ನವದೆಹಲಿ: ಪ್ಯಾರಿಸ್ 2024 ಪ್ಯಾರಾಲಿಂಪಿಕ್ಸ್ನಲ್ಲಿ ಭಾಗವಹಿಸುವ ಭಾರತೀಯ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಅಲ್ಲದೇ ಕ್ರೀಡಾಪಟುಗಳಿಗೆ ರಾಷ್ಟ್ರದ ಬೆಂಬಲವನ್ನು ಪುನರುಚ್ಛರಿಸಿದ್ದಾರೆ.
“140 ಕೋಟಿ ಭಾರತೀಯರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ರ ನಮ್ಮ ತಂಡಕ್ಕೆ ಶುಭ ಹಾರೈಸುತ್ತಿದ್ದಾರೆ. ಪ್ರತಿಯೊಬ್ಬ ಕ್ರೀಡಾಪಟುವಿನ ಧೈರ್ಯ ಮತ್ತು ದೃಢತೆ ಇಡೀ ರಾಷ್ಟ್ರಕ್ಕೆ ಸ್ಫೂರ್ತಿಯ ಮೂಲವಾಗಿದೆ” ಎಂದಿದ್ದಾರೆ.
32 ಮಹಿಳೆಯರು ಸೇರಿದಂತೆ 84 ಅಥ್ಲೀಟ್ಗಳ ದಾಖಲೆ ಸಂಖ್ಯೆಯ ತಂಡದೊಂದಿಗೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗಿಯಾಗುತ್ತಿದ್ದಾರೆ, ಇದು ಭಾರತದ ಇದುವರೆಗಿನ ಅತಿದೊಡ್ಡ ಪ್ರಾತಿನಿಧ್ಯವಾಗಿದೆ.
ಭಾಗವಹಿಸುವವರ ಸಂಖ್ಯೆಯಲ್ಲಿ ಗಮನಾರ್ಹ ಬೆಳವಣಿಗೆಯು ವಿಶೇಷವಾಗಿ ಮಹಿಳಾ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಳವು ದೇಶದಲ್ಲಿ ವಿಕಲಚೇತನ ಕ್ರೀಡಾಪಟುಗಳಿಗೆ ದೊರೆತ ಹೆಚ್ಚಿನ ಬೆಂಬಲ ಮತ್ತು ಅವಕಾಶಗಳನ್ನು ಒತ್ತಿಹೇಳುತ್ತದೆ.
ಟೋಕಿಯೊ 2020 ಪ್ಯಾರಾಲಿಂಪಿಕ್ಸ್ನಲ್ಲಿ ಭಾರತ ತಂಡ 19 ಪದಕಗಳನ್ನು ಜಯಿಸಿತ್ತು. ಇದರಲ್ಲಿ ಐದು ಚಿನ್ನ, ಎಂಟು ಬೆಳ್ಳಿ ಮತ್ತು ಆರು ಕಂಚಿನ ಪದಕ ಸೇರಿತ್ತು. ಇದೀಗ ಪ್ಯಾರಿಸ್ 2024 ನಲ್ಲಿ ಹೆಚ್ಚಿನ ನಿರೀಕ್ಷೆಗಳು ಮೂಡಿವೆ. ಪ್ಯಾರಾ ಸೈಕ್ಲಿಂಗ್, ಪ್ಯಾರಾ ರೋಯಿಂಗ್ ಮತ್ತು ಬ್ಲೈಂಡ್ ಜೂಡೋ ಎಂಬ ಮೂರು ಹೊಸ ವಿಭಾಗಗಳ ಪರಿಚಯದೊಂದಿಗೆ ಭಾರತೀಯ ಅಥ್ಲೀಟ್ಗಳು 12 ಕ್ರೀಡೆಗಳಲ್ಲಿ ಸ್ಪರ್ಧಿಸಲು ಸಿದ್ಧರಾಗಿದ್ದಾರೆ.
ಟೋಕಿಯೊ 2020 ರಲ್ಲಿ ಚಿನ್ನದ ಪದಕಗಳನ್ನು ಗೆದ್ದುಕೊಂಡಿರುವ ಅವನಿ ಲೆಖರಾ ಮತ್ತು ಸುಮಿತ್ ಆಂಟಿಲ್ ಅವರು ಪದಕ ಗೆಲ್ಲುವ ನೆಚ್ಚಿನ ಅಥ್ಲೀಟ್ಗಳಾಗಿದ್ದಾರೆ. ಮಹಿಳೆಯರ R2 10m ಏರ್ ರೈಫಲ್ ಸ್ಟ್ಯಾಂಡಿಂಗ್ SH1 ಈವೆಂಟ್ನಲ್ಲಿ ವಿಶ್ವ ದಾಖಲೆಯನ್ನು ರಚಿಸಿದ ಲೆಖರಾ, ಪ್ಯಾರಿಸ್ನಲ್ಲಿ ತನ್ನ ಯಶಸ್ಸನ್ನು ಪುನರಾವರ್ತಿಸುವ ಗುರಿಯನ್ನು ಹೊಂದಿದ್ದಾರೆ.
प्रधानमंत्री श्री @narendramodi के नेतृत्व में खेल जगत में हुए ऐतिहासिक बदलावों से देश के खिलाड़ियों को मिली नई उड़ान। pic.twitter.com/8uH8GvRx7Y
— BJP (@BJP4India) August 29, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.