ಕೋಲ್ಕತ್ತಾ: ರಾಮಕೃಷ್ಣ ಮಿಷನ್ ಬಗ್ಗೆ ವಿವಾದಾತ್ಮಕ ಕೇಳಿಕೆ ನೀಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಟೀಕೆಗೆ ಗುರಿಯಾಗಿದ್ದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ರಾಮಕೃಷ್ಣ ಮಿಷನ್ ಅನ್ನು ಶ್ಲಾಘಿಸಿದ್ದಾರೆ ಮತ್ತು ತಾನು ಯಾವುದೇ ಸಂಸ್ಥೆಯ ವಿರುದ್ಧ ಇಲ್ಲ ಎಂದು ಹೇಳಿದ್ದಾರೆ. ಆದರೆ ಬಿಜೆಪಿ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ಕೆಲವು ಸನ್ಯಾಸಿಗಳು “ಬಿಜೆಪಿಯ ಸೂಚನೆಯ ಮೇರೆಗೆ” ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬ್ಯಾನರ್ಜಿ ರಾಮಕೃಷ್ಣ ಮಿಷನ್ ಅನ್ನು ಟಾರ್ಗೆಟ್ ಮಾಡಿ ಆರೋಪಿಸಿದ್ದರು. ಇದಕ್ಕೆ ನರೇಂದ್ರ ಮೋದಿಯರು ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದರು.
“ಪಶ್ಚಿಮ ಬಂಗಾಳದ ಸಿಎಂ “ಮುಸ್ಲಿಂ ಉಗ್ರಗಾಮಿಗಳ ಒತ್ತಡಕ್ಕೆ ಒಳಗಾಗಿದ್ದಾರೆ ಮತ್ತು ಟಿಎಂಸಿಯ ಮತದಾರರ ನೆಲೆಯನ್ನು ಸಮಾಧಾನಗೊಳಿಸಲು ಸಾಮಾಜಿಕ-ಧಾರ್ಮಿಕ ಗುಂಪುಗಳನ್ನು ಬೆದರಿಸುತ್ತಿದ್ದಾರೆ” ಎಂದು ಮೋದಿ ಮಮತಾ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಬಂಕುರಾದ ಒಂಡಾದಲ್ಲಿ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, “”ನಾನು ರಾಮಕೃಷ್ಣ ಮಿಷನ್ ವಿರೋಧಿಯಲ್ಲ, ನಾನು ಸಂಸ್ಥೆಯನ್ನು ಏಕೆ ವಿರೋಧಿಸಬೇಕು ಅಥವಾ ಅವಮಾನಿಸಬೇಕು” ಎಂದಿದ್ದಾರೆ.
ಭಾರತ್ ಸೇವಾಶ್ರಮ ಸಂಘದ ಜನತೆಯ ಸೇವೆಯನ್ನು ಕೂಡ ಮುಖ್ಯಮಂತ್ರಿಗಳು ಶ್ಲಾಘಿಸಿದರು. ರೇಜಿನಗರದ ಮತಗಟ್ಟೆಯಲ್ಲಿ ತೃಣಮೂಲ ಕಾಂಗ್ರೆಸ್ ಏಜೆಂಟ್ಗೆ ಕುಳಿತುಕೊಳ್ಳಲು ಅನುಮತಿ ನೀಡದ ಕಾರ್ತಿಕ್ ಮಹಾರಾಜ್ ಬಗ್ಗೆ ತಾನು ಪ್ರಸ್ತಾಪಿಸಿದ್ದೇ ಹೊರತು ಯಾವುದೇ ಸಂಸ್ಥೆಯನ್ನು ಟೀಕಿಸಿಲ್ಲ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.