ಬೆಂಗಳೂರು: ಸಂವಿಧಾನಕ್ಕೆ ಅಪಚಾರ ಎಸಗಿದ್ದೇ ಕಾಂಗ್ರೆಸ್ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಮಾಜಿ ಸಚಿವ ಸಿ.ಟಿ.ರವಿ ಅವರು ಆರೋಪಿಸಿದರು.
ದಾವಣಗೆರೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇವರನ್ನು ನೋಡುವಾಗÀ ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿತ್ತು ಎಂಬ ಕಥೆ ನೆನಪಾಗುತ್ತದೆ. ತಾನು ಮಾಡಿದ ಅಪಚಾರವನ್ನೆಲ್ಲ ಬಿಜೆಪಿಯ ತಲೆಗೆ ಕಟ್ಟುವ ವಿಫಲ ಯತ್ನ ಕಾಂಗ್ರೆಸ್ಸಿನದು ಎಂದು ತಿಳಿಸಿದರು.
ದೇಶವನ್ನು ಆರ್ಥಿಕ ದುಸ್ಥಿತಿಯಿಂದ ಸುಸ್ಥಿತಿಗೆ ತಂದು ರಾಷ್ಟ್ರವನ್ನು ಸಂಕಷ್ಟದಿಂದ ಪಾರು ಮಾಡಿದ ನಾಯಕ, ಪ್ರಧಾನಿ ನರೇಂದ್ರ ಮೋದಿಯವರು ಎಂದು ಅವರು ಹೇಳಿದರು. ಕೋವಿಡ್ ಸಂಕಷ್ಟ, ರಷ್ಯಾ- ಉಕ್ರೇನ್ ಯುದ್ಧದ ಸಂಕಷ್ಟ, ಈ ಎಲ್ಲ ಸಂಕಷ್ಟಗಳಿಂದ ಪಾರು ಮಾಡಿ ಭಾರತಕ್ಕೆ ಜಾಗತಿಕ ಗೌರವ ತಂದುಕೊಟ್ಟಿದ್ದಾರೆ. ಭಾರತದ ಒಳಗೆ ಸಾಂಸ್ಕøತಿಕ ಪುನರುತ್ಥಾನಕ್ಕೆ ಮನ್ನಣೆ ಸಿಗುವಂತೆ ಮಾಡಿದ್ದಾರೆ ಎಂದು ತಿಳಿಸಿದರು.
ಮೋದಿ ಗ್ಯಾರಂಟಿ ಬದುಕನ್ನು ಬದಲಾಯಿಸಿದೆ. ಬೇಡುವ ಸ್ಥಿತಿಯಿಂದ ನೀಡುವ ಸ್ಥಿತಿಗೆ ಒಯ್ಯುವುದೇ ಮೋದಿ ಗ್ಯಾರಂಟಿ. ನಾವು ಸುಧಾರಣೆ, ಸಂರಕ್ಷಣೆ, ಸಮೃದ್ಧಿ ಮತ್ತು ಸಾಂಸ್ಕøತಿಕ ಪುನರುತ್ಥಾನದ ಜೊತೆಗೆ ಅಭಿವೃದ್ಧಿ, ಅಂತ್ಯೋದಯದ ಪರಿಕಲ್ಪನೆಯಲ್ಲಿ ಯೋಜನೆ ರೂಪಿಸಿದ್ದೇವೆ ಎಂದು ತಿಳಿಸಿದರು.
45 ಕೋಟಿ ಬಡವರನ್ನು ಬ್ಯಾಂಕಿಂಗ್ ಜೊತೆ ಒಳಗೊಳ್ಳುವಿಕೆಗೆ ಜನ್ ಧನ್ ಕಾರಣ. ಸ್ವಚ್ಛ ಭಾರತವು ಮನಸ್ಥಿತಿ, ಪರಿಸ್ಥಿತಿಯನ್ನೂ ಬದಲಿಸಿದೆ. 14 ಕೋಟಿ ಬಡವರು ಬಯಲು ಬಹಿರ್ದೆಸೆಯಿಂದ ಮುಕ್ತರಾಗಿ ಶೌಚಾಲಯ ಉಪಯೋಗಿಸಲು ಪ್ರಾರಂಭಿಸಿದರು. ಉಜ್ವಲ ಗ್ಯಾಸ್ ಸಂಪರ್ಕ ಹೊಗೆಮುಕ್ತ ಅಡುಗೆ ಮನೆ ನಿರ್ಮಾಣಕ್ಕೆ ಕಾರಣವಾಯಿತು ಎಂದು ತಿಳಿಸಿದರು. ಜಲ ಜೀವನ್ ಮಿಷನ್ ಯೋಜನೆಯಡಿ 17 ಕೋಟಿ ಮನೆಗಳಿಗೆ ನಳ್ಳಿನೀರಿನ ಸಂಪರ್ಕ ಸಾಧಿಸಿದ್ದೇವೆ ಎಂದರು.
