ಪಾಟ್ನಾ: ಬಿಹಾರದ ವಿಧಾನಸಭಾ ಚುನಾವಣೆ ಇಡೀ ದೇಶದ ಕುತೂಹಲವನ್ನು ಕೆರಳಿಸಿದೆ. ಮಹಾಮೈತ್ರಿಯನ್ನು ಮಾಡಿಕೊಂಡಿರುವ ಆರ್ಜೆಡಿ, ಜೆಡಿಯು, ಕಾಂಗ್ರೆಸ್ ಪ್ರಧಾನಿ ನರೇಂದ್ರ ಮೋದಿಯವರನ್ನೇ ಟಾರ್ಗೆಟ್ ಮಾಡಿ ಮತಯಾಚನೆ ಮಾಡುತ್ತಿದ್ದರೆ, ಅತ್ತ ಬಿಜೆಪಿ ಮಹಾಮೈತ್ರಿ ವಿರುದ್ಧ ತೊಡೆತಟ್ಟುತ್ತಿದೆ.
ಮಹಾಮೈತ್ರಿ ಮತ್ತು ಬಿಜೆಪಿ ನಡುವೆ ಬಿಹಾರದಲ್ಲಿ ನೇರ ಹಣಾಹಣಿ ನಡೆಯುತ್ತಿದೆ. ಇದರಲ್ಲಿ ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬ ಬಗ್ಗೆ ಅಂದಾಜು ಮಾಡುವುದೇ ಕಷ್ಟವಾಗಿದೆ. ಈಗಾಗಲೇ ಹಲವಾರು ಸಮೀಕ್ಷೆಗಳನ್ನು ನಡೆಸಲಾಗಿದ್ದು, ಒಂದೊಂದು ಸಮೀಕ್ಷೆ ಒಂದೊಂದು ತರನಾದ ಫಲಿತಾಂಶವನ್ನು ನೀಡಿದೆ.
ಎಬಿಪಿ ನ್ಯೂಸ್-ನೆಲ್ಸನ್ ನಡೆಸಿದ ಸಮೀಕ್ಷೆ ಪ್ರಕಾರ ಮಹಾಮೈತ್ರಿ 112 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದ್ದು, ಬಿಜೆಪಿ 128ರವರೆಗೆ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ. ಇತರರು ೩ರಲ್ಲಿ ಗೆಲುವು ಸಾಧಿಸಲಿದ್ದಾರೆ.
ಸಿಎನ್ಎನ್-ಆಕ್ಸಿಸ್ ಬಿಹಾರ್ ನಡೆಸಿದ ಸಮೀಕ್ಷೆ ಪ್ರಕಾರ ಮಹಾಮೈತ್ರಿ 129-145ರವರೆಗೆ ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರುವ ಸಾಧ್ಯತೆ ಇದೆ. ಬಿಜೆಪಿ ನೇತೃತ್ವದ ಎನ್ಡಿಎ ಕೇವಲ 83-103ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಲಿದೆ.
ಐಟಿಜಿ-ಸಿಸಿರೋ ಸಮೀಕ್ಷೆ ಪ್ರಕಾರ ಮಹಾಮೈತ್ರಿ 122 ಸ್ಥಾನಗಳನ್ನು ಗೆಲ್ಲಲಿದ್ದು, ಬಿಜೆಪಿ ನೇತೃತ್ವದ ಎನ್ಡಿಎ 111 ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲಿದೆ.
ಸಮೀಕ್ಷೆಗಳು ಏನೇ ಹೇಳಿದರೂ ಅಂತಿಮವಾಗಿ ಯಾರನ್ನು ಗೆಲ್ಲಿಸಬೇಕು ಎಂಬ ನಿರ್ಧಾರವನ್ನು ಬಿಹಾರದ ಜನತೆಯೇ ತೆಗೆದುಕೊಳ್ಳಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.