ಬೆಂಗಳೂರು: ಆಜಾನ್ ಸಂದರ್ಭದಲ್ಲಿ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಅಂಗಡಿ ಮಾಲೀಕನಿಗೆ ಯುವಕರ ಗುಂಪೊಂದು ಥಳಿಸಿದ ಘಟನೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ದುಷ್ಕರ್ಮಿಗಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ಬಗ್ಗೆ ವಿವರಿಸಿರುವ ಅಂಗಡಿ ಮಾಲೀಕ, “ನಾನು ಹನುಮಾನ್ ಭಜನೆ ಹಾಕಿದ್ದೆ, 4-5 ಜನರು ಬಂದು ಆಜಾನ್ಗೆ ಸಮಯವಾಗಿದೆ ಮತ್ತು ನೀವು ಅದನ್ನು ನುಡಿಸಿದರೆ ನಾವು ನಿಮ್ಮನ್ನು ಹೊಡೆಯುತ್ತೇವೆ ಎಂದು ಬೆದರಿಸಿರು. ಇದರಿಂದ ವಾಗ್ವಾದವಾಯಿತು ಬಳಿಕ ಅವರು ನನಗೆ ಹೊಡೆದರು ಮತ್ತು ಅವರು ನನ್ನನ್ನು ಚಾಕುವಿನಿಂದ ಇರಿದು ಹಾಕುವುದಾಗಿ ಬೆದರಿಕೆ ಹಾಕಿದರು” ಎಂದು ವಿವರಿಸಿದ್ದಾರೆ.
ಘಟನೆಯನ್ನು ಖಂಡಿಸಿರುವ ಬಿಜೆಪಿ ನಾಯಕ ಆರ್. ಅಶೋಕ್, “ಸಿದ್ದರಾಮಯ್ಯನವರ ತುಷ್ಟೀಕರಣ ರಾಜಕಾರಣದಿಂದ ಕೆರಳಿದ ಹಿಂಸಾತ್ಮಕ ಮುಸಲ್ಮಾನರ ಗುಂಪು ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ನುಡಿಸಿದ ಹಿಂದೂ ಅಂಗಡಿಯವನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿತು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳು ಮೊಳಗಿದವು ಮತ್ತು ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಗೊಂಡಿತು, ಇದು ಕಾಂಗ್ರೆಸ್ ಸರ್ಕಾರದ ಮತ್ತೊಂದು ತುಷ್ಟೀಕರಣದ ಜ್ವಲಂತ ಉದಾಹರಣೆಯಾಗಿದೆ. ದೇಶವಿರೋಧಿ ಶಕ್ತಿಗಳು ಬೆಂಗಳೂರನ್ನು ವಶಪಡಿಸಿಕೊಳ್ಳುತ್ತಿವೆ, ಇದು ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಡಲು ಕಾರಣವಾಗುತ್ತವೆ” ಎಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಅಲ್ಲದೇ ಕರ್ನಾಟಕದಲ್ಲಿ ಹನುಮಾನ್ ಚಾಲೀಸಾ ನಿಷೇಧವಾಗಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
Is Hanuman Chalisa banned in Karnataka CM @siddaramaiah avare?
Emboldened by the appeasement politics of @INCKarnataka Govt, a violent muslim mob brutally attacked a Hindu Shopkeeper in Bengaluru for playing Hanuman Chalisa.
After Pakistan Zindabad slogans raised in Vidhan… pic.twitter.com/D9MGXplKR0
— R. Ashoka (@RAshokaBJP) March 18, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.