ದಾವಣಗೆರೆ: ವಕ್ಫ್ ಸಮಸ್ಯೆ, ಭೂಮಿ ಕಬ್ಜಾ ಮಾಡುವುದನ್ನು ಗಮನಿಸಿ ಬಿಜೆಪಿ 3 ತಂಡಗಳಲ್ಲಿ ಪ್ರವಾಸ ಮಾಡುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ದಾವಣಗೆರೆಯಲ್ಲಿ ಇಂದು ಸುದ್ದಿಗೋಷ್ಠ್ಟಿಯಲ್ಲಿ ಮಾತನಾಡಿದ ಅವರು, ವಕ್ಫ್ ನೋಟಿಸಿನಿಂದ ತೊಂದರೆಗೆ ಒಳಗಾದವರ ಮಾಹಿತಿ ಸಂಗ್ರಹಿಸಲಾಗುತ್ತಿದೆ. 3 ತಂಡಗಳು ಸಂಗ್ರಹಿಸಿದ ಮಾಹಿತಿಯನ್ನು ಜಂಟಿ ಸಂಸದೀಯ ಸಮಿತಿ ಮತ್ತು ರಾಜ್ಯ ಸರಕಾರಕ್ಕೆ ಸಲ್ಲಿಸಿ ರೈತರು, ಮಠಮಾನ್ಯಗಳಿಗೆ ಅನ್ಯಾಯ ಆಗದಂತೆ ತಡೆಯುವ ಉದ್ದೇಶ ಪಕ್ಷದ್ದು ಎಂದು ವಿವರಿಸಿದರು.
ಧಾರವಾಡ ಜಿಲ್ಲೆ ಮಿಸ್ರಿಕೋಟೆಯಲ್ಲಿ ಹಿಂದೂ ರುದ್ರಭೂಮಿಯನ್ನು ವಕ್ಫ್ ಆಸ್ತಿ ಎಂದು ತಿಳಿಸಿದ್ದಾರೆ. ಶಾಲೆಗಳು, ಸಹಕಾರ ಸೊಸೈಟಿ ಜಾಗ, ಅಂಬೇಡ್ಕರರ ವಿಗ್ರಹ ಇರುವ ಜಾಗವನ್ನೂ ವಕ್ಫ್ ಆಸ್ತಿ ಎಂದು ನೋಟಿಸ್ ನೀಡಿದ್ದಾರೆ ಎಂದು ಆಕ್ಷೇಪಿಸಿದರು.
ಹಾವೇರಿ ಜಿಲ್ಲೆಯಲ್ಲೂ ರೈತರ ಅಹವಾಲು ಸ್ವೀಕರಿಸಿದ್ದೇವೆ ಎಂದ ಅವರು ಹರಿಹರ ತಾಲ್ಲೂಕಿನ ಬಾನುವಳ್ಳಿಯಲ್ಲಿ ರುದ್ರಭೂಮಿಗೆ ಕೊಟ್ಟ 4 ಎಕರೆಗೂ ಹೆಚ್ಚು ಜಾಗವನ್ನು ಪಹಣಿಯಲ್ಲಿ ಖಬರಸ್ಥಾನ ಎಂದು ತಿಳಿಸಿದ್ದಾರೆ ಎಂದು ಟೀಕಿಸಿದರು. ದರ್ಗಾ, ಮಸೀದಿ ಜಾಗ ಕಾಪಾಡಲು ವಕ್ಫ್ ಇರುವುದು. ಇಲ್ಲಿ ದರ್ಗಾ, ಮಸೀದಿಯವರು ಪತ್ರ ಬರೆದು ವಕ್ಫ್ಗೆ ಸೇರಿದೆ ಎಂದು ತಿಳಿಸಿದೊಡನೆ ಅದನ್ನು ವಕ್ಫ್ ಆಸ್ತಿ ಎಂದು ಕಾಲಂ 11ರಲ್ಲಿ ಬರೆಯಲಾಗುತ್ತಿದೆ ಎಂದು ಆರೋಪಿಸಿದರು.
ಸಿಎಂ ಆದೇಶದಂತೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕಬರಸ್ಥಾನ, ಮಸೀದಿ ಜಾಗಮ ರೈತರು, ಮಠಮಾನ್ಯಗಳ ಜಾಗ ವಕ್ಫ್ ಆಗಿದ್ದರೆ ಕಾಂಪೌಂಡ್ ಹಾಕಲು ಜಿಲ್ಲಾ ಅದಾಲತ್ ಮಾಡುತ್ತಿದ್ದಾರೆ ಎಂದು ಅವರು ಖಂಡಿಸಿದರು. ವಕ್ಫ್ ಹೆಸರಿನಲ್ಲಿ ರೈತರ, ಮಠಗಳ ಭೂಮಿ ಕಬಳಿಸುವ ನೀತಿಯನ್ನು ತೀವ್ರವಾಗಿ ಖಂಡಿಸಿದರು.
ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿÀ ಸುನಿಲ್ ಕುಮಾರ್, ಮಾಜಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಸಂಸದ ಮುನಿಸ್ವಾಮಿ, ವಿಧಾನ ಪರಿಷತ್ ಮಾಜಿ ಸದಸ್ಯ ವೈ.ಎ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷರಾದ ರಾಜಶೇಖರ್ ಹಾಗೂ ಪ್ರಮುಖರಾದ ಶಿವಯೋಗಿ ಸ್ವಾಮಿ ಅವರು ಇದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.