ಜೆರುಸೆಲಂ: ಜೆರುಸೆಲಂನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಭಾರತದ ಸಹಕಾರವನ್ನು ಕೋರಿರುವ ಇಸ್ರೇಲ್ ಪ್ರಧಾನಿ ಬೆಂಜಮೀನ್ ನೆತನ್ಯಾಹು ಅವರು, ಪ್ರಧಾನಿ ನರೇಂದ್ರ ಮೋದಿಯವರನ್ನು ತನ್ನ ಸ್ನೇಹಿತ ಎಂದಿದ್ದಾರೆ.
ಇಸ್ರೇಲ್ ಸಂಸತ್ತು ನೆಸ್ಸೆಟ್ನ್ನು ಉದ್ದೇಶಿಸಿ ಮಾತನಾಡಿದ ಅವರು, ಇಸ್ರೆಲ್ ಸಹಕಾರವಿಲ್ಲದೆ ಭಾರತದಲ್ಲಿ ಕ್ರಾಂತಿ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ನಂಬಿದ್ದಾರೆ ಎಂದರು.
ಸೋಲಾರ್ ಎನರ್ಜಿ, ನೀರು, ಕೃಷಿ ಮತ್ತು ಡೈರಿಯಲ್ಲಿ ಕ್ರಾಂತಿಯನ್ನು ತರುವ ಗುರಿಯನ್ನು ಅವರು ಹೊಂದಿದ್ದಾರೆ. ಹಿಂದಿ ಮತ್ತು ಹೆಬ್ರ್ಯೂ(ಇಸ್ರೇಲಿ ಭಾಷೆ)ನ್ನು ಮಾತ್ರ ಸಿಲಿಕಾನ್ ವ್ಯಾಲಿಯಲ್ಲಿ ಒಬ್ಬರು ಕೇಳಬಹುದು ಎಂದರು.
ಭಾರತದೊಂದಿಗೆ ಸದಾ ಸಂಪರ್ಕದಲ್ಲಿರಲು ಬಯಸಿರುವ ಅವರು, ಜೆರುಸಲೇಂನಲ್ಲಿ ಸ್ಥಾಪಿಸಲಿರುವ ಸೈಬರ್ ಸೆಕ್ಯೂರಿಟಿ ಪಾರ್ಕ್ಗೆ ಭಾರತದ ಗಣಿತಶಾಸ್ತ್ರಜ್ಞರ, ಸಾಫ್ಟ್ವೇರ್ ತಜ್ಞರ ನೆರವನ್ನು ಕೋರಿದರು.
ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಇಸ್ರೇಲ್ ಪ್ರವಾಸಕೈಗೊಂಡ ಸಂದರ್ಭದಲ್ಲಿ ಬೆಂಜಮಿನ್ ಈ ಮಾತನ್ನಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.