ನವದೆಹಲಿ: 14 ಜನರನ್ನು ಹೊತ್ತ ಬರ್ಮಾದ ಸೇನಾ ವಿಮಾನವು ಇಂದು ಈಶಾನ್ಯ ರಾಜ್ಯವಾದ ಮೀಜೋರಾಂನ ಲೆಂಗ್ಪುಯಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.
ಮಿಜೋರಾಂ ಡಿಜಿಪಿಯಿಂದ ನೀಡಿದ ಮಾಹಿತಿಯ ಪ್ರಕಾರ, ಬರ್ಮಾ ಸೇನಾ ವಿಮಾನವು ಚಿಕ್ಕದಾಗಿದ್ದು, ಪೈಲಟ್ ಸೇರಿ 14 ಜನರು ವಿಮಾನದಲ್ಲಿದ್ದರು. 14 ಜನರಲ್ಲಿ ಆರು ಮಂದಿಗೆ ಗಾಯಗಳಾಗಿದ್ದು, ಎಂಟು ಮಂದಿ ಸುರಕ್ಷಿತವಾಗಿದ್ದಾರೆ ಎಂದು ಡಿಜಿಪಿ ತಿಳಿಸಿದ್ದಾರೆ.
ಜನಾಂಗೀಯ ಬಂಡುಕೋರ ಗುಂಪಿನೊಂದಿಗಿನ ಗುಂಡಿನ ಚಕಮಕಿಯ ನಡುವೆ ಕಳೆದ ವಾರ ಮಿಜೋರಾಂಗೆ ಪಲಾಯನ ಮಾಡಿದ 184 ಮ್ಯಾನ್ಮಾರ್ ಸೈನಿಕರನ್ನು ಭಾರತ ಸೋಮವಾರ ಅವರ ಸ್ವಂತ ದೇಶಕ್ಕೆ ಕಳುಹಿಸಿದೆ. ಇದನ್ನು ಖಚಿತಪಡಿಸಿರುವ ಅಸ್ಸಾಂ ರೈಫಲ್ಸ್ ಅಧಿಕಾರಿಯೊಬ್ಬರು, ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಈಶಾನ್ಯ ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂದು ಹೇಳಿದ್ದಾರೆ.
ಸೈನಿಕರನ್ನು ಮ್ಯಾನ್ಮಾರ್ ವಾಯುಪಡೆಯ ವಿಮಾನಗಳಲ್ಲಿ ಲೆಂಗ್ಪುಯಿ ವಿಮಾನ ನಿಲ್ದಾಣದಿಂದ ರಾಖೈನ್ ರಾಜ್ಯದ ಸಿಟ್ವೆಗೆ ಕರೆದೊಯ್ಯಲಾಗಿದೆ. ಉಳಿದ 92 ಸೈನಿಕರನ್ನು ಇಂದು ಸ್ವದೇಶಕ್ಕೆ ಕಳುಹಿಸಲು ಉದ್ದೇಶಿಸಲಾಗಿತ್ತು. ಈ ಕಾರ್ಯಕ್ಕಾಗಿ ಬಂದ ವಿಮಾನ ಪತನಗೊಂಡಿದೆ.
#Myanmar army plane crash lands in #MizoramAirport, eight injured
Six people were injured after a plane from the Burmese Army crashed at Lengpui airport. 14 people were on board with the pilot. The injured were admitted to Lengpui Hospital according to Mizoram DGP#planecrash pic.twitter.com/TKWU8VfYUx
— Voice of Assam (@VoiceOfAxom) January 23, 2024
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.