ಔರಂಗಬಾದ್: ಬಿಹಾರದ ಜನತೆ ಚುನಾವಣೆಯಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಈ ಚುನಾವಣೆ ಸರ್ಕಾರ ರಚಿಸುವ ಸಲುವಾಗಿ ಮಾತ್ರ ನಡೆಯುತ್ತಿಲ್ಲ, ಬದಲಾಗಿ ಬಿಹಾರವನ್ನು ನಾಶಪಡಿಸಿದ ಹಿಂದಿನ ಸರ್ಕಾರವನ್ನು ಶಿಕ್ಷಿಸುವ ಸಲುವಾಗಿ ನಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಚುನಾವಣಾ ಅಖಾಡ ಬಿಹಾರದ ಔರಂಗಬಾದ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚುನಾವಣಾ ಸಮಾವೇಶವನ್ನು ಉದ್ದೇಶಿಸಿ ಅವರು ಭಾಷಣ ಮಾಡಿದರು.
ನೀವು ಸುಪ್ರೀಂಕೋರ್ಟ್, ನೀವೇ ಬಿಹಾರದ ನ್ಯಾಯಾಧೀಶರು. ನೀವು ಬಟನ್ ಪ್ರೆಸ್ ಮಾಡುವ ಮೂಲಕ ಈಗಿನ ಸರ್ಕಾರವನ್ನು ಶಿಕ್ಷಿಸಬೇಕಾಗಿದೆ. ಈ ಚುನಾವಣೆಯಲ್ಲಿ ಒಂದು ಬದಿ ’ಮಹಾಸ್ವಾರ್ಥಬಂಧನ್’ ಇದೆ ಮತ್ತೊಂದೆಡೆ ಎನ್ಡಿಎ ಇದೆ. ಸ್ವಾರ್ಥ ಬಂಧನದಲ್ಲಿ ಇರುವವರ ಬಗ್ಗೆ ನಿಮಗೆ ತಿಳಿದಿದೆ. ಇಲ್ಲಿನ ಅಭಿವೃದ್ಧಿಗೆ ಅವರು ಏನೂ ಮಾಡಿಲ್ಲ. ಅಧಿಕಾರದ ದುರಾಸೆಗೆ ಇವರು ಮೈತ್ರಿಮಾಡಿಕೊಂಡಿದ್ದಾರೆ ಎಂದರು.
ಜಂಗಲ್ರಾಜ್ನಿಂದ ಮುಕ್ತಿ ಪಡೆಯಿರಿ, ಅಭಿವೃದ್ಧಿಯ ಪಥದಲ್ಲಿ ಸಾಗಿ ಎಂದು ಹೇಳಲು ನಾನಿಲ್ಲಿಗೆ ಬಂದಿದ್ದೇನೆ. ಬಿಹಾರದಲ್ಲಿ ಪೊಲೀಸ್ ಅಧಿಕಾರಿಗಳು ಕೂಡ ಸೇಫ್ ಆಗಿಲ್ಲ. ಹೀಗಿರುವಾಗ ಬೇರೆ ಯಾರು ಸೇಫ್ ಆಗಿರಲು ಸಾಧ್ಯ? ಬಿಹಾರಕ್ಕೆ ವಿಕಾಸ ಬೇಕಾಗಿದೆ. ಅದಕ್ಕಾಗಿ ನಾವು 1.65 ಲಕ್ಷ ಕೋಟಿ ರೂಪಾಯಿಯ ಪ್ಯಾಕೇಜ್ ನೀಡಿದ್ದೇವೆ. ಇದರಿಂದ ಇಲ್ಲಿನ ಯುವಕರ ಭವಿಷ್ಯ ಬದಲಾಗಲಿದೆ. ಇದರಿಂದ ಅವರು ಭಾರತದ ಭವಿಷ್ಯ ಬದಲಿಸಲಿದ್ದಾರೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.