ನವದೆಹಲಿ: ತಂಬಾಕಿನ ಚಟ ಹಿಡಿದಲ್ಲಿ ಅದನ್ನು ಬಿಡಿಸುವುದು ಕಷ್ಟಸಾಧ್ಯ. ಅನಂತರ ಅದರಿಂದ ದೂರವಾಗಲು ಯಾವ ದಾರಿಯೂ ತೋಚುವುದಿಲ್ಲ. ಈ ವ್ಯಸನವನ್ನು ಬಿಡಿಸಲು ಕೇಂದ್ರ ಸರ್ಕಾರ ಎಂ-ಸಸೆಷನ್ (ಮೊಬೈಲ್ ಸಸೆಷನ್) ಎಂಬ ಜಾಗೃತಿ ಅಭಿಯಾನವನ್ನು ಆರಂಭಿಸುವ ಯೋಜನೆ ರೂಪಿಸಿದೆ.
ಸರ್ಕಾರದ ಆರೋಗ್ಯ ಇಲಾಖೆ ಮೊಬೈಲ್ ಸಂದೆಶಗಳ ಮೂಲಕ ವ್ಯಸನಿಗಳ ಕೌನ್ಸೆಲಿಂಗ್ ನಡೆಸಲಿದೆ. ಸರ್ಕಾರ ನೀಡುವ ಮೊಬೈಲ್ ಸಂಖ್ಯೆಗೆ ಹೆಸರು ನೋಂದಾಯಿಸಿ, ಬಳಿಕ ಎಸ್ಎಂಎಸ್ ಮೂಲಕ ಮಾಹಿತಿ ಪಡೆದು ತಂಬಾಕು ಚಟ ದೂರ ಮಾಡಲು ಮಾರ್ಗೋಪಾಯಗಳನ್ನು ನೀಡಿ ಪ್ರೇರೇಪಿಸುತ್ತದೆ.
ಶೀಘ್ರ ನೋಂದಣಿ ಪಡೆಯಲು ಸರ್ಕಾರ ಟೋಲ್ ಫ್ರೀ ನಂಬರ್ ಪ್ರಕಟಿಸಲಿದೆ. ತಂಬಾಕು ವ್ಯಸನಿಗಳ ಸಂಖ್ಯೆಯನ್ನು 2020ರಿಂದ 35ರ ಒಳಗೆ ಶೇ.20ರಿಂದ 30ರಷ್ಟು ಇಳಿಸಲು ಕೇಂದ್ರ ಸರ್ಕಾರ ಯೋಚಿಸಿದೆ. ತಂಬಾಕು ಉತ್ಪನ್ನಗಳ ಮೇಲೆ ಶಾಸನ ವಿಧಿಸಿರುವ ಎಚ್ಚರಿಕೆ ಸಂದೇಶವನ್ನು ಕಡ್ಡಾಯವಾಗಿ ಪ್ರಕಟಿಸಲು ಆದೇಶಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.