ಕೋಲ್ಕತ್ತಾ: ರೆಮಲ್ ಚಂಡಮಾರುತವು ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾದೇಶದಲ್ಲಿ ಭಾರೀ ವಿನಾಶವನ್ನು ಸೃಷ್ಟಿಮಾಡುತ್ತಿದೆ. ಪಶ್ಚಿಮಬಂಗಾಳ ಮತ್ತು ಬಾಂಗ್ಲಾ ಕರಾವಳಿಯ ನಡುವೆ ಡೆಪ್ರೆಶನ್ ಸೃಷ್ಟಿಸಿದೆ, ಗಂಟೆಗೆ 135 ಕಿಮೀ ವೇಗದಲ್ಲಿ ಗಾಳಿ ಬೀಸಿದ್ದು ಅನೇಕ ಮರಗಳು ಕುಸಿದು ಬಿದ್ದಿವೆ
ಭಾನುವಾರ ರಾತ್ರಿ 8:30 ಕ್ಕೆ ಬಾಂಗ್ಲಾದೇಶದ ಮೊಂಗ್ಲಾದ ನೈರುತ್ಯದ ಬಳಿ ಸಾಗರ್ ದ್ವೀಪ ಮತ್ತು ಖೆಪುಪಾರಾ ನಡುವೆ ಅಪ್ಪಳಿಸಿದ ಚಂಡಮಾರುತವು ಧಾರಾಕಾರ ಮಳೆಯನ್ನು ಸೃಷ್ಟಿಸಿ ಆವಾಂತರ ಸೃಷ್ಟಿ ಮಾಡಿದೆ. ಮನೆಗಳು ಮತ್ತು ಕೃಷಿಭೂಮಿಗಳಿಗೆ ನೀರು ನುಗ್ಗಿದೆ, ವ್ಯಾಪಕ ನಾಶವನ್ನು ಉಂಟುಮಾಡಿತು.
ಚಂಡಮಾರುತದ ಮುನ್ನ, ಬಂಗಾಳ ಮತ್ತು ಈಶಾನ್ಯ ರಾಜ್ಯಗಳಾದ್ಯಂತ ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳನ್ನು ಹೈ ಅಲರ್ಟ್ ಮಾಡಲಾಗಿದೆ. ಅಸ್ಸಾಂ, ಮೇಘಾಲಯ, ತ್ರಿಪುರಾ, ಮಣಿಪುರ ಮತ್ತು ಮಿಜೋರಾಂನಲ್ಲಿನ ಜಿಲ್ಲಾಡಳಿತಗಳು ಪರಿಣಾಮವನ್ನು ತಗ್ಗಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಾಂಗ್ಲಾದೇಶ ಮತ್ತು ಪಕ್ಕದ ಪಶ್ಚಿಮ ಬಂಗಾಳ ಕರಾವಳಿಗಳ ನಡುವೆ ಅಪಾಯ ಉಂಟುಮಾಡುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ರೆಮಲ್ ಚಂಡಮಾರುತದ ಪ್ರತಿಕ್ರಿಯೆ ಮತ್ತು ಸಿದ್ಧತೆಯನ್ನು ಪರಿಶೀಲಿಸಲು ಭಾನುವಾರ ಮಹತ್ವದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಭಾನುವಾರ ಮಧ್ಯರಾತ್ರಿಯ ವೇಳೆಗೆ ರೆಮಾಲ್ ಉತ್ತರಾಭಿಮುಖವಾಗಿ ಚಲಿಸಿದೆ, ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳದ ಕರಾವಳಿಯನ್ನು ಸಾಗರ್ ದ್ವೀಪ ಮತ್ತು ಖೆಪುಪಾರಾ ನಡುವೆ ಭಾನುವಾರ ಮಧ್ಯರಾತ್ರಿಯ ವೇಳೆಗೆ ತೀವ್ರ ಚಂಡಮಾರುತವಾಗಿ 110-120 ಕಿಮೀ ವೇಗದಲ್ಲಿ ಗಂಟೆಗೆ 135 ಕಿಮೀ ವೇಗದಲ್ಲಿ ಬೀಸಿದೆ. ಆದರೆ ಸರ್ಕಾರದ ಮುಂಜಾಗೃತೆಯ ಫಲವಾಗಿ ಯಾವುದೇ ಅಪಾಯ ಸೃಷ್ಟಿಯಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.