ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸಗಳ ಪ್ರಯತ್ನಕ್ಕೆ ಅಮೇರಿಕ ಮೂಲದ ಎನ್ಜಿಒ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಮೋದಿ ಅವರು ಇತ್ತೀಚೆಗೆ ಸಿಲಿಕಾನ್ ವ್ಯಾಲಿ ಸೇರಿದಂತೆ ಹಲವು ರಾಷ್ಟ್ರಗಳಿಗೆ ಭೇಟಿ ನೀಡಿದ್ದು, ಭೇಟಿಯ ಸಂದರ್ಭ ಅವರ ವ್ಯವಸ್ಥಿತ ನೀತಿಯಿಂದಾಗಿ ಭಾರೀ ಜಾಗತಿಕ ಪ್ರಭಾವ ಬೀರಿದೆ. ಇದು ಭವಿಷ್ಯದಲ್ಲಿ ಭಾರತದ ವಿದೇಶಿ ಹೂಡಿಕೆ ವಿಷಯದಲ್ಲಿ ಲಾಭದಾಯವಾಗಿದೆ ಎಂದು ನ್ಯೂಯಾರ್ಕ್ ಗ್ಲೋಬಲ್ ಲೀಡರ್ಸ್ ಡೈಲಾಗ್ನ ಅಧ್ಯಕ್ಷ ಫಿಲ್ ಸ್ಕ್ಯಾನ್ಲ್ಯಾನ್ ಹೇಳಿದ್ದಾರೆ.
ಈ ಒಪ್ಪಂದಗಳಿಗೆ ಸಮಯಾವಕಾಶ ಬೇಕಿದ್ದರೂ ಮೋದಿಯವರ ವ್ಯವಸ್ಥಿತ ಯೋಜನೆಯಿಂದಾಗಿ ಭಾರತ ಹೆಚ್ಚಿನ ಲಾಭ ಪಡೆಯಲಿದೆ. ದೇಶದ ಆವಶ್ಯಕತೆಗಳ ಬಗ್ಗೆ ಅವರಿಗೆ ಅರಿವಿದೆ. ಭಾರತದಾದ್ಯಂತ ಆಪ್ಟಿಕ್ ಫೈಬರ್ ನೆಟ್ವರ್ಕ್ ಸ್ಥಾಪಿಸುವ ಅವರ ಬದ್ಧ ನಿಲುವಿನಿಂದ ಸನಯ, ಶಕ್ತಿ ಮತ್ತು ಹಣವನ್ನು ಉಳಿಸುವ ಒಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಸ್ಕ್ಯಾನ್ಲಾನ್ ಹೇಳಿದ್ದಾರೆ.
ಈ ಸಂದರ್ಭ ಸ್ಕಾಲಾನ್ ಅವರು ಸುಲಭ್ ಇಂಟರ್ನ್ಯಾಷನಲ್ ಸಂಸ್ಥಾಪಕ ಬಿಂದೇಶ್ವರಿ ಪಾಠಕ್ ಅವರನ್ನು ನ್ಯೂಯಾರ್ಕ್ ಗ್ಲೋಬಲ್ ಲೀಡರ್ಸ್ನ ಮಾನವೀಯ ಪ್ರಶಸ್ತಿಗೆ ನೇಮಿಸಿದ್ದಾರೆ. ಈ ಪ್ರಶಸ್ತಿಯನ್ನು ಅಕ್ಟೋಬರ್ತಿಂಗಳ ಕೊನೆಯಲ್ಲಿ ನೀಡಲಾಗುತ್ತಿದೆ.
ಪಾಠಕ್ ಅವರ ಸುಲಭ್ ಇಂಟರ್ನ್ಯಾಷನಲ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವ ಸ್ವಚ್ಛ ಭಾರತ ಅಭಿಯನದ ಬಗ್ಗೆ ಮೋದಿಯವರನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.