ಚೆನ್ನೈ: ತಮಿಳುನಾಡು ಬಿಜೆಪಿ ಮುಖ್ಯಸ್ಥ ಕೆ ಅಣ್ಣಾಮಲೈ ಶುಕ್ರವಾರ ಬೆಳಗ್ಗೆ ಆರು ಬಾರಿ ಸ್ವತಃ ಚಾಟಿ ಬೀಸಿಕೊಂಡು ಮಹಾನ್ ಪ್ರತಿಜ್ಞೆ ಮಾಡಿದ್ದಾರೆ.
ಅಣ್ಣಾಮಲೈ ಹಸಿರು ಲುಂಗಿಯಲ್ಲಿ ಶರ್ಟ್ ಇಲ್ಲದೆ, ಕೈಯಲ್ಲಿ ದೊಡ್ಡ ಚಾಟಿ ಹಿಡಿದುಕೊಂಡು ಆರು ಬಾರಿ ಚಾಟಿ ಬೀಸಿಕೊಂಡಿದ್ದಾರೆ. ಬಳಿಕ ಅವರ ಬೆಂಬಲಿಗರು ಅವರನ್ನು ಅಪ್ಪಿಕೊಂಡು ಚಾಟಿ ಬೀಸುವುದನ್ನು ನಿಲ್ಲಿಸಿದ್ದಾರೆ. ಡ
2026 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆ ಸೋಲನ್ನು ಖಚಿತಪಡಿಸಿಕೊಳ್ಳುವ ಗುರಿಯೊಂದಿಗೆ ಆಡಳಿತಾರೂಢ ಡಿಎಂಕೆ ವಿರುದ್ಧ 48 ದಿನಗಳ ಉಪವಾಸ ಮತ್ತು ಬರಿಗಾಲಲ್ಲಿ ನಡೆಯುವ ಪ್ರತಿಜ್ಞೆಯನ್ನು ಮಾಡಿದ್ದಾರೆ. ಇದರ ಆರಂಭವನ್ನು ಸಂಕೇತಿಸಲು ಚಾಟಿ ಬೀಸಿಕೊಂಡಿದ್ದಾರೆ.
“ಇದು ಯಾವುದೇ ವ್ಯಕ್ತಿ ಅಥವಾ ವಸ್ತುವಿನ ವಿರುದ್ಧದ ಪ್ರತಿಭಟನೆ ಅಲ್ಲ. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ನಿರಂತರ ಅನ್ಯಾಯದ ವಿರುದ್ಧ” ಎಂದು ಅಣ್ಣಾಮಲೈ ಸುದ್ದಿಗಾರರೊಂದಿಗೆ ಹೇಳಿದ್ದಾರೆ. “ಅಣ್ಣಾ ವಿಶ್ವವಿದ್ಯಾಲಯದಲ್ಲಿ ನಡೆದಿರುವುದು ಕೇವಲ ಟಿಪ್ಪಿಂಗ್ ಪಾಯಿಂಟ್. ನೀವು ನೋಡಿದರೆ ಕಳೆದ 3 ವರ್ಷಗಳಿಂದ ಏನಾಗುತ್ತಿದೆ? ಸಾಮಾನ್ಯ ಜನರ ವಿರುದ್ಧ, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಿರಂತರ ಅನ್ಯಾಯ ಮತ್ತು ಭ್ರಷ್ಟಾಚಾರ ನಡೆಯುತ್ತಿದೆ” ಎಂದಿದ್ದಾರೆ.
#WATCH | Coimbatore | Tamil Nadu BJP president K Annamalai self-whips himself as a mark of protest to demand justice in the Anna University alleged sexual assault case. pic.twitter.com/ZoEhSsoo1r
— ANI (@ANI) December 27, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.