ಬೆಂಗಳೂರು: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ಕೋಮು ವಾತಾವರಣವನ್ನು ಪ್ರತಿಭಟಿಸುವ ಸಲುವಾಗಿ ಖ್ಯಾತ ಬರಹಗಾರರು ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಆದರೆ ಪ್ರಶಸ್ತಿ ಹಿಂದಿರುಗಿಸುವ ಮೂಲಕ ಪ್ರತಿಭಟಿಸುವುದು ಸರಿಯಾದ ಮಾರ್ಗವಲ್ಲ ಎಂದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಶ್ವನಾಥ್ ತಿವಾರಿ ತಿಳಿಸಿದ್ದಾರೆ.
ಬರಹಗಾರರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಬಾರದು. ಬದಲಾಗಿ ಪ್ರತಿಭಟಿಸಲು ಬೇರೆ ಮಾರ್ಗಗಳನ್ನು ಬಳಸಬೇಕು. ಈ ಪ್ರಶಸ್ತಿಗಳು ಸರ್ಕಾರದಿಂದ ನೀಡಲಾಗಿಲ್ಲ. ಬರಹಗಾರರಿಗೆ ತಮ್ಮ ಸಾಹಿತ್ಯದ ಗುಣಮಟ್ಟದ ಆಧಾರದ ಮೇಲೆ ಅಕಾಡೆಮಿಯಿಂದ ನೀಡಲಾಗಿದೆ ಎಂದು ತಿವಾರಿ ಹೇಳಿದ್ದಾರೆ.
ಕನ್ನಡ ಸಾಹಿತಿ ಎಂ.ಎಂ. ಕಲಬುರ್ಗಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಹಿತ್ಯ ಅಕಾಡೆಮಿ ದೃಢ ನಿಲುವು ಕೈಗೊಳ್ಳಲು ನಿರಾಕರಿಸುತ್ತಿದೆ ಎಂದು ಸಾಹಿತ್ಯ ಅಕಾಡೆಮಿಯ ’ಯುವ ಪುರಸ್ಕಾರ’ ಪುರಸ್ಕೃತ ಅಮನ್ ಸೇಠಿ ಹೇಳಿದ್ದಾರೆ. ಅಲ್ಲದೇ ಅವರೂ ತಮ್ಮ ಪ್ರಶಸ್ತಿಯನ್ನು ಹಿಂದಿರುಗಿಸಲು ಮುಂದಾಗಿದ್ದಾರೆ.
ನಯನತಾರಾ ಸೆಹಗಲ್,ಅಶೋಕ್ ವಾಜಪೇಯಿ, ಉದಯ್ ಪ್ರಕಾಶ್, ಗುರುಚರಣ್ ಸಿಂಗ್ ಮುಂತಾದವರು ಸಾಹಿತ್ಯ ಪ್ರಶಸ್ತಿ ಹಿಂದಿರುಗಿಸುವ ಬಗ್ಗೆ ಈಗಾಗಲೇ ಘೋಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.