News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 21st December 2024


×
Home About Us Advertise With s Contact Us

ಮೇ.31ರೊಳಗೆ ಆಧಾರ್-ಪ್ಯಾನ್‌ ಲಿಂಕ್‌ ಮಾಡಿ ಹೆಚ್ಚಿನ ತೆರಿಗೆ ಪಾವತಿ ತಪ್ಪಿಸುವಂತೆ ಐಟಿ ಇಲಾಖೆ ಸೂಚನೆ

ನವದೆಹಲಿ: ಪ್ಯಾನ್ ಕಾರ್ಡ್​ಗೆ ಆಧಾರ್ ಅನ್ನು ಲಿಂಕ್ ಮಾಡಲು ಇದೇ ಮೇ 31ಕ್ಕೆ ಡೆಡ್​ಲೈನ್ ನಿಗದಿಯಾಗಿದೆ. ಅಷ್ಟರೊಳಗೆ ಲಿಂಕ್ ಮಾಡದೇ ಹೋದರೆ ಹೆಚ್ಚಿನ ಟಿಡಿಎಸ್ ಪಾವತಿಸಬೇಕಾಗುತ್ತದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಇಂದು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಐಟಿ ಇಲಾಖೆ, “ಮೇ 31ರೊಳಗೆ ನಿಮ್ಮ ಪ್ಯಾನ್ ಅನ್ನು ಆಧಾರ್ ಜೊತೆ ಜೋಡಿಸಿದರೆ ಐಟಿ ಸೆಕ್ಷನ್ 206ಎಎ ಮತ್ತು 206ಸಿಸಿ ಅಡಿಯಲ್ಲಿ ಹೆಚ್ಚಿನ ಟ್ಯಾಕ್ಸ್ ಪಾವತಿಯನ್ನು ತಪ್ಪಿಸಬಹುದು” ಎಂದಿದೆ..

ಆಧಾರ್​ಗೆ ಪ್ಯಾನ್‌ ಲಿಂಕ್‌ ಮಾಡಲು ಸಾಕಷ್ಟು ಡೆಡ್‌ಲೈನ್‌ಗಳನ್ನು ನೀಡುತ್ತಲೇ ಬರಲಾಗುತ್ತಿದೆ. ಈಗ ಆಧಾರ್​ಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಶುಲ್ಕ ಪಾವತಿಸಬೇಕಾಗುತ್ತದೆ. ಉಚಿತವಾಗಿ ಮಾಡಲು ಇದ್ದ ಡೆಡ್​ಲೈನ್ ಬಹಳ ದಿನಗಳ ಹಿಂದೆಯೇ ಮುಗಿದುಹೋಗಿದೆ. ಈಗ ಶುಲ್ಕ ಪಾವತಿಸಿ ಆಧಾರ್​ಗೆ ಲಿಂಕ್ ಮಾಡುವ ಮೂಲಕ ಈಗ ಪ್ಯಾನ್ ಕಾರ್ಡ್ ಅನ್ನು ಸಕ್ರಿಯಗೊಳಿಸಬಹುದು.

2017ರ ಜುಲೈ 1ರ ಬಳಿಕ ವಿತರಿಸಲಾದ ಎಲ್ಲಾ ಪ್ಯಾನ್ ನಂಬರ್​ಗೆ ಆಟೊಮ್ಯಾಟಿಕ್ ಆಗಿ ಆಧಾರ್ ಜೋಡಣೆ ಆಗಿರುತ್ತದೆ.

https://x.com/IncomeTaxIndia/status/1795326518832554454?ref_src=twsrc%5Etfw%7Ctwcamp%5Etweetembed%7Ctwterm%5E1795326518832554454%7Ctwgr%5E47f7ea248270707d8b51f02692bffd550a497cc0%7Ctwcon%5Es1_&ref_url=https%3A%2F%2Ftv9kannada.com%2Fbusiness%2Fpan-aadhaar-link-by-may-31st-to-avoid-higher-tds-charges-snvs-839978.html

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top