ನವದೆಹಲಿ: ತಮ್ಮ ಮಾಸಿಕ ಪರಿಹಾರ ಮೊತ್ತವನ್ನು ಹೆಚ್ಚಿಸಲು ಮತ್ತು ಮುಂಬರುವ ಬಜೆಟ್ ಅಧಿವೇಶನದಲ್ಲಿ ಕಾಶ್ಮೀರ ಕಣಿವೆಯಲ್ಲಿ 5,000 ಉದ್ಯೋಗಗಳನ್ನು ಒಳಗೊಂಡಿರುವ ಹೊಸ ಉದ್ಯೋಗ ಪ್ಯಾಕೇಜ್ ಅನ್ನು ಘೋಷಿಸುವಂತೆ ನಿರಾಶ್ರಿತ ಕಾಶ್ಮೀರಿ ಪಂಡಿತರು ಶುಕ್ರವಾರ ಕೇಂದ್ರವನ್ನು ಒತ್ತಾಯಿಸಿದ್ದಾರೆ.
ಯಾವುದೇ ಸರ್ಕಾರಿ ನೌಕರರು ಇಲ್ಲದ ಕಾಶ್ಮೀರಿ ಪಂಡಿತ ಕುಟುಂಬಗಳು ಕಳೆದ ಒಂದು ದಶಕದಿಂದ ತಿಂಗಳಿಗೆ 13,000 ರೂ.ಗಳನ್ನು ಪಡೆಯುತ್ತಿದೆ. ಈ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಅಲ್ಲದೇ ಸರ್ಕಾರಿ ನೌಕರರಿರುವ ಕುಟುಂಬಗಳಿಗೆ ಅಂತಹ ಪರಿಹಾರ ಸಿಗುತ್ತಿಲ್ಲ.
”ಮುಂಬರುವ ಬಜೆಟ್ನಲ್ಲಿ ಕಾಶ್ಮೀರಿ ಪಂಡಿತ ಸಮುದಾಯಕ್ಕೆ ಪ್ರತ್ಯೇಕ ಮೊತ್ತವನ್ನು ಇಡುವಂತೆ ಕೇಂದ್ರ ಸರಕಾರವನ್ನು ಕೋರುತ್ತೇನೆ. ನಾನು ಎರಡು ವಿಷಯಗಳ ಅನುಷ್ಠಾನಕ್ಕೆ ಹಣಕಾಸು ಸಚಿವಾಲಯ ಮತ್ತು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಜಿ ಅವರನ್ನು ಒತ್ತಾಯಿಸುತ್ತೇನೆ. ಈ ಬಜೆಟ್ ಅಧಿವೇಶನದಲ್ಲಿ ಸಾಧ್ಯವಾದಷ್ಟು ಬೇಗ ಸಮುದಾಯಕ್ಕೆ ಪರಿಹಾರ ಮೊತ್ತವನ್ನು ಹೆಚ್ಚಿಸಬೇಕು” ಎಂದು ಕಾಶ್ಮೀರಿ ಪಂಡಿತ್ ಸ್ವಯಂಸೇವಕರ (ಕೆಪಿವಿ) ಮುಖ್ಯಸ್ಥ ವಿಕ್ರಮ್ ಕೌಲ್ ತಿಳಿಸಿದರು.
”ಬಿಜೆಪಿಯಿಂದ ನಮಗೆ ಹೆಚ್ಚಿನ ನಿರೀಕ್ಷೆ ಇತ್ತು. ನಾವು ಮೋದಿಯವರನ್ನು ನಮ್ಮ ಮಾರ್ಗದರ್ಶಕರಾಗಿ ನೋಡುತ್ತೇವೆ. ಆದರೂ, ಹೆಚ್ಚಳ ಇನ್ನೂ ಕಾರ್ಯರೂಪಕ್ಕೆ ಬರಬೇಕಾಗಿದೆ. ಹಿಂದಿನ ಹಂಚಿಕೆಗಳನ್ನು ಮೀರಿಸುವಂತಹ ಹೆಚ್ಚಳದ ಭರವಸೆಯನ್ನು ಈ ಬಾರಿ ನಾವು ಹೊಂದಿದ್ದೇವೆ” ಎಂದು ಕೌಲ್ ಹೇಳಿದರು.
‘ಕಾಶ್ಮೀರದಲ್ಲಿ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಕನಿಷ್ಠ 5,000 ಯುವಕರಿಗೆ ಉದ್ಯೋಗಗಳನ್ನು ಒದಗಿಸುವುದು ಎರಡನೆಯ ಬೇಡಿಕೆಯಾಗಿದೆ” ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.