ್ಲಿ ಶತಮಾನೋತ್ಸವ ವರ್ಷದ ಯೋಜನೆಯನ್ನು ಚರ್ಚಿಸಲಾಗಿದೆ. ವಿಜಯದಶಮಿ ಉತ್ಸವದೊಂದಿಗೆ ಶತಮಾನೋತ್ಸವ ಸ್ಪರ್ಷವನ್ನು ಉದ್ಘಾಟಿಸಲಾಗುವುದು. ದೇಶಾದ್ಯಂತ “ಯೋಜಿಸಲಾದ ವಿಜಯದಶಮಿ ಉತ್ಸವಗಳಲ್ಲಿ ಎಲ್ಲ ಜ್ಞಯಂಸೇವಕರುಭಾಗವಹಿಸಲಿದ್ದಾರೆ. ಸಮಾಜದ ಗಣ್ಯ ವ್ಯಕ್ತಿಗಳು ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಶತಾಬ್ದಿ ವರ್ಷದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮಂಡಲ ಮಟ್ಟದಲ್ಲಿ ನಗರ ಪ್ರದೇಶಗಳಲ್ಲಿ ಬಸ್ತಿ (ವಸತಿ) ಮಟ್ಟದಲ್ಲಿ ಸಮಾಜದ ಲ್ಲ ವರ್ಗಗಳ ಭಾಗವಹಿಸುವಿಕೆಯೊಂದಿಗೆ ಹಿಂದೂ ಸಮ್ಮೇಳನಗಳನ್ನು ಆಯೋಜಿಸಲಾಗುತ್ತದೆ ಎಂದರು.
ಪ್ರಸ್ತುತ, ದೇಶದಲ್ಲಿ 58,964 ಮಂಡಲಗಳು ಮತ್ತು 44,055 ಬಸ್ತಿಗಳು ಸೇರಿ 1,03,019 ಸ್ಥಳಗಳಲ್ಲಿ ಹಿಂದೂ ಸಮ್ಮೇಳನ ನಡೆಯಲಿವೆ. ಹಿಂದೂ ಸಮ್ಮೇಳನಗಳಲ್ಲಿ ಸಾಮಾಜಿಕ ಹಬ್ಬಗಳು, ಸಾಮಾಜಿಕ ಏಕತೆ ಎತ್ತು ಸಾಮರಸ್ಯದ ವಿಷಯಗಳು ಹಾಗೂ ಪಂಚ ರಿವರ್ತನವನ್ನು ಚರ್ಚಿಸಲಾಗುವುದು ಎಂದರು.
ಸಮಾಜದಲ್ಲಿ ಸಾಮರಸ್ಯದ ಉತ್ತೇಜನಕ್ಕಾಗಿ ದೇಶದ 11,360 ತಾಲೂಕು ಮತ್ತು ನಗರಗಳಲ್ಲಿ ಸಾಮಾಜಿಕ ಸಾಮರಸ್ಯ ಸಭೆಗಳನ್ನು ಆಯೋಜಿಸಲಾಗುತ್ತದೆ ಎಂದರು.
“ಶತಮಾನೋತ್ಸವ ವರ್ಷದಲ್ಲಿ ಸಂಪರ್ಕ ಯೋಜನೆಯ ಆಧಾರವೆಂದರೆ ನಿರೂಪಣೆಯನ್ನು ಬದಲಾಯಿಸುವುದು ಮತ್ತು ಸತ್ಯವನ್ನು ಸ್ಥಾಪಿಸುವುದು. ವಿಮರ್ಶ್ ಕೋ ಬದಲ್ನಾ ಹೈ (ನಾವು ನಿರೂಪಣೆಯನ್ನು ಬದಲಾಯಿಸಬೇಕು). ಹಿಂದೂ ಸಮಾಜವು ವರ್ಷಗಳಲ್ಲಿ ಜಾಗೃತಗೊಂಡಿದೆ. ಇಂದು ನಮ್ಮನ್ನು ನಾವು ಹಿಂದೂ ಎಂದು ಕರೆದುಕೊಳ್ಳುವುದು ಹೆಮ್ಮೆಯ ವಿಷಯವಾಗಿದೆ ಆದರೆ ಜಾತಿಯ ವಿರುದ್ಧ ಹೋರಾಡುವುದು ಮತ್ತು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದು ಮುಂತಾದ ಕೆಲವು ಆಂತರಿಕ ತಿದ್ದುಪಡಿಗಳನ್ನು ನಾವು ಖಚಿತಪಡಿಸಿಕೊಳ್ಳಬೇಕು” ಎಂದರು.
ಒಂದು ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ನಡೆಯುವ ಹಿಂದೂ ಐಕ್ಯತಾ ಸಭೆಗಳು ಹಿಂದೂ ಸಮಾಜವನ್ನು ಹಂಚಿಕೆಯ ಸಂಸ್ಕೃತಿ ಮತ್ತು ಪರಂಪರೆ, ಸಾಮಾಜಿಕ ಸಾಮರಸ್ಯ, ಹಬ್ಬಗಳು ಮತ್ತು ಇತರ ಸಾಮಾನ್ಯ ಕಾಳಜಿಗಳ ವಿಷಯಗಳ ಸುತ್ತ ಹುರಿದುಂಬಿಸಲು ಪ್ರಯತ್ನಿಸುತ್ತವೆ ಎಂದು ಆರ್ಎಸ್ಎಸ್ ಮೂಲಗಳು ತಿಳಿಸಿವೆ.
“ಒಂದು ಸಮಾಜವಾಗಿ ನಾವು ಬಲವಾದ, ಆತ್ಮವಿಶ್ವಾಸ ಮತ್ತು ಸಾಮರಸ್ಯದಿಂದ, ತಾರತಮ್ಯದಿಂದ ಮುಕ್ತರಾಗಿರಬೇಕು. ಪ್ರತಿಯೊಂದು ಕುಟುಂಬವು ರಾಷ್ಟ್ರಕ್ಕಾಗಿ ಏನನ್ನಾದರೂ ಕೊಡುಗೆ ನೀಡಬೇಕು. ಹಿಂದೂ ಸಮಾಜದ ಶಕ್ತಿಯನ್ನು ಹುರಿದುಂಬಿಸುವುದು ಇದರ ಉದ್ದೇಶವಾಗಿದೆ, ಇದರಿಂದ ಅದು ಆತ್ಮವಿಶ್ವಾಸ, ಒಗ್ಗಟ್ಟು ಮತ್ತು ಸಾಮರಸ್ಯವನ್ನು ಅನುಭವಿಸುತ್ತದೆ” ಎಂದು ದತ್ತಾತ್ರೇಯ ಹೊಸಬಾಳೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.