ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ.
“ಇಂದಿನ ದೊಡ್ಡ ಬದಲಾವಣೆ ಏನೆಂದರೆ ಪ್ರತಿಯೊಬ್ಬ ಭಾರತೀಯನು ತನ್ನ ಆತ್ಮವಿಶ್ವಾಸದ ಉತ್ತುಂಗದಲ್ಲಿದ್ದಾನೆ. ಇಂದು ಭಾರತವು ಪ್ರಪಂಚದ ಸಮಸ್ಯೆಗಳಿಗೆ ಪರಿಹಾರವಾಗುತ್ತಿದೆ”
“ಹೊಸ ಸಂಸತ್ ಕಟ್ಟಡದಲ್ಲಿ ಇದು ನನ್ನ ಮೊದಲ ಭಾಷಣವಾಗಿದೆ. ಅಮೃತ ಕಾಲದ ಆರಂಭದಲ್ಲಿ ಈ ಭವ್ಯ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ‘ಏಕ್ ಭಾರತ್, ಶ್ರೇಷ್ಠ್ ಭಾರತ’ದ ಸುಗಂಧ ಹೊಂದಿದೆ. ಪ್ರಜಾಸತ್ತಾತ್ಮಕ ಮತ್ತು ಸಂಸದೀಯ ಸಂಪ್ರದಾಯಗಳನ್ನು ಗೌರವಿಸುವ ಸಂಕಲ್ಪ ಹೊಂದಿದೆ. ಇದಲ್ಲದೆ, 21ನೇ ಶತಮಾನದ ನವಭಾರತದ ಹೊಸ ಸಂಪ್ರದಾಯಗಳನ್ನು ಕಟ್ಟುವ ಸಂಕಲ್ಪವನ್ನೂ ಹೊಂದಿದೆ. ಈ ಹೊಸ ಕಟ್ಟಡದಲ್ಲಿ ನೀತಿಗಳ ಕುರಿತು ಅರ್ಥಪೂರ್ಣ ಸಂವಾದ ನಡೆಯಲಿದೆ ಎಂಬ ವಿಶ್ವಾಸ ನನಗಿದೆ” ಎಂದು ರಾಷ್ಟ್ರಪತಿ ಹೇಳಿದರು.
ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ದ್ರೌಪದಿ ಮುರ್ಮು, “ಕಳೆದ 10 ವರ್ಷಗಳ ಆಚರಣೆಗಳ ವಿಸ್ತರಣೆಯೇ ಇಂದು ನಾವು ಕಾಣುತ್ತಿರುವ ಸಾಧನೆಗಳು. ನಾವು ಬಾಲ್ಯದಿಂದಲೂ ಗರೀಬಿ ಹಠಾವೋ ಎಂಬ ಘೋಷಣೆಯನ್ನು ಕೇಳಿದ್ದೇವೆ. ಇಂದು ನಾವು ದೊಡ್ಡ ಪ್ರಮಾಣದಲ್ಲಿ ಬಡತನವನ್ನು ನಿವಾರಿಸುತ್ತಿರುವುದನ್ನು ನೋಡುತ್ತಿದ್ದೇವೆ” ಎಂದರು.
ಕೇಂದ್ರ ಸರ್ಕಾರ ಕೈಗೊಂಡ ಪ್ರಮುಖ ನಿರ್ಧಾರಗಳನ್ನೂ ಅವರು ಶ್ಲಾಘಿಸಿದರು. ರಾಮ ಮಂದಿರ ಮತ್ತು 370 ನೇ ವಿಧಿಯ ರದ್ದತಿ ನಿರ್ಧಾರಗಳನ್ನು ಶ್ಲಾಘಿಸಿದ ರಾಷ್ಟ್ರಪತಿ, ಕಳೆದ 10 ವರ್ಷಗಳಲ್ಲಿ, ರಾಷ್ಟ್ರೀಯ ಹಿತಾಸಕ್ತಿಗಾಗಿ ಜನರು ದಶಕಗಳಿಂದ ಕಾಯುತ್ತಿದ್ದ ಇಂತಹ ಅನೇಕ ಕೆಲಸಗಳನ್ನು ಭಾರತವು ಪೂರ್ಣಗೊಳಿಸಿದೆ. ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ನಮ್ಮ ಶಕ್ತಿಯಾಗಿದೆ ಎಂದರು.
“ಕಳೆದ ವರ್ಷ, ದೇಶವು ಉತ್ತಮ ಎತ್ತರವನ್ನು ಸಾಧಿಸಿದೆ. ಸವಾಲುಗಳ ನಡುವೆಯೂ, ದೇಶವು ಅತ್ಯಧಿಕ ಬೆಳವಣಿಗೆಯ ದರವನ್ನು ಸಾಧಿಸಿದೆ. ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶವಾಗಿದೆ. ದೇಶವು ಯಶಸ್ವಿಯಾಗಿ ಜಿ 20 ಅನ್ನು ಆಯೋಜಿಸಿದೆ. ಏಷ್ಯನ್ ಗೇಮ್ಸ್ನಲ್ಲಿ 100 ಕ್ಕೂ ಹೆಚ್ಚು ಪದಕಗಳನ್ನು ಭಾರತ ಗೆದ್ದಿದೆ . ಭಾರತವೂ ಅಟಲ್ ಸುರಂಗವನ್ನು ಪಡೆದುಕೊಂಡಿದೆ” ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.