ನವದೆಹಲಿ: ಕಳೆದ ಎರಡು ದಿನಗಳಲ್ಲಿ ಲೆಬನಾನ್ನಾದ್ಯಂತ ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ವಾಕಿ-ಟಾಕಿಗಳು ಮತ್ತು ಪೇಜರ್ಗಳನ್ನು ಸ್ಫೋಟಗೊಳ್ಳುತ್ತಿವೆ. ಈ ಘಟನೆಗಳಿಂದ ಇದುವರೆಗೆ ಕನಿಷ್ಠ 32 ಜನರು ಸಾವನ್ನಪ್ಪಿದ್ದಾರೆ ಮತ್ತು 3,250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಇರಾನ್ ಬೆಂಬಲಿತ ಹಿಜ್ಬುಲ್ಲಾ ಸದಸ್ಯರು ಬಳಸುತ್ತಿದ್ದ ವಾಕಿ-ಟಾಕಿಗಳು ಬುಧವಾರ ಹಿಜ್ಬುಲ್ ಭದ್ರಕೋಟೆ ಎನಿಸಿರುವ ಬೈರುತ್ನಲ್ಲಿ ಸ್ಫೋಟಗೊಂಡವು, ಕನಿಷ್ಠ 20 ಜನರು ಸಾವನ್ನಪ್ಪಿದರು ಮತ್ತು 450 ಕ್ಕೂ ಹೆಚ್ಚು ಜನರು ಗಾಯಗೊಂಡರು. ಸ್ಪೋಟದಿಂದ ಸತ್ತವರಿಗೆ ಹಿಜ್ಬುಲ್ಲಾ ಆಯೋಜಿಸಿದ್ದ ಅಂತ್ಯಕ್ರಿಯೆಯ ಬಳಿಯೂ ಬುಧವಾರ ಸ್ಫೋಟ ಸಂಭವಿಸಿದೆ.
ಹಿಜ್ಬುಲ್ಲಾ ಬಳಸಿದ ಸಾವಿರಾರು ಪೇಜರ್ಗಳು ಲೆಬನಾನ್ನಾದ್ಯಂತ ಸ್ಫೋಟಗೊಂಡ ಒಂದು ದಿನದ ನಂತರ ವಾಕಿಟಾಕಿಗಳು ಸ್ಪೋಟವಾಗಲಾರಂಭಿಸಿವೆ, ಇದರಲ್ಲಿ ಇಬ್ಬರು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದರು ಮತ್ತು ಸುಮಾರು 2,800 ಜನರು ಗಾಯಗೊಂಡರು ಎಂದು ಹೇಳಲಾಗಿದೆ.
“ಈ ಸ್ಪೋಟಕ್ಕಲೆ ಇಸ್ರೇಲ್ ಸಂಪೂರ್ಣ ಹೊಣೆಯಾಗಿದೆ ಮತ್ತು ಪ್ರತೀಕಾರ ತೀರಿಸಿಕೊಳ್ಳುತ್ತೇವೆ” ಎಂದು ಹಿಜ್ಬುಲ್ಲಾ ಹೇಳಿದೆ. ಆದರೆ ಸ್ಫೋಟದ ಬಗ್ಗೆ ಇಸ್ರೇಲ್ ಇದುವರೆಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.
ಹಿಜ್ಬುಲ್ಲಾ ಆರ್ಡರ್ ನೀಡಿದ್ದ 5,000 ಪೇಜರ್ಗಳಲ್ಲಿ ಪ್ರತಿಯೊಂದರಲ್ಲೂ 3 ಗ್ರಾಂ ಸ್ಪೋಟಕ ಇಡಲಾಗಿದೆ. ಇದು ಹಿಜ್ಬುಲ್ಲಾ ಸದಸ್ಯರ ಕೈಸೇರುತ್ತಿದ್ದಂತೆ ರಿಮೋಟ್ ಮೂಲಕ ಸ್ಪೋಟಿಸಲಾಗಿದೆ. ಇಸ್ರೇಲ್ ಗುಪ್ತಚರರು ಈ ಸ್ಪೋಟ ನಡೆಸಿರುವ ಸಾಧ್ಯತೆ ಇದೆ ಎಂದು ವರದಿಗಳು ಹೇಳುತ್ತಿವೆ.
ಮೊಬೈಲ್ ಫೋನ್ಗಳ ಮೇಲೆ ಇಸ್ರೇಲಿ ಗೂಢಚರ್ಯೆ ತಪ್ಪಿಸಿಕೊಳ್ಳಲು ಹಿಜ್ಬುಲ್ಲಾ ಸದಸ್ಯರು ಪೇಜರ್ಗಳು ಮತ್ತು ಇತರ ಕಡಿಮೆ-ತಂತ್ರಜ್ಞಾನದ ಸಂವಹನ ಸಾಧನಗಳನ್ನು ಹೆಚ್ಚಾಗಿ ಬಳಸುತ್ತಾರೆ.
ಈ ನಡುವೆ ಮಧ್ಯಪ್ರಾಚ್ಯದಲ್ಲಿ ಇರಾನ್ನ ಅತ್ಯಂತ ಶಕ್ತಿಶಾಲಿ ಪ್ರಾಕ್ಸಿ ಎನಿಸಿರುವ ಹಿಜ್ಬುಲ್ಲಾ ಬುಧವಾರ ಇಸ್ರೇಲಿ ಫಿರಂಗಿ ಸ್ಥಾನಗಳ ಮೇಲೆ ರಾಕೆಟ್ಗಳ ಮೂಲಕ ದಾಳಿ ಮಾಡಿದೆ. ಆದರೆ, ಯಾವುದೇ ಹಾನಿ ಅಥವಾ ಸಾವುನೋವುಗಳ ವರದಿಯಾಗಿಲ್ಲ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.