ಬೈಂದೂರು: ಬೈಂದೂರು ವಿಧಾನಸಭಾ ಕ್ಷೇತ್ರದ ವಿವಿಧ ಭಾಗದಲ್ಲಿ ಸಮೃದ್ಧ ಬೈಂದೂರು ಟ್ರಸ್ಟ್ ಹಾಗೂ ಅರುಣಾಚಲಂ ಟ್ರಸ್ಟ್ ಸಹಯೋಗದಲ್ಲಿ ನವೀನ ಆವಿಷ್ಕಾರದ ಕಾಲು ಸಂಕಗಳ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಗಳ ಪ್ರಗತಿ ಪರಿಶೀಲನೆಯನ್ನು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಭಾನುವಾರ ನಡೆಸಿದರು.
ತೊಂಬಟ್ಟು ಕಬ್ಬಿನಾಲೆ ಸಮೀಪ, ಎಡಮೊಗೆಯ ಕುಂಮ್ಟಿಬೇರುವಿನಲ್ಲಿ ಹಾಗೂ ವಂಡ್ಸೆಯ ಅಬ್ಬಿ ಹತ್ತಿರದ ಕಾಲು ಸಂಕಗಳ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕ, ಬೈಂದೂರು ಕ್ಷೇತ್ರದ ವಿವಿಧ ಭಾಗದಲ್ಲಿ ಕಾಲು ಸಂಕಗಳ ತುರ್ತು ಅಗತ್ಯವಿದೆ. ಸರ್ಕಾರದಿಂದ ಕಾಲು ಸಂಕ ನಿರ್ಮಾಣ ಒಂದು ಭಾಗವಾದರೆ ಸಮೃದ್ಧ ಬೈಂದೂರು ಹಾಗೂ ಅರುಣಾಚಲಂ ಟ್ರಸ್ಟ್ ನ ಒಡಂಬಡಿಕೆಯೊಂದಿಗೆ ಕೆಲವು ಕಡೆಗಳಲ್ಲಿ ಕಾಲು ಸಂಕಗಳನ್ನು ವಿನೂತನ ಆವಿಷ್ಕಾರದೊಂದಿಗೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಅರುಣಾಚಲಂ ಟ್ರಸ್ಟ್ ನಿಂದ ಹಂತ ಹಂತವಾಗಿ ಸುಮಾರು 50 ಕಾಲು ಸಂಕ ನಿರ್ಮಾಣದ ಭರವಸೆ ನೀಡಲಾಗಿದೆ. ಮುಂಬರುವ ಮಳೆಗಾಲದೊಳಗೆ ಮೂರು ಕಾಲು ಸಂಕಗಳು ಸಿದ್ಧವಾಗಲಿದೆ . ಕ್ಷೇತ್ರದ ಜನತೆಗೆ ಕಾಲು ಸಂಕ ಇಲ್ಲದೆ ಸಮಸ್ಯೆ ಆಗಬಾರದು ಎಂಬ ಸದುದ್ದೇಶದಿಂದ ಅರುಣಾಚಲಂ ಟ್ರಸ್ಟ್ ನೊಂದಿಗೆ ಒಪ್ಪಂದ ಮಾಡಿಕೊಂಡು ತುರ್ತು ಅಗತ್ಯವಿರುವ ಕೆಲವೆಡೆ ಕಾಲು ಸಂಕ ನಿರ್ಮಾಣ ಮಾಡುತ್ತಿದ್ದೇವೆ. ನವೀನ ಆವಿಷ್ಕಾರದ ಮೂಲಕ ಕಾಲುಸಂಕ ನಿರ್ಮಾಣವಾಗುತ್ತಿದೆ ಎಂದಿದ್ದಾರೆ.
ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಖಾಸಗಿಯಾಗಿ ಕಾಲು ಸಂಕ ನಿರ್ಮಿಸಿ ಕೊಡುತ್ತಿದೆ. ಹಳೆಯ ಲಾರಿ, ಬಸ್ ಇತ್ಯಾದಿ ವಾಹನಗಳ ಚಸ್ಸಿ ಸಹಿತ ವಿವಿಧ ಪರಿಕರಗಳನ್ನು ಬಳಸಿ ಕಾಲು ಸಂಕ ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 60 ರಿಂದ 72 ಅಡಿ ಎಷ್ಟು ಉದ್ದದ ಕಾಲು ಸಂಕ ನಿರ್ಮಿಸಲಾಗುತ್ತಿದೆ ಒಂದು ಕಾಲು ಸಂಕ 36 ಅಡಿ ಇರುತ್ತದೆ. ಎರಡು ಕಾಲು ಸಂಕ ಜೋಡಿಸಿ 72 ಅಡಿ ಉದ್ದದ ಕಾಲು ಸಂಕ ನಿರ್ಮಾಣವಾಗುತ್ತಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.