ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಮಹತ್ವದ ಬದಲಾವಣೆಗಳು ಕಾಣುತ್ತಿವೆ. ಲೋಕಸಭಾ ಚುನಾವಣೆಯ ಮತದಾನ ಪ್ರಮಾಣದಲ್ಲೂ ಭಾರೀ ಹೆಚ್ಚಳವಾಗಿದ್ದು, ಅಲ್ಲಿ ಪ್ರಜಾಪ್ರಭುತ್ವ ಭದ್ರವಾಗುತ್ತಿರುವ ಸೂಚನೆ ದೊರೆತಿದೆ.
ಕಾಶ್ಮೀರದ ಶ್ರೀನಗರದಲ್ಲಿ ಕಳೆದ 28 ವರ್ಷಗಳಲ್ಲಿ ಗರಿಷ್ಠ ಮತದಾನವಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ. ಶ್ರೀನಗರದಲ್ಲಿ ಹೆಚ್ಚಿನ ಮತದಾನ ದಾಖಲಾಗಿದೆ. ಸೋಮವಾರ ಶ್ರೀನಗರದಲ್ಲಿ ಮತದಾನ ನಡೆದಿದ್ದು, ಶೇ.35.97ರಷ್ಟು ಮತದಾನವಾಗಿದೆ. ಇದು 1996 ರ ಲೋಕಸಭೆ ಚುನಾವಣೆ ಬಳಿಕ ದಾಖಲಾದ ಗರಿಷ್ಠ ಮತದಾನ ಎಂದು ಆಯೋಗವಾಗಿದೆ. ಶ್ರೀನಗರದಲ್ಲಿ 2019ರಲ್ಲಿ ಶೇ.14.43ರಷ್ಟು ಹಾಗೂ 2014ರಲ್ಲಿ ಶೇ.25.86ರಷ್ಟು ಮತದಾನವಾಗಿದೆ. ಶ್ರೀನಗರದಲ್ಲಿ 17.48 ಲಕ್ಷ ಮತದಾರರು ನೋಂದಣಿ ಮಾಡಿಕೊಂಡಿದ್ದರು.
ಪ್ರಧಾನಿ ಈ ಬಗ್ಗೆ ಸಂತಸ ವ್ಯಕ್ತಪಡಿಸಿದ್ದ, “ಹಿಂದೆಂದಿಗಿಂತಲೂ ಹೆಚ್ಚು ಗಮನಾರ್ಹವಾಗಿ ಉತ್ತಮವಾದ ಉತ್ತೇಜಕ ಮತದಾನಕ್ಕಾಗಿ ಶ್ರೀನಗರದ ಜನರು ಶ್ಲಾಘನೆಗೆ ಅರ್ಹರು. ಆರ್ಟಿಕಲ್ 370 ರ ರದ್ದತಿಯು ಜನರ ಸಾಮರ್ಥ್ಯ ಮತ್ತು ಆಕಾಂಕ್ಷೆಗಳನ್ನು ಪೂರ್ಣ ಅಭಿವ್ಯಕ್ತಿಯನ್ನು ಕಂಡುಕೊಳ್ಳಲು ಅನುವು ಮಾಡಿಕೊಟ್ಟಿದೆ. ತಳಮಟ್ಟದಲ್ಲಿ ನಡೆಯುತ್ತಿರುವ ಬದಲಾವಣೆ ಜಮ್ಮು-ಕಾಶ್ಮೀರ ಜನರಿಗೆ, ವಿಶೇಷವಾಗಿ ಯುವಕರಿಗೆ ಅದ್ಭುತವಾಗಿದೆ” ಎಂದಿದ್ದಾರೆ.
Would especially like to applaud the people of Srinagar Parliamentary constituency for the encouraging turnout, significantly better than before. The abrogation of Article 370 has enabled the potential and aspirations of the people to find full expression. Happening at the… https://t.co/2DvSCnXFKR
— Narendra Modi (@narendramodi) May 13, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.