ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ವತಿಯಿಂದ ಅ.6 ರಿಂದರಾಜ್ಯ ಮಟ್ಟದ 17 ನೇ ವರ್ಷದ ಭಜನಾ ತರಬೇತಿ ಕಮ್ಮಟ ಧರ್ಮಸ್ಥಳದಲ್ಲಿ ನಡೆಯುತ್ತಿದ್ದು ಈ ಬಾರಿ ರಾಜ್ಯದ ವಿವಿಧ ಭಾಗಗಳ 102 ಮಂಡಳಿಗಳಿಂದ 193 ಶಿಬಿರಾರ್ಥಿಗಳು ತರಬೇತಿ ಪಡೆದಿದ್ದಾರೆ.
ಕಮ್ಮಟದಲ್ಲಿ ಕಲಾವಿದರಾದ ಎಂ.ಎಸ್.ಗಿರಿಧರ್, ರಾಮಕೃಷ್ಣಕಾಟುಕುಕ್ಕೆ, ಮನೋರಮಾ ತೋಳ್ಪಡಿತ್ತಾಯ, ಮೋಹನದಾಸ ಶೆಣೈ, ಚಂದ್ರಶೇಖರ ಕೆದಿಲಾಯ, ದೇವದಾಸ ಪ್ರಭು, ಮಂಗಲದಾಸ್ಗುಲ್ವಾಡಿ, ಗೀತಾ ಮತ್ತು ಭಗೀರಥ ಶಿಬಿರಾರ್ಥಿಗಳಿಗೆ ತರಬೇತಿ ನೀಡಿದ್ದು,ರಾಮಕೃಷ್ಣ ಕಾಟುಕುಕ್ಕೆ ಅವರು ರಾಗ, ತಾಳ, ಭಜನಾಅಭ್ಯಾಸದಕುರಿತು ಮಾಹಿತಿ ನೀಡಿದ್ದಾರೆ. ಪ್ರತಿದಿನ ಸಂಜೆ ಮಹಿಳಾ ಶಿಬಿರಾರ್ಥಿಗಳಿಗೆ ಶೋಭಾನೆ ಹಾಡುಗಳ ಅಭ್ಯಾಸ ಮತ್ತು ನೃತ್ಯ ತರಬೇತಿಯನ್ನೂ ನೀಡಲಾಗಿದೆ. ಕಟೀಲಿನ ಸೋಂದಾ ಭಾಸ್ಕರ ಭಟ್ ಅವರು ಸಂಸ್ಕಾರ ಮತ್ತು ಸಂಸ್ಕೃತಿ ಬಗ್ಗೆ, ವಿದ್ವಾಂಸ ಕೇಶೆಕೋಡಿ ಸೂರ್ಯನಾರಾಯಣ ಭಟ್ ಅವರು ಭಜನಾ ಮಂಡಳಿಯ ಸಾಮಾಜಿಕ ಜವಾಬ್ದಾರಿಯ ಕುರಿತು ಹಾಗೂ ಸಂದರ್ಶಕ ಉಪನ್ಯಾಸಕ ಡಾ|ಹೆಚ್.ಮಾಧವ ಭಟ್ ಭಜನೆ ಮತ್ತು ಪುರಾಣ ಕತೆಗಳ ಬಗ್ಗೆ ಉಪನ್ಯಾಸ ನೀಡಿದ್ದಾರೆ.
ಪ್ರತಿ ದಿನ ಶಿಬಿರಾರ್ಥಿಗಳು ಎರಡು ತಂಡಗಳಲ್ಲಿ ಧರ್ಮಸ್ಥಳ ಕ್ಷೇತ್ರದಕಲ್ಲೇರಿ, ಅಶೋಕ ನಗರ, ಗಾಯತಿ, ಸನ್ನಿಧಿ, ಅಗ್ರಹಾರ, ಶರಾವತಿ, ಸಾಕೇತ, ಗಂಗೋತ್ರಿ, ನೇತ್ರಾವತಿ, ವೈಶಾಲಿ, ಬಸದಿ, ಮೂಡಂಗಲ್ಲು, ಬಾಹುಬಲಿ ಬೆಟ್ಟ, ರಥಬೀದಿ, ಬೀಡಿನ ಅಂಗಳ, ಮುಖ್ಯ ಬೀದಿಗಳಲ್ಲಿ ನಗರ ಸಂಕೀರ್ತನೆ ಕೈಗೊಂಡಿದ್ದಾರೆ. ವೆಂಕಟ್ರಮಣ ಮಹಿಳಾ ಭಜನಾ ಮಂಡಳಿ ಕಾರ್ಕಳ ಹಾಗೂ ವಜಾ ಸಾಹಿತ್ಯ ಕೂಟ ಬಂಗ್ರ ಮಂಜೇಶ್ವರ ಇವರು ಭಜನಾ ಪ್ರಾತ್ಯಕ್ಷಿಕೆಯನ್ನು ನೀಡಿದ್ದಾರೆ.
ಇಂದು ಸಂಜೆ ಕಮ್ಮಟದ ಸಮಾರೋಪ ಸಮಾರಂಭ ಹಾಗೂ ಆಕರ್ಷಕ ಭಜನೋತ್ಸವ ನೆರವೇರಲಿದೆ. ಮಂತ್ರಾಲಯದ ಶ್ರೀ ಸುಭುದೇಂದ್ರತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಧರ್ಮಾಧಿಕಾರಿಡಾ|ವೀರೇಂದ್ರ ಹೆಗ್ಗಡೆ ವಹಿಸಲಿದ್ದು ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ ಶುಭಸಂದೇಶ ನೀಡಲಿದ್ದಾರೆ. ಅತಿಥಿಗಳಾಗಿ ಶಂಕರಟಿವಿಯ ವ್ಯವಸ್ಥಾಪಕ ನಿರ್ದೇಶಕ ಎಂ.ಹರಿಕೃಷ್ಣ, ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿರುತ್ತಾರೆ. ಇದಕ್ಕೂ ಮೊದಲು ದ.ಕ. ಜಿಲ್ಲೆಯ ಆಯ್ದ ಸುಮಾರು 200 ಭಜನಾ ತಂಡಗಳ 2000 ಭಜನಾ ಕಾರ್ಯಕರ್ತರಿಂದ ಕ್ಷೇತ್ರದಲ್ಲಿ ಭಜನೆಯೊಂದಿಗೆ ಶೋಭಾಯಾತ್ರೆ ಹಾಗೂ ಅಮೃತವರ್ಷಿಣಿ ಸಭಾಭವನದಲ್ಲಿ ನೃತ್ಯ ಭಜನೆ ಮಾಡಲಿದ್ದಾರೆ. ಕಳೆದ 16 ವರ್ಷಗಳಲ್ಲಿ ರಾಜ್ಯದಆಯ್ದ 1401 ಭಜನಾ ಮಂಡಳಿಗಳ 2690 ಸದಸ್ಯರಿಗೆತರಬೇತಿ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.