ಬೆಳ್ತಂಗಡಿ : ಶ್ರೀ ಸಾಮಾನ್ಯರು ಅನಧಿಕೃತವಾಗಿ ವಿದ್ಯುತ್ ಪಡೆದುಕೊಂಡರೆ ಕೂಡಲೇ ವಿದ್ಯುತ್ ವಿಭಾಗದ ಜಾಗೃತ ದಳದವರು ಬಂದು ದಂಡ ಕಟ್ಟಿಸದೇ ಬಿಡುವುದಿಲ್ಲ. ಇದು ಸಾಮಾನ್ಯ ವಿಚಾರ. ಆದರೆ ಗ್ರಾಮ ಪಂಚಾಯತ್ ಆಡಳಿತ ಈ ರೀತಿ ಮಾಡಿದರೆ? ಇವರಿಗೂ ವಿನಾಯತಿ ಇಲ್ಲ ಎಂಬುದನ್ನು ಇಲಾಖೆ ತೋರಿಸಿಕೊಟ್ಟಿದೆ. ಪಂ.ನ ಈ ರೀತಿಯ ವ್ಯವಹಾರದಿಂದ ಅಲ್ಲಿನ ಜನಕತ್ತಲ ಭಾಗ್ಯಕಾಣುವ ದಿನ ದೂರವಿಲ್ಲ ಎಂದು ಹೇಳಲಾಗುತ್ತಿದೆ.
ಉಜಿರೆಗ್ರಾಮ ಪಂ. ವ್ಯಾಪ್ತಿಯ ಮುಂಡತ್ತೋಡಿ, ಪೆರ್ಲ, ಲಲಿತ ನಗರ, ಅಜಿತ್ ನಗರ, ವಿದ್ಯಾನಗರ, ಪಟುವೆಟ್ಟು, ಶ್ರೀನಗರ, ಓಡಲ ಪ್ರದೇಶಗಳಲ್ಲಿ ಯಾವುದೇ ಮಾಪಕವಿಲ್ಲದೆ ನೇರ ವಿದ್ಯುತ್ ತಂತಿಗಳಿಂದ ಬೀದಿ ದೀಪಗಳಿಗೆ ಅನಧಿಕೃತವಾಗ ಸಂಪರ್ಕ ನೀಡಲಾಗಿದೆ ಎಂದು ಪಂ.ವ್ಯಾಪ್ತಿಯ ನಿವಾಸಿ ಬಾಲಸುಬ್ರಹ್ಮಣ್ಯ ಅವರು ಆರೋಪಿಸಿ ಮಂಗಳೂರು ಅತ್ತಾವರದ ವಿದ್ಯುತ್ ಸರಬರಾಜು ಕಂಪೆನಿಯ ಜಾಗೃತ ದಳದ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಪರಿಗಣಿಸಿದ ದಳದವರು ಕೂಡಲೇ ಉಜಿರೆಗೆ ಆಗಮಿಸಿ ಪರಿಶೀಲನೆ ನಡೆಸಿದರು.
ಅನಧಿಕೃತವಾಗಿ ನೇರ ವಿದ್ಯುತ್ ಸಂಪರ್ಕ ಪಡೆದಿರುವುದು ಪತ್ತೆ ಹಚ್ಚಿ ಪಂ.ಅಭಿವೃದ್ಧಿ ಅಧಿಕಾರಿಯನ್ನು ಹೊಣೆಗಾರನನ್ನಾಗಿ ಮಾಡಲಾಯಿತಲ್ಲದೆ ಪ್ರಕರಣ ದಾಖಲಿಸಿಕೊಂಡರು. ಒಂದು ವರ್ಷದಲ್ಲಿ ಸರಾಸರಿಒಟ್ಟು 9072 ಯುನಿಟ್ ವಿದ್ಯುತ್ನ್ನು ಬಳಕೆ ಮಾಡಿರುವುದಾಗಿ ಅಂದಾಜಿಸಿ ರೂ. 1,00,963 ದಂಡ ವಿಧಿಸಿದ್ದಾರೆ. ಈ ಬಿಲ್ಲನ್ನು 30 ದಿನಗಳ ಒಳಗೆ ಪಾವತಿಸುವಂತೆ ಸೂಚನೆ ನೀಡಿದ್ದಲ್ಲದೆ ಅನಧಿಕೃತ ಹೆಚ್ಚುವರಿಜೋಡಣೆಯನ್ನು 3 ತಿಂಗಳ ಒಳಗಾಗಿ ಕಳಚಿ, ಶಾಖಾಧಿಕಾರಿ ಉಜಿರೆ ಇವರ ಮುಖಾಂತರ ಲಿಖಿತ ದಾಖಲೆಗಳನ್ನು ಸಲ್ಲಿಸಿ, ನಿಯಮಾನುಸಾರ ಹೆಚ್ಚುವರಿ ಹೊರೆಯನ್ನು ಪಡೆದುಕೊಳ್ಳಬೇಕು.
ತಪ್ಪಿದರೆ ಪ್ರತೀ ತಿಂಗಳು ಈ ಹೊರೆಗೆ ದಂಡವನ್ನು ಬಿಲ್ಲಿನಲ್ಲಿ ಸೇರಿಸಲಾಗುವುದು. 30 ದಿನದೊಳಗೆ ಪಾವತಿ ಮಾಡದಿದ್ದಲ್ಲಿ ಈ ಬಾಕಿಯನ್ನು ಬೇರೆ ಸ್ಥಾವರಕ್ಕೆ ವರ್ಗಾವಣೆ ಮಾಡಿ ಕಂದಾಯ ಬಾಕಿ ಎಂದು ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದುಎಚ್ಚರಿಕೆಯನ್ನು ನೀಡಲಾಗಿದೆ. ಈಗಾಗಲೇ ಉಜಿರೆ ಗ್ರಾ.ಪಂ. ಮೆಸ್ಕಾಂಗೆ ರೂ.1 ಕೋಟಿ ವಿದ್ಯುತ್ ಬಿಲ್ಲನ್ನುಕಟ್ಟದೆ ಬಾಕಿ ಇರಿಸಿಕೊಂಡಿದ್ದು, ಇದೀಗ ರೂ.1 ಲಕ್ಷ ದಂಡವನ್ನೂ ಕಟ್ಟಬೇಕಾಗಿ ಬಂದಿದೆ. ಇದು ಹೀಗೆ ಮುಂದುವರಿದಲ್ಲಿ ಉಜಿರೆಗೆ ಕತ್ತಲ ಭಾಗ್ಯ ಗ್ಯಾರಂಟಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.