ನವದೆಹಲಿ: ಇಂದು ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನಾಚರಣೆ. ಈ ಮಹತ್ವಪೂರ್ಣ ದಿನವನ್ನು ಭಾರತ ಸರ್ಕಾರ ಪ್ರತಿವರ್ಷ ಜನಜಾತೀಯ ಗೌರವ ದಿವಸ್ ಆಗಿ ಆಚರಣೆ ಮಾಡುವ ಮೂಲಕ ಬುಡಕಟ್ಟು ಸಮುದಾಯಕ್ಕೆ ನಿಜವಾದ ಗೌರವಾರ್ಪಣೆಯನ್ನು ಸಲ್ಲಿಸುತ್ತಿದೆ. ಮುಂಡಾ ಅವರ ಪರಂಪರೆ ಮತ್ತು ವೀರತ್ವಕ್ಕೆ ಇದು ಶ್ರೇಷ್ಠ ಗೌರವವೂ ಆಗಿದೆ.
ಭಾರತದ ಬುಡಕಟ್ಟು ಸ್ವಾತಂತ್ರ್ಯ ಚಳವಳಿಯಲ್ಲಿ ಅವರ ಪಾತ್ರವನ್ನು ಗೌರವಿಸಲು ನವೆಂಬರ್ 15 ರಂದು ಬಿರ್ಸಾ ಮುಂಡಾ ಜಯಂತಿಯ ಆಚರಣೆಯನ್ನು ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿತು. 2021 ರಂದು ಈ ದಿನವನ್ನು ಬುಡಕಟ್ಟು ಜನರ ಗೌರವ ದಿನವಾಗಿಯೂ ಘೋಷಿಸಲಾಯಿತು
ಮುಂಡಾ ಅವರನ್ನು ಬುಡಕಟ್ಟು ಸಮಾಜದ ಹೋರಾಟ, ಸ್ವಾಭಿಮಾನ ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಹೋರಾಡಿದ ಮಹಾ ಪುರುಷನಾಗಿ ನೋಡಲಾಗುತ್ತದೆ. ಅವರು ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವು ಬುಡಕಟ್ಟು ಜನರಲ್ಲಿ ಸ್ವಾಭಿಮಾನ ಮತ್ತು ಏಕತೆಯ ಭಾವನೆಯನ್ನು ಮೂಡಿಸಿತ್ತು. ಉಲ್ಗುಲನ್ ಎನ್ನುವ ಮಹಾ ದಂಗೆಯು ಬ್ರಿಟಿಷರ ದಮಕಾರಿ ನೀತಿಗಳ ವಿರುದ್ಧ ಬುಡಕಟ್ಟು ಜನರನ್ನು ಒಗ್ಗೂಡುವಂತೆ ಮಾಡಿತು.
ಮೋದಿ ಸರ್ಕಾರವು ಮುಂಡಾ ಪರಂಪರೆಗೆ ಅನನ್ಯ ಗೌರವವನ್ನು ಸಲ್ಲಿಸುವ ಸಲುವಾಗಿ ಜಾರ್ಖಂಡ್ನಲ್ಲಿ ಬಿರ್ಸಾ ಮುಂಡಾ ಹೆಸರಿನಲ್ಲಿ ಕೇಂದ್ರ ಕಾರಾಗೃಹ ಮತ್ತು ವಿಮಾನ ನಿಲ್ದಾಣವನ್ನು ನಿರ್ಮಿಸಿದೆ. ಜಾರ್ಖಂಡ್ನಲ್ಲಿ ಬುಡಕಟ್ಟು ಸಮುದಾಯದ ಜನರು ಬಿರ್ಸಾ ಮುಂಡಾ ಅವರನ್ನು ಆರಾಧ್ಯ ದೇವರಾಗಿ ಕಾಣುತ್ತಾರೆ. ಹೀಗಾಗಿಯೇ ಅವರನ್ನು ಭಗವಾನ್ ಬಿರ್ಸಾ ಮುಂದಾ ಎಂದು ಕರೆಯಲಾಗುತ್ತದೆ. ಬಿರ್ಸಾ ಮುಂಡಾ ಜಯಂತಿಯಂದು ಅವರ ಪ್ರತಿಮೆಗಳು ಮತ್ತು ಸ್ಮಾರಕಗಳಿಗೆ ಗೌರವ ಸಲ್ಲಿಸಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗಣ್ಯರು ನಾಡಿನ ಜನತೆಗೆ ಬಿರ್ಸಾ ಮುಂಡಾ ಜಯಂತಿಯ ಶುಭಕಾಮನೆಗಳನ್ನು ತಿಳಿಸಿದ್ದಾರೆ.
भगवान बिरसा मुंडा जी ने मातृभूमि की आन-बान और शान की रक्षा के लिए अपना सर्वस्व न्योछावर कर दिया। उनकी जन्म-जयंती ‘जनजातीय गौरव दिवस’ के पावन अवसर पर उन्हें मेरा कोटि-कोटि नमन।#JanjatiyaGauravDiwas pic.twitter.com/GT4OpeNIYr
— Narendra Modi (@narendramodi) November 15, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.