ಅಗರ್ತಲಾ: ಭಾರತ-ಬಾಂಗ್ಲಾ ಗಡಿ ಪ್ರದೇಶವಾದ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಸೋನಮುರಾದಲ್ಲಿ ಬೀಡುಬಿಟ್ಟಿರುವ ಗಡಿ ಭದ್ರತಾ ಪಡೆ (ಬಿಎಸ್ಎಫ್) 81 ಬೆಟಾಲಿಯನ್ ಎನ್ಸಿ ನಗರದಲ್ಲಿ ಸುಮಾರು ರೂ 1.74 ಕೋಟಿ ಮೌಲ್ಯದ 2 ಕಿಲೋಗ್ರಾಂ 177 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಬಿಎಸ್ಎಫ್ ಕಾರ್ಯಾಚರಣೆಯನ್ನು ಪ್ರಾರಂಭಿಸಿ ಭಾರೀ ಮೌಲ್ಯದ ಬಂಗಾರ ವಶಪಡಿಸಿಕೊಂಡಿದೆ. ಈ ಕಾರ್ಯಾಚರಣೆ ಗುರುವಾರ ರಾತ್ರಿ 9 ಗಂಟೆಗೆ ಮುಕ್ತಾಯವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2-3 ಬಾಂಗ್ಲಾದೇಶಿ ಸ್ಮಗ್ಲರ್ಗಳು ಗಡಿ ದಾಟಿ ಕೆಲವು ವಸ್ತುಗಳನ್ನು ಗಡಿಯ ಕಡೆಗೆ ಎಸೆದರು. ಆದರೆ ದಟ್ಟ ಮಂಜಿನಿಂದಾಗಿ ಕಳ್ಳಸಾಗಣೆದಾರರು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಗುರುವಾರ ಸಂಜೆ ಸುಮಾರು 6 ಗಂಟೆಗೆ, ಎನ್ಸಿ ನಗರ ಗಡಿಯಲ್ಲಿ ಚಿನ್ನ ಕಳ್ಳಸಾಗಣೆಯಾಗುವ ಸಾಧ್ಯತೆಯಿದೆ ಎಂದು ನಮಗೆ ಮಾಹಿತಿ ಬಂದಿತು. ಇದನ್ನು ತಡೆಯಲು, ನಾವು ತ್ವರಿತವಾಗಿ ದಾಳಿ ನಡೆಸಿದ್ದೇವೆ. ನಮ್ಮ ಕಾರ್ಯಾಚರಣೆಯು ಸಂಜೆ 6:30 ರಿಂದ ರಾತ್ರಿ 9:00 ರವರೆಗೆ ನಡೆಯಿತು, 2-3 ಬಾಂಗ್ಲಾದೇಶದ ಕಳ್ಳಸಾಗಣೆದಾರರು ಗಡಿಯನ್ನು ದಾಟಿದರು ಮತ್ತು ಕೆಲವು ವಸ್ತುಗಳನ್ನು ಬಿಸಾಕಿದರು. ಆದರೆ ತಕ್ಷಣ ಕಾರ್ಯಪ್ರವೃತ್ತರಾದ ನಮ್ಮನ್ನು ಕಂಡು ದಟ್ಟ ಮಂಜಿನಲ್ಲಿ ಅವರು ನಾಪತ್ತೆಯಾಗಿದ್ದಾರ” ಎಂದು ಬಿಎಸ್ಎಫ್ ಅಧಿಕಾರಿ ತಿಳಿಸಿದ್ದಾರೆ.
“ಆದರೆ ನಾವು 2 ಕಿಲೋಗ್ರಾಂ ಮತ್ತು 177 ಗ್ರಾಂ ಚಿನ್ನವನ್ನು ಯಶಸ್ವಿಯಾಗಿ ವಶಪಡಿಸಿಕೊಂಡಿದ್ದೇವೆ. ನಿಮಗೆ ತಿಳಿದಿರುವಂತೆ ಮಾರುಕಟ್ಟೆಯಲ್ಲಿ ಅದರ ಮೌಲ್ಯ 1.74 ಕೋಟಿ ರೂ. ನಿನ್ನೆ ರಾತ್ರಿ ನಡೆದ ಶೋಧ ಕಾರ್ಯಾಚರಣೆ ವೇಳೆ ನಮ್ಮ ಸಿಬ್ಬಂದಿ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.