ನವದೆಹಲಿ: ಲೋಕಸಭೆಯ ಹೊಸ ಸದಸ್ಯರಲ್ಲಿ ಒಬ್ಬರಾದ ಪ್ರಿಯಾಂಕಾ ಗಾಂಧಿ ಅವರು ಬ್ಯಾಗ್ಗಳಿಗಾಗಿ ದೊಡ್ಡ ಸುದ್ದಿ ಮಾಡಿದ್ದಾರೆ. ಸೋಮವಾರ ಅವರು ಪ್ಯಾಲೆಸ್ತೀನ್ ಎಂದು ಬರೆದಿರುವ ಬ್ಯಾಗ್ ಹಿಡಿದು ಲೋಕಸಭೆಗೆ ಹಾಜರಾಗಿ ಬಿಜೆಪಿ ನಾಯಕರಿಂದ ಟೀಕೆಗೆ ಗುರಿಯಾಗಿದದರು. ಮರುದಿನ, ವಯನಾಡ್ ಸಂಸದೆಯೂ ಆಗಿರುವ ಆಕೆ ಮತ್ತೊಂದು ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳ ದುಃಸ್ಥಿತಿಯನ್ನು ಎತ್ತಿ ತೋರಿಸುವ ಬ್ಯಾಗ್ ಧರಿಸಿ ಸಂಸತ್ತಿಗೆ ಆಗಮಿಸಿದ್ದರು.
ಇದಾದ ಕೆಲವು ದಿನಗಳ ನಂತರ, ಬಿಜೆಪಿ ಸಂಸದ ಅಪರಾಜಿತಾ ಸಾರಂಗಿ ಅವರು 1984 ರ ಸಿಖ್ ದಂಗೆಯ ರಕ್ತದ ಚಿಮ್ಮುವ ಫೋಟೋವನ್ನು ಒಳಗೊಂಡಿರುವ ಬ್ಯಾಗ್ ಅನ್ನು ಪ್ರಿಯಾಂಕಾ ಗಾಂಧಿಗೆ ಉಡುಗೊರೆಯಾಗಿ ನೀಡಿದರು.
1984 ರ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕರ ಪಾತ್ರವನ್ನು ಎತ್ತಿ ತೋರಿಸಿರುವ ಈ ಬ್ಯಾಗ್ ಅನ್ನು ನಗುತ್ತಲೇ ಪ್ರಿಯಾಂಕ ಗಾಂಧಿ ಸ್ವೀಕರಿಸಿದ್ದಾರೆ.
ಗಮನಾರ್ಹವೆಂದರೆ, ಅಕ್ಟೋಬರ್ 31, 1984 ರಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಸಿಖ್ ವಿರೋಧಿ ದಂಗೆಗಳಿಗೆ ಕಾಂಗ್ರೆಸ್ ಪಕ್ಷ ನೇರ ಹೊಣೆಯಾಗಿದೆ. ಈ ವೇಳೆ ದೆಹಲಿ ಮತ್ತು ದೇಶದ ಇತರ ಭಾಗಗಳಲ್ಲಿ ಗಲಭೆಗಳಲ್ಲಿ ಸಾವಿರಾರು ಸಿಖ್ಖರು ಕ್ರೂರವಾಗಿ ಕೊಲ್ಲಲ್ಪಟ್ಟರು.
BJP trolling Priyanka 🔥
BJP MP Aparajita Sarangi brings a tote bag with 1984 inscribed on it as a 'gift' for Priyanka Gandhi.
Will @priyankagandhi accept the gift?pic.twitter.com/1uHIJWe9Ip
— Ankur Singh (@iAnkurSingh) December 20, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.