ನವದೆಹಲಿ: 82 ದಿನಗಳ ಕಾಲ ಏಳು ಹಂತಗಳಲ್ಲಿ ನಡೆದ ಲೋಕಸಭೆ ಚುನಾವಣೆಯ ಪ್ರಚಾರವು ಮೇ 30 ರಂದು ಮುಕ್ತಾಯಗೊಂಡಿದೆ, ಪ್ರಧಾನಿ ನರೇಂದ್ರ ಮೋದಿ ಅವರು ಸತತ ಮೂರನೇ ಅವಧಿಗೆ ಪ್ರಚಾರ ಕಾರ್ಯದಲ್ಲಿ ಬಿಜೆಪಿಯನ್ನು ಮುನ್ನಡೆಸಿದರು.
ಪ್ರಧಾನಮಂತ್ರಿಗಳ ಕಚೇರಿಯ ಮೂಲಗಳ ಪ್ರಕಾರ, ಮೋದಿ ನಡೆಸಿದ ಸರಣಿ ಚುನಾವಣಾ ಪ್ರಚಾರವು 206 ಸಮಾವೇಶಗಳನ್ನು ಕಂಡಿದೆ. ಪ್ರಚಾರ ಕಾರ್ಯದಲ್ಲೂ ಮೋದಿ ದಾಖಲೆ ಮಾಡಿದ್ದಾರೆ. ಮಾಧ್ಯಮಗಳಿಗೆ 80 ಕ್ಕೂ ಹೆಚ್ಚು ಸಂದರ್ಶನಗಳನ್ನು ಅವರು ನೀಡಿದ್ದಾರೆ.
ಉರಿ ಬಿಸಿಲಿನ ನಡುವೆ ಜನರನ್ನು ಒಟ್ಟುಗೂಡಿಸುವುದು ದೊಡ್ಡ ಸಾಹಸವೇ ಆಗಿದ್ದ ಸಂದರ್ಭದಲ್ಲೂ ಮೋದಿ ಅವರ ಸಮಾವೇಶಕ್ಕೆ ದೊಡ್ಡ ಮಟ್ಟದಲ್ಲಿ ಜನ ಆಗಮಿಸಿದ್ದಾರೆ. ಇದು ಬಿಜೆಪಿ ಪಾಳಯದಲ್ಲಿ ಗೆಲುವಿನ ಭರವಸೆಯನ್ನು ದೃಢಪಡಿಸಿದೆ.
ಅದರಲ್ಲೂ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಸುಳ್ಳು ಬಿಜೆಪಿಗೆ ದೊಡ್ಡ ಸವಾಲಾಗಿತ್ತು. ಬಿಜೆಪಿ ಸಂವಿಧಾನವನ್ನು ಬದಲಾಯಿಸುತ್ತದೆ, ಮೀಸಲಾತಿಯನ್ನು ತೆಗೆದುಹಾಕುತ್ತದೆ ಎಂಬ ಪ್ರತಿಪಕ್ಷಗಳ ಆರೋಪವನ್ನು ಸುಳ್ಳು ಎಂದು ಜನರ ಮುಂದೆ ಸಾಬೀತುಪಡಿಸುವುದು ದೊಡ್ಡ ಸವಾಲಾಗಿತ್ತು. ಮೋದಿ ಅದನ್ನು ಅತ್ಯಂತ ನಾಜೂಕಾಗಿ ಜನರ ಮುಂದಿಟ್ಟು ಪ್ರತಿಪಕ್ಷಗಳ ಆರೋಪ ಪೊಳ್ಳು ಎಂದು ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಲ್ಲದೇ ಕಾಂಗ್ರೆಸ್ ಯಾವ ರೀತಿ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡುವ ಪ್ರಯತ್ನ ನಡೆಸಿದ್ದಾರೆ. ಒಬಿಸಿ ಕೋಟಾವನ್ನು ಕಡಿಮೆ ಮಾಡಿ ಮುಸ್ಲಿಮರಿಗೆ ಮೀಸಲಾತಿ ನೀಡಿದ ಕರ್ನಾಟಕ ಕಾಂಗ್ರೆಸ್ ಕೃತ್ಯವನ್ನು ಇಡೀ ದೇಶದ ಮುಂದೆ ಇರಿಸಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಏನು ಮಾಡಬಲ್ಲದು ಎಂಬುದನ್ನು ವಿವರಿಸಿದ್ದಾರೆ.
ಒಟ್ಟಾರೆಯಾಗಿ ಮೋದಿ ಅವರ ಚುನಾವಣಾ ಪ್ರಚಾರ ಕಾರ್ಯ ಈ ಬಾರಿ ಆಕ್ರಮಣಕಾರಿಯಾಗಿ, ತೀವ್ರವಾಗಿ ಇತ್ತು ಮತ್ತು ಇದು ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿ ಬ್ಲಾಕ್ಗೆ ದೊಡ್ಡ ಆಘಾತವನ್ನೇ ನೀಡಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.