ಬಿಜೆಪಿ 3 ವಿಷಯಗಳನ್ನು ಜನರ ಮುಂದಿಟ್ಟು ಮತ ಯಾಚಿಸುತ್ತಿದೆ ಎಂದು ವಿವರಿಸಿದರು. ನಮ್ಮ ಪಕ್ಷದ ನೀತಿ, ಪಕ್ಷದ ನೇತೃತ್ವ ಮತ್ತು ಎಂಬ ನಮ್ಮ ನಿಯತ್ತನ್ನು ತಿಳಿಸುತ್ತಿದ್ದೇವೆ. ದೇಶ ಮೊದಲು, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬುದು ನಮ್ಮ ನೀತಿ. ಬಡವರಿಗೆ ಬಲ ಕೊಡುವುದು ನಮ್ಮ ನೀತಿ. ಸಂವಿಧಾನದ ಆಶಯವನ್ನು ಆಡಳಿತದಲ್ಲಿ ಅನುಷ್ಠಾನಗೊಳಿಸಿ ಕಟ್ಟಕಡೆಯ ಮನುಷ್ಯನಿಗೆ ತಲುಪಿಸುವುದು ನಮ್ಮ ನೀತಿ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಬಿಜೆಪಿ- ಜೆಡಿಎಸ್ ಪಕ್ಷಗಳು ಒಟ್ಟಾಗಿ ಸ್ಪರ್ಧೆ ಮಾಡಿವೆ. ಕರ್ನಾಟಕದ 2 ಹಂತದ ಚುನಾವಣೆಗೆ ಪ್ರಧಾನಿಯವರು ಒಟ್ಟು 9 ಸಭೆಗಳನ್ನು ಮತ್ತು ಒಂದು ರೋಡ್ ಷೋ ಸೇರಿ 10 ಪ್ರದೇಶಗಳಿಗೆ ಚುನಾವಣೆ ಸಂಬಂಧ ಪ್ರವಾಸ ಮಾಡಿದ್ದಾರೆ. 92ರ ಹಿರಿಯ ನಾಯಕ, ಮಾಜಿ ಪ್ರಧಾನಿ ದೇವೇಗೌಡ ಅವರು ತಮ್ಮ ಆರೋಗ್ಯ ಮತ್ತು ವಯೋಮಿತಿಯ ನಡುವೆ ಚುನಾವಣಾ ಪ್ರಚಾರದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಚುನಾವಣಾ ದೃಷ್ಟಿಯಿಂದ 7 ಪ್ರಚಾರಸಭೆಗಳಲ್ಲಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು 4 ಪ್ರಚಾರಸಭೆಗಳಲ್ಲಿ ಭಾಗವಹಿಸಿದ್ದರು ಎಂದು ವಿವರಿಸಿದರು.
ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಜೈಶಂಕರ್, ಮೀನಾಕ್ಷಿ ಲೇಖಿ, ನಿರ್ಮಲಾ ಸೀತಾರಾಮನ್, ಅಶ್ವಿನ್ ವೈಷ್ಣವ್ ಅವರು ವಿವಿಧ ರೀತಿಯಲ್ಲಿ ಸಭೆಗಳಲ್ಲಿ ಪಾಲ್ಗೊಂಡಿದ್ದಾರೆ. ಮಹಾರಾಷ್ಟ್ರದ ಸಿಎಂ ಏಕನಾಥ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವೀಸ್, ಗೋವಾದ ಸಿಎಂ ಪ್ರಮೋದ್ ಸಾವಂತ್ ಅವರು ಕೂಡ ಕರ್ನಾಟಕದಲ್ಲಿ ಪ್ರಚಾರಸಭೆಯಲ್ಲಿ ಪಾಲ್ಗೊಂಡಿದ್ದರು. ಅಣ್ಣಾಮಲೈ ಸೇರಿ ಬೇರೆಬೇರೆ ರಾಜ್ಯಗಳ ಪ್ರಮುಖರೂ ಭಾಗವಹಿಸಿದ್ದರು ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.