ಬೆಳ್ತಂಗಡಿ : ಜೆ.ಎಂ.ಎಸ್., ಡಿ.ವೈ.ಎಫ್.ಐ ಮತ್ತು ಇತರ ಸೋದರ ಸಂಘಟನೆಗಳ ನೇತೃತ್ವದಲ್ಲಿ ವಿದ್ಯಾರ್ಥಿನಿ ಸೌಜನ್ಯ ಪ್ರಕರಣದ ಸಿಬಿಐ ತನಿಖಾ ವರದಿ ತಕ್ಷಣ ನೀಡಲು ಆಗ್ರಹಿಸಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ ಬಿ. ಎಂ. ಭಟ್ ಮಾತನಾಡಿ, ಸೌಜನ್ಯ ಪ್ರಕರಣವಾಗಿ ವರ್ಷ 3 ಕಳೆದರೂ ಇಷ್ಟರವರೆಗೂ ನ್ಯಾಯ ಸಿಕ್ಕಿಲ್ಲ. ಸಿಬಿಐ ತನಿಖಾ ವರದಿಯನ್ನು ನೀಡಿಲ್ಲ. ಇನ್ನು ಒಂದು ತಿಂಗಳ ಒಳಗೆ ಸಿಬಿಐ ತನಿಖೆ ವರದಿ ನೀಡದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಪುನಃ ನಡೆಸುತ್ತೇವೆ ಎಂದು ಅವರು ಎಚ್ಚರಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ದಲಿತ ಹಕ್ಕು ಹೋರಾಟ ಸಮಿತಿಯ ಶೇಖರ ಎಲ್., ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ವಸಂತ ನಡ, ಸಿಐಟಿಯು ತಾಲೂಕು ಮುಖಂಡೆ ಈಶ್ವರಿ ಪದ್ಮುಂಜ ಮಾತಾಡಿದರು. ಜನವಾದಿ ಮಹಿಳಾ ಸಂಘಟನೆಯ ತಾಲೂಕು ಅಧ್ಯಕ್ಷೆ ಕಿರಣಪ್ರಭಾ ಸ್ವಾಗತಿಸಿದರು.ಕೊನೆಗೆ ಡಿ.ವೈ.ಎಫ್.ಐ ತಾಲೂಕು ಅಧ್ಯಕ್ಷ ವಿಠಲ ಮಲೆಕುಡಿಯ, ಸಿಐಟಿಯು ಮುಖಂಡರುಗಳಾದ ರೋಹಿಣಿ, ಜಯರಾಮ ಮಯ್ಯ, ನೆಬಿಸಾ, ದೇವಕಿ, ಜಯಶ್ರೀ, ಸೌಮ್ಯ, ಮೀನಾಕ್ಷಿ, ಜಯಂತಿ, ಸಿಐಟಿಯು ಕಾರ್ಯಕರ್ತರು ಉಪಸ್ಥಿತರಿದ್ದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.