ಗುವಾಹಟಿ: ಅನ್ಸರುಲ್ಲಾ ಬಾಂಗ್ಲಾ ತಂಡಕ್ಕೆ (ಎಬಿಟಿ) ಸೇರಿದ ಇಬ್ಬರು ಶಂಕಿತ ಬಾಂಗ್ಲಾದೇಶಿ ಭಯೋತ್ಪಾದಕರನ್ನು ಗುವಾಹಟಿಯಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಬಂಧಿಸಲಾದ ಇಬ್ಬರನ್ನು ಬಹರ್ ಮಿಯಾ ಮತ್ತು ರಾರ್ಲಿ ಮಿಯಾ ಎಂದು ಗುರುತಿಸಲಾಗಿದೆ ಎಂದು ಅಸ್ಸಾಂ ಪೊಲೀಸ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ತಿಳಿಸಿದ್ದಾರೆ.
“ಇಬ್ಬರು ಶಂಕಿತ ಉಗ್ರರನ್ನು ಅನ್ಸರುಲ್ಲಾ ಬಾಂಗ್ಲಾ ತಂಡ (ಎಬಿಟಿ)ದ ಬಹರ್ ಮಿಯಾ (30), ರಾರ್ಲಿ ಮಿಯಾ (40) ಎಂದು ಗುರುತಿಸಲಾಗಿದೆ. ಅನ್ಸರುಲ್ಲಾ ಬಾಂಗ್ಲಾ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಇನ್ ಇಂಡಿಯನ್ ಸಬ್ಕಾಂಟಿನೆಂಟ್ ಅಂಗಸಂಸ್ಥೆಯಾಗಿದೆ. ಅಸ್ಸಾಂ ಪೊಲೀಸ್ ತಂಡವು ನಿನ್ನೆ ಗುವಾಹಟಿ ರೈಲು ನಿಲ್ದಾಣದಲ್ಲಿ ಸಂಯೋಜಿತ ದಾಳಿಗಳನ್ನು ನಡೆಸಿ ಇವರನ್ನು ಬಂಧಿಸಿದೆ” ಎಂದು ಅಸ್ಸಾಂ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಭಯೋತ್ಪಾದನಾ ಜಾಲವನ್ನು ಹರಡಲು ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ಭಾರತಕ್ಕೆ ನುಗ್ಗಿ ಇವರು ನೆಲೆಸಿದ್ದರು ಮತ್ತು ಭಾರತೀಯ ದಾಖಲೆಗಳನ್ನು ಪಡೆದಿದ್ದರು. ಇಬ್ಬರೂ ಬಾಂಗ್ಲಾದೇಶಿ ಪ್ರಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 30 ರಂದು, ತ್ರಿಪುರ ಪೊಲೀಸರು ಉತ್ತರ ತ್ರಿಪುರಾದ ಧರ್ಮನಗರದಲ್ಲಿ ಭಾರತಕ್ಕೆ ಅಕ್ರಮ ಪ್ರವೇಶದ ಶಂಕಿತ ಮೂವರು ಉಗ್ರರನ್ನು ಬಂಧಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.