ಕುಳಾಯಿ: ಹಲವಾರು ವರ್ಷಗಳಿಂದ ಚಿಕ್ಕ ಕಟ್ಟಡದಲ್ಲಿ ನಡೆಯುತ್ತಿದ್ದ ಕುಳಾಯಿ ಕೇಶವ ಶಿಶುಮಂದಿರ ಬಾಲ ಸಂಸ್ಕಾರ ಕೇಂದ್ರಕ್ಕೆ ವಸಂತ್ ಬಾಳ ಇವರು ಜಮೀನನ್ನು ಕೊಡುಗೆಯಾಗಿ ನೀಡಿದ್ದು, ಇದರ ನೋಂದಣಿ ಕಾರ್ಯ ಇಂದು ಜರುಗಿದೆ.
ರಾಷ್ಟ್ರೀಯ ಸ್ವಯಂ ಸಂಘದ ಪ್ರೇರಣೆಯಂತೆ ಹಲವಾರು ವರ್ಷಗಳಿಂದ ಕೇಶವ ಶಿಶುಮಂದಿರ ಬಾಲ ಸಂಸ್ಕಾರ ಕೇಂದ್ರ ಚಿಕ್ಕ ಕಟ್ಟಡದಲ್ಲಿ ನಡೆಯುತ್ತಿತ್ತು, ಈ ಕಟ್ಟಡದ ಹಿಂಭಾಗದ ಜಮೀನು ಮಾಲಕರು ಕೇಶವ ಶಿಶುಮಂದಿರ ಸೇವಾ ಟ್ರಸ್ಟ್ ಅನ್ನು ಸಂಪರ್ಕಿಸಿ 5.70 ಸೆಂಟ್ಸ್ ಜಾಗವನ್ನು ಸಂಪೂರ್ಣ ಉಚಿತವಾಗಿ ನೀಡುವುದಾಗಿ ತಿಳಿಸಿದ್ದಾರೆ. ಅದರಂತೆ ಇಂದು ಕೇಶವ ಶಿಶುಮಂದಿರ ಸೇವಾ ಟ್ರಸ್ಟ್ (ರಿ ) ಕುಳಾಯಿಯ ಹೆಸರಿಗೆ ನೋಂದಣಿ ಮಾಡಿಕೊಟ್ಟಿದ್ದಾರೆ. ನೋಂದಣಿಯ ಸಮಯದಲ್ಲಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ ಉದಯನಾರಾಯಣ ಮಯ್ಯ, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಶ್ರೀ ಯಜ್ಞೆಶ್ ಐತಾಳ್, ಕೋಶಾಧಿಕಾರಿ ಶ್ರೀ ಕಾರ್ತಿಕೇಯ ಪೈ, ಜಾಗದ ಮಾಲೀಕರಾದ ವಸಂತ್ ಬಾಳ ಹಾಗೂ ಇತರರು ಉಪಸ್ಥಿತರಿದ್ದರು.
ಈ ದಿನದಿಂದ ಹೊಸ ಅಸ್ತಿತ್ವದೊಂದಿಗೆ ಸಮಸ್ತ ಹಿಂದೂ ಸಮಾಜದ ಶ್ರೇಯಾಭಿವೃದ್ದಿಗಾಗಿ ಟ್ರಸ್ಟ್ ಶ್ರಮಿಸಲಿದೆ. ಈಗಿನ ಯೋಜನೆಯಂತೆ ಈ ನೀವೇಶನದ ಕೆಲ ಅಂತಸ್ತಿನಲ್ಲಿ ಶಿಶುಮಂದಿರ ಹಾಗೂ ಬಾಲಗೋಕುಲ ಕೇಂದ್ರೀತ ಚಟುವಟಿಕೆಗಳನ್ನು ನಡೆಸಲು ಹಾಗೂ ನಂತರದ ಮಹಡಿಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಪರಿವಾರದ ಕಾರ್ಯಕಲಾಪಗಳನ್ನು ನಡೆಸಲು ಬೇಕಾಗುವ ಸ್ಥಳಾವಕಾಶ ಒದಗಿಸುವ ನಿಟ್ಟಿನಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳನ್ನು ಕೈ ಗೆತ್ತಿಗೊಳ್ಳಲಾಗುವುದು ಎಂದು ಟ್ರಸ್ಟ್ ಹೇಳಿದೆ.
ಈ ಕಟ್ಟಡ ಈ ಭಾಗದ ಸಮಸ್ತ ಹಿಂದೂ ಭಾಂದವರ ಒಳಿತಿಗಾಗಿ ಯೋಚನೆ ಮಾಡುವ ಕೇಂದ್ರ ಬಿಂದುವಾಗಿ ಮೂಡಿ ಬರುವ ಆಶಯವನ್ನು ಟ್ರಸ್ಟ್ ವ್ಯಕ್ತಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.