ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಮುಂದುವರೆದಿರುವ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ತನ್ನ ದೇಶದಲ್ಲಿ ಖಲಿಸ್ತಾನಿಗಳ ಉಪಸ್ಥಿತಿಯನ್ನು ಮೊದಲ ಬಾರಿಗೆ ಒಪ್ಪಿಕೊಂಡಿದ್ದಾರೆ.
ಅನಿರೀಕ್ಷಿತ ಹೇಳಿಕೆಯಲ್ಲಿ, ಟ್ರೂಡೊ ಕೆನಡಾದೊಳಗೆ ಖಾಲಿಸ್ತಾನ್ ಬೆಂಬಲಿಗರ ನೆಲೆಯ ಉಪಸ್ಥಿತಿಯನ್ನು ಒಪ್ಪಿಕೊಂಡಿದ್ದಾರೆ. ಅಲ್ಲದೇ ಖಲಿಸ್ಥಾನಿಗಳು ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದಿದ್ದಾರೆ. ಒಟ್ಟಾವಾದ ಪಾರ್ಲಿಮೆಂಟ್ ಹಿಲ್ನಲ್ಲಿ ನಡೆದ ದೀಪಾವಳಿ ಆಚರಣೆಯ ಸಂದರ್ಭದಲ್ಲಿ ಅವರ ಹೇಳಿಕೆ ಬಂದಿದೆ.
ಜೂನ್ 2023 ರಲ್ಲಿ ಬ್ರಿಟಿಷ್ ಕೊಲಂಬಿಯಾದ ಸರ್ರೆಯಲ್ಲಿನ ಗುರುದ್ವಾರದ ಹೊರಗೆ ಖಾಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿದೆ. ಈ ಹತ್ಯೆಯಲ್ಲಿ ಭಾರತ ಭಾಗಿಯಾಗಿರಬಹುದು ಎಂಬ ಟ್ರೂಡೊ ಅವರ ಆರೋಪವು ರಾಜತಾಂತ್ರಿಕ ಬಿರುಗಾಳಿಯನ್ನು ಎಬ್ಬಿಸಿದೆ.
ಕೆನಡಾದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಬೆಂಬಲಿಗರಿದ್ದರೂ, ಅವರು ಎಲ್ಲರೂ ಹಿಂದೂ ಕೆನಡಿಯನ್ನರನ್ನು ಪ್ರತಿನಿಧಿಸುವುದಿಲ್ಲ ಎಂದು ತಮ್ಮ ದೀಪಾವಳಿ ಭಾಷಣದಲ್ಲಿ ಟ್ರೂಡೊ ಹೇಳಿದ್ದಾರೆ.
“ಕೆನಡಾದಲ್ಲಿ ಖಾಲಿಸ್ತಾನದ ಅನೇಕ ಬೆಂಬಲಿಗರಿದ್ದಾರೆ, ಆದರೆ ಅವರು ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಕೆನಡಾದಲ್ಲಿ ಮೋದಿ ಸರ್ಕಾರದ ಬೆಂಬಲಿಗರಿದ್ದಾರೆ, ಆದರೆ ಅವರು ಎಲ್ಲಾ ಹಿಂದೂ ಕೆನಡಿಯನ್ನರನ್ನು ಪ್ರತಿನಿಧಿಸುವುದಿಲ್ಲ” ಎಂದಿದ್ದಾರೆ.
ಈ ವಾರದ ಆರಂಭದಲ್ಲಿ, ಪ್ರತಿಭಟನಾಕಾರರು ಕೆಲವು ಖಲಿಸ್ತಾನಿ ಧ್ವಜಗಳನ್ನು ಬೀಸುತ್ತಾ, ಕೆನಡಾದ ಬ್ರಾಂಪ್ಟನ್ನ ದೇವಸ್ಥಾನದಲ್ಲಿ ಭಕ್ತರೊಂದಿಗೆ ಘರ್ಷಣೆ ಮಾಡಿದ್ದರು. ಈ ಘಟನೆಗೆ ಭಾರೀ ಖಂಡನೆಗಳು ವ್ಯಕ್ತವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.