ನವದೆಹಲಿ: ದೇಸಿ ವಿಮಾನಯಾನ ಸಂಸ್ಥೆಯಾಗಿರುವ ವಿಸ್ತಾರ ವಿಮಾನಯಾನ ಸಂಸ್ಥೆ ಸೋಮವಾರ ತನ್ನ ಕೊನೆಯ ಹಾರಾಟವನ್ನು ನಡೆಸಿದೆ. ವಿಸ್ತಾರ ವಿಮಾನಯಾನ ಸಂಸ್ಥೆ ದೇಸಿ ವಿಮಾನಯಾನದಲ್ಲಿ ಮೊದಲ ಬಾರಿಗೆ ಪ್ರೀಮಿಯಂ ಎಕಾನಮಿ ಕ್ಲಾಸ್ ಸೌಲಭ್ಯವನ್ನು ಒದಗಿಸಿದ್ದ ಸಂಸ್ಥೆಯಾಗಿತ್ತು. ಇಂದಿನಿಂದ ಅದು ಏರ್ ಇಂಡಿಯಾದಡಿ ಹಾರಾಟ ನಡೆಸಲಿದೆ.
ಸೋಮವಾರ, ಏರ್ಲೈನ್ಸ್ ತನ್ನ ಕೊನೆಯ ಪ್ರಯಾಣವನ್ನು ಏರ್ಬಸ್ A320 ಫ್ಲೈಟ್ UK776 ನೊಂದಿಗೆ ಮುಂಬೈಗೆ ವಿಮಾನ ನಿಲ್ದಾಣದಿಂದ ರಾತ್ರಿ 9 ಗಂಟೆಗೆ ನಡೆಸಿತು. ವಿಮಾನವು ತುಂಬಿ ತುಳುಕುತ್ತಿತ್ತು ಮತ್ತು ಸಿಬ್ಬಂದಿ ಈ ವೇಳೆ ಅಂತಿಮ ವಿದಾಯವನ್ನು ಕೋರಿದರು. ಈ ಕ್ಷಣ ನಿಜಕ್ಕೂ ಭಾವನಾತ್ಮಕವಾಗಿತ್ತು
ಕೆಲವು ದಿನಗಳ ಹಿಂದೆ ವಿಸ್ತಾರ ಹಾಗೂ ಏರ್ ಇಂಡಿಯಾ (Air India) ಒಪ್ಪಂದ ಮಾಡಿಕೊಂಡು ವಿಲೀನಗೊಳಿಸಲು ನಿರ್ಧರಿಸಿದ್ದವು. ವಿಸ್ತಾರ ಏರ್ಲೈನ್ಸ್ ಏರ್ ಇಂಡಿಯಾ ಜೊತೆ ವಿಲೀನಗೊಳ್ಳುತ್ತಿದ್ದು ವಿಲೀನದ ಮೂಲಕ ಸಿಂಗಾಪುರ್ ಏರ್ಲೈನ್ಸ್ಗೆ ಏರ್ ಇಂಡಿಯಾದಲ್ಲಿ ಶೇ 25.1 ಹಂಚಿಕೆ ದೊರೆಯುತ್ತದೆ.
ವಿದೇಶಿ ನೇರ ಹೂಡಿಕೆ (FDI) ಉಗಮದ ನಂತರ ವಿದೇಶಿ ವಿಮಾನಯಾನ ಸಂಸ್ಥೆಯೊಂದಿಗೆ ಸಹ-ಮಾಲೀಕತ್ವ ಹೊಂದಿದ್ದ ಭಾರತೀಯ ಏರ್ಲೈನ್ ವಿಸ್ತಾರ ನಿನ್ನೆ ತನ್ನ ಕೊನೆಯ ಹಾರಾಟ ನಡೆಸಿದೆ. ಟಾಟಾ ಸಂಸ್ಥೆಯೊಂದಿಗಿನ ವಿಲೀನ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇಂದಿನಿಂದ ವಿಸ್ತಾರದ ಬದಲು ಏರ್ ಇಂಡಿಯಾ ವಿಮಾನಗಳು ಕಾರ್ಯಾಚರಣೆ ನಡೆಸಲಿವೆ. ಸಿಬ್ಬಂದಿ ಕೊರತೆ, ಪೈಲಟ್ಗಳ ಪ್ರತಿಭಟನೆ ಸೇರಿದಂತೆ ಹಲವು ಸಮಸ್ಯೆಗಳಿಂದಾಗಿ ಸಿಂಗಾಪುರ್ ಮೂಲಕ ವಿಸ್ತಾರ ಏರ್ ಇಂಡಿಯಾ ಜತೆ ವಿಲೀನ ಪ್ರಕ್ರಿಯೆಗೆ ನಿರ್ಧರಿಸಿತ್ತು.
ವಿಸ್ತಾರಕ್ಕೆ ಅದರ ಪ್ರತಿಸಸ್ಪರ್ಧಿ ಇಂಡಿಗೋ ಕೂಡ ವಿದಾಯ ಕೋರಿದೆ.
As an unforgettable legacy takes its final flight, a new journey on the horizon awaits. Goodbye, @airvistara. Here’s #ToLimitlessPossibilities ahead. #goIndiGo
Video credits @UtkarshThakkar pic.twitter.com/QAOlNzX5xm
— IndiGo (@IndiGo6E) November 11, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.