ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಸ್ಸಾಂನ ಜೋರ್ಹತ್ನಲ್ಲಿ ‘ಅಹೋಮ್ ಜನರಲ್’ ಲಚಿತ್ ಬೊರ್ಫುಕನ್ ಅವರ 125 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ‘
ಈ ʼಶೌರ್ಯದ ಪ್ರತಿಮೆ’ಯನ್ನು ಪ್ರಧಾನಿಯವರು ಟಿಯೋಕ್ ಬಳಿಯ ಹೊಲೊಂಗಪರ್ನಲ್ಲಿರುವ ಲಚಿತ್ ಬರ್ಫುಕನ್ ಮೈದಾನ್ ಅಭಿವೃದ್ಧಿ ಯೋಜನೆಯಡಿ ಅನಾವರಣಗೊಳಿಸಿದರು. ಹೆಲಿಕಾಪ್ಟರ್ ಮೂಲಕ ಅರುಣಾಚಲ ಪ್ರದೇಶದಿಂದ ಜೋರ್ಹತ್ ತಲುಪಿದ ಪ್ರಧಾನಿ ಮೋದಿ ಅವರು ಸಾಂಪ್ರದಾಯಿಕ ಉಡುಗೆ ಧರಿಸಿದ್ದರು. ಅವರು ಪ್ರತಿಮೆಯ ಅನಾವರಣದ ಸಂದರ್ಭದಲ್ಲಿ ಅಹೋಮ್ ಆಚರಣೆಯಲ್ಲಿ ಕೂಡ ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರಧಾನ ಮಂತ್ರಿಯವರ ಜೊತೆಗಿದ್ದರು.
ರಾಮ್ ವಾಂಜಿ ಸುತಾರ್ ನಿರ್ಮಿಸಿದ ಪ್ರತಿಮೆಯ ಎತ್ತರವು 84 ಅಡಿಗಳು ಮತ್ತು ಇದನ್ನು 41 ಅಡಿಗಳ ಪೀಠದ ಮೇಲೆ ಸ್ಥಾಪಿಸಲಾಗಿದೆ, ರಚನೆಯು 125 ಅಡಿ ಎತ್ತರವಾಗಿದೆ. ಈ ಪ್ರತಿಮೆಯ ಅಡಿಪಾಯವನ್ನು ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಫೆಬ್ರವರಿ 2022 ರಲ್ಲಿ ಹಾಕಿದರು.
Hon’ble Prime Minister Shri Narendramodi Ji is dedicating the Statue of Valour: A magnificent tribute to Lachit Barphukan – to the people of Bharat at Jorhat. https://t.co/OxR5uVeXLc
— Himanta Biswa Sarma (@himantabiswa) March 9, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.