ಹೈದರಾಬಾದ್: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಿರುಮಲ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು, ಈ ಬಗ್ಗೆ ಈಗಾಗಲೇ ನಿರ್ದೇಶನ ನೀಡಿದ್ದೇವೆ ಎಂದು ಹೇಳಿದ್ದಾರೆ. ಶುಕ್ರವಾರ ಮಾತನಾಡಿದ ನಾಯ್ಡು, ಪ್ರಸ್ತುತ ಇತರ ಸಮುದಾಯಗಳ ಜನರು ಅಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗಳಿಗೆ ಅಗೌರವ ತೋರಿಸದೆ ಅವರನ್ನು ಸ್ಥಳಾಂತರಿಸಲಾಗುವುದು ಎಂದಿದ್ದಾರೆ.
“ತಿರುಮಲ ದೇವಸ್ಥಾನದಲ್ಲಿ ಹಿಂದೂಗಳಿಗೆ ಮಾತ್ರ ಉದ್ಯೋಗ ನೀಡಬೇಕು. ಪ್ರಸ್ತುತ ಇತರ ಧರ್ಮದ ವ್ಯಕ್ತಿಗಳು ಅಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಭಾವನೆಗಳಿಗೆ ನೋವಾಗದಂತೆ ಅವರನ್ನು ಬೇರೆ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು” ಎಂದು ನಾಯ್ಡು ಹೇಳಿದರು.
ಭಾರತದಾದ್ಯಂತ ಎಲ್ಲಾ ರಾಜ್ಯ ರಾಜಧಾನಿಗಳಲ್ಲಿ ವೆಂಕಟೇಶ್ವರ ಸ್ವಾಮಿ ದೇವಾಲಯಗಳನ್ನು ನಿರ್ಮಿಸುವ ತಮ್ಮ ಯೋಜನೆಯನ್ನು ನಾಯ್ಡು ಈ ವೇಳೆ ಹಂಚಿಕೊಂಡರು. ವಿಶ್ವಾದ್ಯಂತ ವೆಂಕಟೇಶ್ವರ ದೇವರ ಆಸ್ತಿಗಳನ್ನು ರಕ್ಷಿಸಲು ಪವಿತ್ರ ದಾರವನ್ನು ಹಾಕಲಾಗಿದೆ ಎಂದು ಅವರು ಒತ್ತಿ ಹೇಳಿದರು. ಅನೇಕ ಭಕ್ತರು, ವಿದೇಶಗಳಲ್ಲಿಯೂ ಅಂತಹ ದೇವಾಲಯಗಳನ್ನು ಸ್ಥಾಪಿಸಬೇಕೆಂದು ಬಯಸುತ್ತಾರೆ ಎಂದು ಅವರು ಹೇಳಿದರು.
ಸೆವೆನ್ ಹಿಲ್ಸ್ ಪ್ರದೇಶದ ಬಳಿಯ ವಾಣಿಜ್ಯ ಚಟುವಟಿಕೆಗಳ ಬಗ್ಗೆ ಚರ್ಚಿಸಿದ ನಾಯ್ಡು, ಹಿಂದಿನ ಸರ್ಕಾರವು ಆ ಪ್ರದೇಶದ ಬಳಿ 35.32 ಎಕರೆ ಭೂಮಿಯಲ್ಲಿ ಮುಮ್ತಾಜ್ ಹೋಟೆಲ್ ಸ್ಥಾಪನೆಗೆ ಅವಕಾಶ ನೀಡಿತ್ತುರು. ಆದರೆ, ಪ್ರಸ್ತುತ ಸರ್ಕಾರವು ಅನುಮೋದನೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಎಂದಿದ್ದಾರೆ.
“ಈ ಪ್ರದೇಶದ ಪಕ್ಕದಲ್ಲಿರುವ ಮುಮ್ತಾಜ್ ಹೋಟೆಲ್ಗೆ ಈ ಹಿಂದೆ ಅನುಮತಿ ನೀಡಲಾಗಿತ್ತು. ಆದರೆ, 35.32 ಎಕರೆ ಭೂಮಿಯಲ್ಲಿ ಯೋಜಿಸಲಾಗಿದ್ದ ಹೋಟೆಲ್ಗೆ ಅನುಮೋದನೆಯನ್ನು ರದ್ದುಗೊಳಿಸಲು ಸರ್ಕಾರ ಈಗ ನಿರ್ಧರಿಸಿದೆ. ತಿರುಮಲದ ಏಳು ಬೆಟ್ಟಗಳ ಬಳಿ ಯಾವುದೇ ವಾಣಿಜ್ಯೀಕರಣ ಇರಬಾರದು” ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
‼️🚨🔔Finally, Mumtaz hotel permission is canceled.
All the hard work of our seers and Sadhus who are sitting in fast paid off.
This is the power of Hindus. 💪🏼💪🏼If we stand together and fight, we can achieve it.
All 30+5, 35 acres contract is cancelled and land will be… pic.twitter.com/TwTXmMVVn4
— Tathvam-asi (@ssaratht) March 21, 2025
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.