ನವದೆಹಲಿ: ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಶುಕ್ರವಾರ ತಮಿಳುನಾಡಿನ ರಾಮೇಶ್ವರಂನಲ್ಲಿರುವ ಹೊಸ ಪಂಬನ್ ಸೇತುವೆಯ ಚಿತ್ರಗಳು ಮತ್ತು ತುಣುಕುಗಳ ಸರಣಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಈ ಸೇತುವೆಯು ಭಾರತದ ಮೊದಲ ಲಂಬ ಲಿಫ್ಟ್ ರೈಲ್ವೆ ಸಮುದ್ರ ಸೇತುವೆಯಾಗಿದ್ದು, ಅಸ್ತಿತ್ವದಲ್ಲಿರುವ 105 ವರ್ಷಗಳ ಹಳೆಯ ಸೇತುವೆಯನ್ನು ಬದಲಾಯಿಸಲಿದೆ.
ಎಕ್ಸ್ ಪೋಸ್ಟ್ನಲ್ಲಿ ವೈಷ್ಣವ್ ಅವರು ಯೋಜನೆಯ ವಿವಿಧ ಅಂಶಗಳನ್ನು ಹೈಲೈಟ್ ಮಾಡಿದ್ದಾರೆ.
ಹೊಸ ಪಂಬನ್ ಸೇತುವೆಯನ್ನು “ಆಧುನಿಕ ಎಂಜಿನಿಯರಿಂಗ್ ಅದ್ಭುತ” ಎಂದು ವಿವರಿಸಿರುವ ಅವರುಮ ಯೋಜನೆಯು ಗಮನಾರ್ಹವಾದ ನವೀಕರಣವಾಗಿದೆ, ವೇಗ, ಸುರಕ್ಷತೆ ಮತ್ತು ನಾವೀನ್ಯತೆಗಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು.
1914 ರಿಂದ ಕಾರ್ಯನಿರ್ವಹಿಸುತ್ತಿರುವ ಹಳೆಯ ಪಂಬನ್ ರೈಲು ಸೇತುವೆಯನ್ನು ಪ್ರಸ್ತಾಪಿಸಿರುವ ಅವರು, ತುಕ್ಕು ಹಿಡಿದ ಕಾರಣದಿಂದ ಡಿಸೆಂಬರ್ 2022 ರಲ್ಲಿ ಅದನ್ನು ಸ್ಥಗಿತಗೊಳಿಸಲಾಯಿತು ಎಂದು ಹೇಳಿದರು. “1914 ರಲ್ಲಿ ನಿರ್ಮಿಸಲಾದ ಹಳೆಯ ಪಂಬನ್ ರೈಲು ಸೇತುವೆಯು ಮುಖ್ಯ ಭೂಭಾಗವನ್ನು ರಾಮೇಶ್ವರಂಗೆ 105 ವರ್ಷಗಳ ಕಾಲ ಸಂಪರ್ಕಿಸಿತು. ಸವೆತದಿಂದಾಗಿ ಡಿಸೆಂಬರ್ 2022 ರಲ್ಲಿ ಇದನ್ನು ನಿಷ್ಕ್ರಿಯಗೊಳಿಸಲಾಯಿತು, ಇದು ಆಧುನಿಕ ಹೊಸ ಪಂಬನ್ ಸೇತುವೆಯ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು, ಇದು ಸಂಪರ್ಕದ ಹೊಸ ಯುಗವನ್ನು ಗುರುತಿಸುತ್ತದೆ!” ಎಂದಿದ್ದಾರೆ.
ಹಳೆಯ ಮತ್ತು ಹೊಸ ಸೇತುವೆಗಳ ನಡುವೆ ಹೋಲಿಕೆ ಮಾಡಿರುವ ವೈಷ್ಣವ್, ಹಳೆಯ ಸೇತುವೆಯು ಮ್ಯಾನುಯಲ್ ಶೆರ್ಜರ್ ಲಿಫ್ಟ್ ಸ್ಪ್ಯಾನ್, ಸಿಂಗಲ್ ಟ್ರ್ಯಾಕ್ ಮತ್ತು ಕಡಿಮೆ-ವೇಗದ ರೈಲುಗಳಿಗೆ ಸೀಮಿತವಾಗಿದೆ, 19 ಮೀಟರ್ ಗಾಳಿಯ ತೆರವು ಹೊಂದಿದೆ. ಇದಕ್ಕೆ ವಿರುದ್ಧವಾಗಿ, ಹೊಸ ಸಂಪೂರ್ಣ ಸ್ವಯಂಚಾಲಿತ ಲಂಬ ಲಿಫ್ಟ್ ಸ್ಪ್ಯಾನ್ ಸುರಕ್ಷಿತ 22-ಮೀಟರ್ ಕ್ಲಿಯರೆನ್ಸ್ ನೀಡುತ್ತದೆ, ಡಬಲ್ ಟ್ರ್ಯಾಕ್ಗಳು ಮತ್ತು ವಿದ್ಯುದ್ದೀಕರಣವನ್ನು ಬೆಂಬಲಿಸುತ್ತದೆ ಮತ್ತು ಹೆಚ್ಚಿನ ವೇಗದ ರೈಲುಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಎಂದಿದ್ದಾರೆ.
🚆The New Pamban Bridge: A modern engineering marvel!
🧵Know the details 👇🏻 pic.twitter.com/SQ5jCaMisO
— Ashwini Vaishnaw (@AshwiniVaishnaw) November 29, 2024
1/ 🚆India’s first vertical lift railway sea bridge!
The New Pamban Bridge connects the Indian mainland to Rameswaram Island, Tamil Nadu. This state-of-the-art project is a significant upgrade, designed for speed, safety and innovation. pic.twitter.com/HVBafCM1Ne— Ashwini Vaishnaw (@AshwiniVaishnaw) November 29, 2024
2/ ⏳A journey through time
🚄Built in 1914, the old Pamban Rail Bridge connected the mainland to Rameswaram for 105 years.
Decommissioned in Dec 2022 due to corrosion, it paved the way for the modern New Pamban Bridge, marking a new era of connectivity! pic.twitter.com/zL1kCOj9jH— Ashwini Vaishnaw (@AshwiniVaishnaw) November 29, 2024
4/ 🏗️ Engineering brilliance
Stretching over 2.05 km, the bridge is built at a cost of ₹535 crores by Rail Vikas Nigam Limited (RVNL). It’s designed to handle faster trains and increased traffic.
🚄 100 spans, of which 99 are 18.3m long
🚄 A 73m navigational span for marine… pic.twitter.com/PshQQNFYim— Ashwini Vaishnaw (@AshwiniVaishnaw) November 29, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.