ನವದೆಹಲಿ: ಜನವರಿ 22 ರಂದು ಅಯೋಧ್ಯೆ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭ ಜರುಗಿದ ಬಳಿಕ 11 ದಿನಗಳಲ್ಲಿ ಸುಮಾರು 25 ಲಕ್ಷ ಭಕ್ತರು ರಾಮಜನ್ಮಭೂಮಿಗೆ ಭೇಟಿ ನೀಡಿದ್ದು, ಅವರು ನೀಡಿದ ಕಾಣಿಕೆಗಳ ಮೌಲ್ಯ ರೂ. 11 ಕೋಟಿ ದಾಟಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಕಾರ, ಕಳೆದ 10 ದಿನಗಳಲ್ಲಿ ಸುಮಾರು 8 ಕೋಟಿ ರೂಪಾಯಿ ದೇಣಿಗೆ ಡಬ್ಬಿಗಳಲ್ಲಿ ಠೇವಣಿಯಾಗಿದೆ ಮತ್ತು ಆನ್ಲೈನ್ನಲ್ಲಿ ಸುಮಾರು 3.50 ಕೋಟಿ ರೂಪಾಯಿ ಸ್ವೀಕರಿಸಲಾಗಿದೆ.
ಟ್ರಸ್ಟ್ನ ಕಚೇರಿ ಪ್ರಭಾರಿ ಪ್ರಕಾಶ್ ಗುಪ್ತಾ ಅವರ ಪ್ರಕಾರ, ಗರ್ಭಗುಡಿಯ ಮುಂಭಾಗದ ದರ್ಶನ ಪಥದ ಬಳಿ ನಾಲ್ಕು ದೊಡ್ಡ ಗಾತ್ರದ ಕಾಣಿಕೆ ಡಬ್ಬಿಗಳನ್ನು ಇರಿಸಲಾಗಿದೆ, ಅದರಲ್ಲಿ ಭಕ್ತರು ಕಾಣಿಕೆಗಳನ್ನು ಹಾಕುತ್ತಿದ್ದಾರೆ. ಅಲ್ಲದೆ, 10 ಕೌಂಟರ್ಗಳಲ್ಲಿ ಜನರು ದೇಣಿಗೆ ನೀಡುತ್ತಿದ್ದಾರೆ.
ದೇವಾಲಯದ ಟ್ರಸ್ಟ್ ನೌಕರರನ್ನು ಈ ದೇಣಿಗೆ ಕೌಂಟರ್ಗಳಲ್ಲಿ ನೇಮಿಸಲಾಗಿದ್ದು, ಸಂಜೆ ಕೌಂಟರ್ ಮುಚ್ಚಲಾಗುತ್ತದೆ ನಂತರ ಟ್ರಸ್ಟ್ ಕಚೇರಿಯಲ್ಲಿ ಸ್ವೀಕರಿಸಿದ ದೇಣಿಗೆ ಮೊತ್ತವನ್ನು ಖಾತೆಗೆ ಹಾಕಲಾಗುತ್ತದೆ.
14 ಮಂದಿ ನೌಕರರ ತಂಡವು ನಾಲ್ಕು ಕಾಣಿಕೆ ಪೆಟ್ಟಿಗೆಗಳಲ್ಲಿ ಕಾಣಿಕೆ ಎಣಿಕೆ ಮಾಡುತ್ತಿದ್ದು, ಇದರಲ್ಲಿ 11 ಬ್ಯಾಂಕ್ ಉದ್ಯೋಗಿಗಳು ಮತ್ತು ಮೂವರು ದೇವಸ್ಥಾನದ ಟ್ರಸ್ಟ್ ನೌಕರರು ಸೇರಿದ್ದಾರೆ.
ದೇಣಿಗೆ ಮೊತ್ತವನ್ನು ಠೇವಣಿ ಇಡುವುದರಿಂದ ಹಿಡಿದು ಅದನ್ನು ಎಣಿಸುವವರೆಗೆ ಎಲ್ಲವನ್ನೂ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ಅಡಿಯಲ್ಲಿ ಮಾಡಲಾಗುತ್ತದೆ ಎಂದು ಗುಪ್ತಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.