ನವದೆಹಲಿ: ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯಡಿ ಟೆಲಿಕಾಂ ಸಲಕರಣೆಗಳ ತಯಾರಿಕೆಯ ಮಾರಾಟವು 50 ಸಾವಿರ ಕೋಟಿ ರೂಪಾಯಿಗಳನ್ನು ದಾಟಿದೆ.
ದೂರಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಟೆಲಿಕಾಂ ಪಿಎಲ್ಐ ಯೋಜನೆಯ ಮೂರು ವರ್ಷಗಳಲ್ಲಿ ಮೂರು ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಪಡೆದುಕೊಳ್ಳಲಾಗಿದೆ. ಇದಲ್ಲದೆ, 17,800 ಕ್ಕೂ ಹೆಚ್ಚು ನೇರ ಉದ್ಯೋಗಗಳು ಮತ್ತು ಇತರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿದೆ. ಸುಮಾರು 10, 500 ಕೋಟಿ ರೂಪಾಯಿಗಳ ದೂರಸಂಪರ್ಕ ರಫ್ತುಗಳನ್ನು ಮಾಡಲಾಗಿದೆ.
ಪಿಎಲ್ಐ ಯೋಜನೆ, ನೆಟ್ವರ್ಕಿಂಗ್ ಉತ್ಪನ್ನಗಳು ಮತ್ತು ಇತರ ಸಂಬಂಧಿತ ಉಪಕ್ರಮಗಳ ಪರಿಣಾಮವಾಗಿ ಟೆಲಿಕಾಂ ಆಮದು ಮತ್ತು ರಫ್ತುಗಳ ನಡುವಿನ ಅಂತರವು ಕಡಿಮೆಯಾಗಿದೆ. 23-24ರ ಆರ್ಥಿಕ ವರ್ಷದಲ್ಲಿ ರಫ್ತು ಮಾಡಿದ ಸರಕುಗಳ ಒಟ್ಟು ಮೌಲ್ಯವು 1 ಲಕ್ಷ 49 ಸಾವಿರ ಕೋಟಿ ರೂಪಾಯಿ ಆಗಿದೆ ಮತ್ತು ಆಮದು 1 ಲಕ್ಷ 53 ಸಾವಿರ ಕೋಟಿ ರೂ. ಆಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.