ಚಿಕ್ಕಬಳ್ಳಾಪುರ: ಕರ್ನಾಟದ ಜನರಿಗೆ ಆಯುಷ್ಮಾನ್ ಭಾರತ್ ಮೂಲಕ 5 ಲಕ್ಷದವರೆಗೆ ಉಚಿತ ಚಿಕಿತ್ಸೆ ಸಿಗುತ್ತಿದೆ. ಈಗ 70 ವರ್ಷ ಮೀರಿದ ನಾಗರಿಕರಿಗೆ ಉಚಿತ ಚಿಕಿತ್ಸೆ ನೀಡುವ ಗ್ಯಾರಂಟಿ ನೀಡುತ್ತಿದ್ದೇನೆ. ಮೋದಿ ಸರ್ಕಾರ ಎಸ್ಟಿ-ಎಸ್ಸಿ-ಒಬಿಸಿ ಸಮುದಾಯಗಳ ಪರವಾಗಿದೆ. ಈ ಹಿಂದೆ ಬಹಳಷ್ಟು ಎಸ್ಟಿ-ಎಸ್ಸಿ ಕುಟುಂಬಗಳಿಗೆ ಮೂಲ ಸೌಕರ್ಯ ಇರಲಿಲ್ಲ. ಈಗ ಅದೆಲ್ಲವನ್ನೂ ಮೋದಿ ಸರ್ಕಾರ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಮೋದಿ, 25 ಕೋಟಿ ಜನರನ್ನ ಬಡತನ ರೇಖೆಗಿಂತ ಮೇಲೆಕ್ಕೆ ತರುವ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಅಷ್ಟೇ ಅಲ್ಲ ಚಿಕ್ಕಬಳ್ಳಾಪುರದಲ್ಲಿ 14 ಸಾವಿರ, ಕೋಲಾರದಲ್ಲಿ 13 ಸಾವಿರ ಮನೆ ನಿರ್ಮಾಣ ಮಾಡಿಕೊಡುವ ಕೆಲಸ ಮೋದಿ ಮಾಡಿದ್ದಾರೆ. ಮುಂದೆ ಬಡವರಿಗಾಗಿ ದೇಶಾದ್ಯಂತ 3 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ಕೆಲಸವನ್ನೂ ಮಾಡಲಾಗುತ್ತಿದೆ ಎಂದು ಗ್ಯಾರಂಟಿಗಳನ್ನು ಪ್ರಸ್ತಾಪಿಸಿದ್ದಾರೆ.
ನನ್ನ ರಿಪೋರ್ಟ್ ಕಾರ್ಡ್ ಹಿಡಿದುಕೊಂಡು ಬಂದು ನಿಮ್ಮ ಆಶೀರ್ವಾದ ಕೇಳುತ್ತಿದ್ದೇನೆ. ನಿಮ್ಮನ್ನ ನನ್ನ ಪರಿವಾರ ಅಂತ ಭಾವಿಸಿದ್ದೇನೆ. ದಿನದ 24 ಗಂಟೆಯೂ ನಿಮಗಾಗಿ ದುಡಿಯುತ್ತೇನೆ. ನನ್ನ ಪ್ರತಿ ಕಣಕಣದಲ್ಲಿ ದೇಶ, ದೇಶದ ಜನರು ಇದ್ದಾರೆ. ನಾನು ಉತ್ತಮ ಗ್ಯಾರಂಟಿಗಳ ಜೊತೆ ಬಂದಿದ್ದೇನೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.